ಮಾನಸಿಕ ಒತ್ತಡಕ್ಕೆ ಒಳಗಾಗದೇ ಕಾರ್ಯನಿರ್ವಹಿಸಲು ಪೊಲೀಸ್‍ರಿಗೆ ಎಸ್.ಪಿ.ವೇದಮೂರ್ತಿ ಕರೆ

ಯಾದಗಿರಿ:ಜು.17:ನಾವೆಲ್ಲರೂ ಕಾನೂನಿನ ಪ್ರಕಾರ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆ ಹೊರತು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದೆ ಹಾಗೂ ಕೋಪವನ್ನು ಇನ್ನೊಬ್ಬರ ಮೇಲೆ ತೋರಿಸದಂತೆ ಕರ್ತವ್ಯ ನಿರ್ವಹಿಸಬೇಕೆಂದು ಯಾದಗಿರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸಿ ಬಿ ವೇದಮೂರ್ತಿ ಹೇಳಿದರು.

ಯಾದಗಿರಿ ಜಿಲ್ಲಾ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಕಾಮರೆಡ್ಡಿ ಆಸ್ಪತ್ರೆ ಕಲಬುರ್ಗಿ ವತಿಯಿಂದ ಯಾದಗಿರಿ ಜಿಲ್ಲಾ ಪೆÇಲೀಸ್ ಕಚೇರಿಯಲ್ಲಿ ಆಯೋಜಿಸಿದ್ದ ಒತ್ತಡ ಮುಕ್ತ ಮನಸ್ಸು ರೋಗ ಮುಕ್ತ ದೇಹ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಹದ ಬಲಭಾಗಕ್ಕೆ ನಿರಂತರ ಕೆಲಸ ಕೊಟ್ಟಂತೆ ಎಡ ಭಾಗದ ಕೈ ಕಾಲು ಅಂಗಾಂಗಗಳಿಗೂ ಕೆಲಸವನ್ನು ನೀಡಬೇಕು. ಇದರಿಂದ ಬಲ ಹಾಗೂ ಎಡಮೆದುಳಿನ ನರತಂತುಗಳ ವ್ಯವಸ್ಥೆಯಲ್ಲಿ ಸಾಮರಸ್ಯ ಉಂಟಾಗುತ್ತದೆ. ಇದರಿಂದ ನಮ್ಮ ಮೆದುಳಿನ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ.ಸದಾ ನಮ್ಮ ದೇಹವನ್ನು ಕ್ರಿಯಾತ್ಮಕ ಚಟುವಟಿಕೆಗಳಿಂದ ಇಟ್ಟುಕೊಳ್ಳಬೇಕು. ನಮ್ಮ ಮಕ್ಕಳಿಗೂ ನಾವು ಸಮಯ ಮೀಸಲಿಟ್ಟು ಅವರಿಗೂ ಈ ಕುರಿತು ಅರಿವು ಮೂಡಿಸಬೇಕು. ನಮ್ಮ ಕುಟುಂಬದೊಂದಿಗೆ ಮತ್ತು ನಾಗರಿಕರೊಂದಿಗೆ ಅತ್ಯಂತ ಸಂಯಮ ಹಾಗೂ ಪ್ರೀತಿಯಿಂದ ವರ್ತಿಸಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಎಸ್ ಬಿ ಕಾಮರೆಡ್ಡಿ, ಪೆÇೀಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಕಾರ್ಯದಲ್ಲಿ ಸದಾ ಒತ್ತಡವಿರುತ್ತದೆ. ಪೆÇೀಲಿಸ್ ಸಿಬ್ಬಂದಿಗಳು ವೃತ್ತಿಯಲ್ಲಿರುವಾಗಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮುಂಜಾಗ್ರತೆಯಿಂದ ಇರಬೇಕು. ಪೆÇಲೀಸರು ಸ್ವಸ್ತವಾಗಿದ್ದರೆ ನಾಗರಿಕರು ಸುರಕ್ಷತೆಯಿಂದ ಇರಲು ಸಾಧ್ಯವಾಗುತ್ತದೆ. ಒತ್ತಡಕ್ಕೊಳಗಾದಾಗ ದೇಹ ಹಲವು ರೋಗಗಳಿಗೆ ತುತ್ತಾಗುವ ಅಪಾಯವಿದೆ.