ಮಾನಸಿಕ ಒತ್ತಡ ನಿವಾರಣೆಗೆ ಬ್ಯಾಡ್ಮಿಂಟನ್ ಉತ್ತಮ – ಬೆಲ್ಲಂ ಕಿರಣ್

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಬ್ಯಾಡ್ಮಿಂಟನ್ ಪಂದ್ಯಾವಳಿ
ರಾಯಚೂರು.ನ.೧೩- ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪತ್ರಕರ್ತರಿಗೆ ಆಯೋಜಿಸಿದ್ದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮಾಜಿ ಅಥ್ಲೀಟ್ ಪಟು ಹಾಗೂ ರಾಯಚೂರು ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಬೆಲ್ಲಂ ಕಿರಣ್ ಚಾಲನೆ ನೀಡಿದರು.
ನಗರದ ಲೋಕಾಯುಕ್ತ ಕಚೇರಿಯಲ್ಲಿನ ಶೆಟಲ್ ಬ್ಯಾಡ್ಮಿಂಟನ್ ಅಂಕಣದಲ್ಲಿ ಶೆಟಲ್ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಾನಸಿಕ ಒತ್ತಡ ನಿವಾರಣೆಗೆ ಶೆಟಲ್ ಬ್ಯಾಡ್ಮಿಂಟನ್ ಉತ್ತಮ ಎಂದು ಹೇಳಿ ಪತ್ರಕರ್ತರ ಶೆಟಲ್ ಬ್ಯಾಡ್ಮಿಂಟನ್ ಆಟದ ಉತ್ಸಾಹಕ್ಕೆ ತಾವು ಸದಾ ಕಾಲ ಬೆಂಬಲ, ಸಹಕಾರ ನೀಡುವುದಾಗಿ ತಿಳಿಸಿದರು.
ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ್ ಜಾಗಟಗಲ್, ಶೆಟಲ್ ಬ್ಯಾಡ್ಮಿಂಟನ್ ಉಸ್ತುವಾರಿ ದುರ್ಗೇಶ್, ಎಂ.ಪಾಷಾ ಸೇರಿದಂತೆ ಹಿರಿಯ ಮತ್ತು ಕಿರಿಯ ಪತ್ರಕರ್ತರು ಹಾಜರಿದ್ದರು. ೨೫ ಕ್ಕೂ ಹೆಚ್ಚು ಪತ್ರಕರ್ತರು ಎರಡು ಗುಂಪುನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ನಿರ್ಣಾಯಕರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರಾದ ಮಲ್ಲಪ್ಪ, ನರಸರೆಡ್ಡಿ ಪಾಲ್ಗೊಂಡಿದ್ದರು.