ಮಾನಸಿಕ ಆರೋಗ್ಯ ದಿನಾಚರಣೆ

ಬೀದರ:ಫೆ.9:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ ಶಿಶು ಅಭಿವೃದ್ಧಿ ಯೋಜನೆ ಬೀದರ, ತಾಲೂಕು ಪಂಚಾಯತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೆÇೀಲಿಸ್ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಆಣದೂರು ವಲಯದ ಸರಿಕಾರಿ ಪಾಥಮಿಕ ಶಾಲೆ ನೌಬಾದನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಕಾರ್ಯಕ್ರಮ ಯೋಜನೆಯಡಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿರುತ್ತದೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಸುಧಾ ಮಾನ್ಯ ಮುಖೋಪಾಧ್ಯಾಯರು, ಸರಕಾರಿ ಪ್ರಾಥಮಿಕ ಶಾಲೆ ನೌಬಾದ ರವರು ವೈಕ್ತಿಯ ಮಾನಸಿಕ ಯೋಗಕ್ಷೇಮದ ಪ್ರಾಮುಖ್ಯತೆ ಮತ್ತು ಮಾನಸಿಕ ಆರೋಗ್ಯವನ್ನು ಒಳ್ಳೆ ರೀತಿಯಿಂದ ಕಾಪಾಡಿಕೊಳ್ಳುವುದು ಎಂದು ತಿಳಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಶ್ರೀಯುತ ಶಿವಕುಮಾರ ಅಜಿಮ್ ಪ್ರೇಮಜಿ ಫೌಡೇಷನ್ ರವರು ನಮ್ಮ ದೈಹಿಕ ಕಾರ್ಯಗಳಿಗೆ ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
ಅದೇ ರೀತಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಎನ್ ಕಲ್ಮಲಕರ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭಾಗವಹಿಸಿ, ಮಾನಸಿಕ ಆರೋಗ್ಯ ಸಮಸ್ಯಗಳು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ದೈಹಿಕ ಆರೋಗ್ಯ ಮತ್ತು ವ್ಯಕ್ತಿಗಳ ಜೀವನೋಪಾಯದ ಮೇಲೂ ಪರಿಣಾಮ ಬೀಡುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಪಂಚದಾದ್ಯಂತ 08 ಜನರಲ್ಲಿ ಒಬ್ಬರು ಮಾನಸಿಕ ಆರೋಗ್ಯದ ಸಮಸ್ಯಗಳನ್ನು ಅನುಭವಿಸುತ್ತಿದ್ದಾರೆ ಅದನ್ನು ಆದಸ್ಟು ಕಡಿಮೆ ಮಾಡುವುದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿಯವರಾದ ಶ್ರೀಮತಿ ಪ್ರೇಮಲತಾ ಕಾಳೆಕರ ಸ್ವಾಗತ ಮಾಡಿದರು, ಶ್ರೀಮತಿ ಮಹಾನಂದಾದೇವಿ ನಾಶೆ ಹಿರಿಯ ಮೇಲ್ವಿಚಾರಕಿಯವರು ನಿರೂಪಣೆ ಮಾಡಿದರೆ ವಂದನಾರ್ಪಣೆಯನ್ನು ಶ್ರೀಮತಿ ಸುರೇಖಾಬಾಯಿ ನೇರವೆರಿಸಿದರು. ಶಿಶು ಅಭಿವೃದ್ಧಿ ಯೋಜನೆಯ ಶ್ರೀಮತಿ ವಿಜಯಲಕ್ಷಿ?? ಆರ್. ಅಂಬಾಟೆ ಮೇಲ್ವಿಚಾರಕಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶ್ರೀಮತಿ ಸುರೇಖಾ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳಿಯ ಮಹಿಳೆಯರು ಭಾಗವಹಿಸಿದರು.