ಪೆÇಲೀಸ್ ಸಿಬ್ಬಂದಿಗಳು ಮಾನಸಿಕ ಒತ್ತಡ ಮುಕ್ತ ಜೀವನ ರೂಪಿಸಿಕೊಳ್ಳುವುದರ ಕುರಿತು ಕಾರ್ಯಗಾರ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ. ಈ ನಿಟ್ಟಿನಲ್ಲಿ ಒತ್ತಡ ನಿರ್ವಹಣೆ ಶಾಸ್ತ್ರ ಹಾಗೂ ಒತ್ತಡದ ಬಗೆಗಿನ ತಪ್ಪು ಪರಿಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳಲು ಈ ಕಾರ್ಯಗಾರ ಪೆÇಲೀಸ್ ಸಿಬ್ಬಂದಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ನುಡಿದರು. ಕಾರ್ಯಾಗಾರದಲ್ಲಿ ಬೆಂಗಳೂರಿನ ಮನೋತಜ್ಞ ಭುಜಬಲಿ ಬೋಗಾರ್ ಪ್ರಾಯೋಗಿಕ ತರಬೇತಿ ನೀಡಿ ಮಾತನಾಡಿದ ಅವರು,ಆಲೋಚನಾ ಕ್ರಮಗಳ ಬಗ್ಗೆ ಜಾಗೃತಿ ಹೊಂದಿದರೆ ಬಿಪಿ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್,ಹೃದಯ ಸಂಬಂಧಿ ರೋಗಗಳನ್ನು ನಮ್ಮ ಕುಟುಂಬ ಸದಸ್ಯರ ಸುತ್ತ ಸುಳಿಯದಂತೆ ನೋಡಿಕೊಳ್ಳಬಹುದು. ಕೆಲಸವನ್ನು ಇಷ್ಟಪಟ್ಟು ಮಾಡಿದರೆ ಆ ಕೆಲಸ ಎಷ್ಟೇ ಕಷ್ಟಕರವಾಗಿದ್ದರು ಅದರಲ್ಲಿ ಆನಂದ ತೃಪ್ತಿ ಸಿಗುತ್ತದೆ. ನಾವು ಮಾಡುವ ಕಾರ್ಯದಲ್ಲಿ ನಮಗೆ ನಿರಾಸಕ್ತಿ ದುಃಖ ಉಂಟಾದರೆ ಅದರಿಂದ ಅನಾರೋಗ್ಯಕ್ಕೆ ನಾವೇ ಆಹ್ವಾನ ನೀಡಿದಂತಾಗುತ್ತದೆ. ನಮ್ಮ ನಕರಾತ್ಮಕ ಆಲೋಚನೆಗಳೇ ನಮ್ಮ ಮೆದುಳಿನಲ್ಲಿ ವಿಷಕ್ಕೆ ಸಮನಾದ ರಾಸಾಯನಿಕವನ್ನು ಬಿಡುಗಡೆಯಾಗುವಂತೆ ಮಾಡುತ್ತವೆ.ಅದಕ್ಕಾಗಿ ಸಕಾರಾತ್ಮಕ ಆಲೋಚನೆಗಳು ಸದ್ಭಾವನೆಯ ಮನೋಭಾವದ ಧೋರಣೆಗಳು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಡುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ಯಾದಗಿರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸಿ ಬಿ ವೇದಮೂರ್ತಿ, ಆರ್ ಪಿ ಐ ಲಚ್ಚಪ್ಪ ಚೌಹಾಣ್, ಡಾ ಎಸ್ ಬಿ ಕಾಮರೆಡ್ಡಿ, ನಾನಾ ಪೆÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.