ಮಾನಸಿಕ ಒತ್ತಡ ನಿವಾರಣೆಗೆ ಯೋಗ ಸಹಕಾರಿ


ಸಂಜೆವಾಣಿ ವಾರ್ತೆ
ಸಂಡೂರು : ಜೂ:23  ಮಾನಸಿಕ ಒತ್ತಡಗಳ ಸಂದರ್ಭದಲ್ಲಿ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಭಾರತೀಯ ಪರಂಪರೆಯಲ್ಲಿ ಯೋಗ ತನ್ನದೇ ಆದ ವೈಶಿಷ್ಠ್ಯ ರೂಡಿಸಿಕೊಂಡಿದ್ದು ಉತ್ತಮ ಬೆಳವಣಿಗೆಯಾಗಿದೆ. ಯೋಗಾಭ್ಯಸವನ್ನು ನಾವೇಲ್ಲಾರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಯೋಗದಲ್ಲಿ ರಾಜಯೋಗ ಪ್ರಾಣಾಯಾಮ ಸೂರ್ಯ ನಮಸ್ಕಾರ ಹಠಯೋಗ, ಹೀಗೆ ವಿವಿಧ ರೀತಿಯ ಯೋಗಗಳಿದ್ದು, ಗುರುವಿನ ಮಾರ್ಗದರ್ಶನದಂತೆ ಸಾಧನೆಯ ಮೂಲಕ ಪ್ರತನಿತ್ಯ ಬದುಕಿನ ಜೀವನದಲ್ಲಿ ಅಳವಡಸಿಕೊಳ್ಳಬೇಕಾಗಿದೆ. ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗಲು ಸಾಧ್ಯ. ಜೂನ್ 21ನೇ ತಾರಿಕಿಗೊಂದೇ ಯೋಗ ಕರ್ಯಕ್ರಮ ಮೀಸಲಾಗಿಡದೇ ನಿರಂತರವಾಗಿ ನಡೆಯಬೇಕಾಗಿದ್ದು, ಯೋಗ ಆಚರಣೆ ನಿಂತ ನೀರಾಗದೇ ಹರಿವ ನೀರಾಗಬೇಕಾಗಿದ್ದು, ಪ್ರತಿವೋರ್ವರು ಯೋಗವನ್ನು ಪ್ರತಿನಿತ್ಯ ಆಚರಣೆಗೆ ತರುವ ಮೂಲಕ ಬದುಕಿನ ಜೀವನದುದ್ದಕ್ಕೂ ಕೃಪಾ ನಿಲಯ ಪ್ರೌಢಶಾಲೆಯ ಮುಖ್ಯ ಗುರು ಸಿಸ್ಟರ್ ಅಂತೋನಿ ಮೇರಿಯವರು ತಿಳಿಸಿದರು.
ಅವರು ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿರುವ ಕೃಪಾ ನಿಲಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಬಗ್ಗೆ ಅರಿವು ಮೂಡಿಸಿದರು. ಅವರು ಮುಮದುರೆದು ಯೋಗಕ್ಕೆ ಜಾತಿ ವರ್ಗ ವರ್ಣ ಧರ್ಮ ಇವೆಲ್ಲವನ್ನು ಮೀರಿ ಶರಿರೀಕ್ಕೆ ಸಂಬಂಧಿಸಿದ ಅಂಶವವಾಗಿದೆ. ಈಡೀ ಜಗತ್ತಿನಲ್ಲಿ ಯೋಗಕ್ಕೆ ಮನ್ನಣೆಯಿದೆ ಎಂದು ತಿಳೀಸಿದರು.
ಕೃಪಾ ನಿಲಯ ಶಿಕ್ಷಕ ವಿ.ಎಂ. ನಾಗಭೂಷಣ ರವರು ಮಾತನಾಡಿ ಯೋಗ ಮತ್ತು ಧ್ಯಾನ ಒಂದೇ ನಾಣ್ಯದ ಎರೆಡು ಮುಖಗಳಿದ್ದಂತೆ ಯೋಗ ಮತ್ತು ರ್ಧಯಾನದಿಂದ ಏಕಾಗ್ರೆತೆ ಬರಲು ಸಾಧ್ಯ. ಹಿಂದಿನ ಕಾಲದಲಿ ಋಷಿ ಮುನಿಗಳು ಯೋಗ ದ್ಯಾನದ ಮೂಲಕ ತಮ್ಮ ಆರೋಗ್ಯ ಮೂಲಕ ಕಾಪಾಡಿಕೊಳ್ಳುವುದರ ಜೊತೆಗೆ ಯೋಗ ಮತ್ತು ಧ್ಯಾನದಿಂದ ಎಲ್ಲವನ್ನು ಜಯಿಸಲು ಸಾಧ್ಯ. ಆದರೆ ಈಗಿನ ಕಾಲದ್ಲಿ ಮನುಷ್ಯದಲ್ಲಿ ಜಂಜಾಟದ ಬದುಕಿನಲ್ಲಿ ಅನಾರೋಗ್ಯ ಹೊಂದುತ್ತಿರುವುದನ್ನು ನಾವು ಕಾಣುತ್ತೇವೆ ಎಂದು ತಿಳಿಸಿದರು.
ಕೃಪಾ ನಿಲಯದ ದೈಹಿಕ ಶಿಕ್ಷಕರಾದ ಮಲ್ಲಮ್ಮ ನವರು ಮಕ್ಕಳೀಗೆ ಯೋಗಾಸನದ ಮಹತ್ವವನ್ನ ವಿವರಿಸಿದರು. ಶಿಕ್ಷಕರಾದ ಎನ್. ಬಸವರಾಜ ಚಂದ್ರಹಾಸ ಸಿಸ್ಟರ್‍ಗಳಾದ ಥಾಮಸ್ ಸಹನಾ ಅಲ್ಲದೇ ಹಲವಾರು ಶಿಕ್ಷಕ ಶಿಕ್ಷಕಿಯರು ಯೋಗ ಕಾಯ್ಕ್ರಮದಲ್ಲಿ ಉಪಸ್ಥಿತರಿದ್ದರು.