
ಸಂಜೆವಾಣಿ ವಾರ್ತೆಸಿರುಗುಪ್ಪ, ಆ.29: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಮಾನಸಿಕ ಆರೋಗ್ಯ ಕಾರ್ಯಕ್ರಮ ಕುರಿತು ಒಂದು ದಿನದ ತರಬೇತಿ ಕಾರ್ಯಗಾರ ಸಿರುಗುಪ್ಪ ನಗರದ ವೈಷ್ಣವಿ ಹೋಟೆಲಿನಲ್ಲಿ ಡಿ ವೈ ಎಸ್ ಪಿ ವೆಂಕಟೇಶ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಟೆಲಿ ಮನಸ್ ಶುಲ್ಕ ರಹಿತ ದೂರವಾಣಿ ಸಂಖ್ಯೆ 14416 ಎಂಬ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಅನಾವರಣಗೊಳಿಸಲಾಯಿತು.ಟೆಲಿ ಮನಸ 14416 ದೂರವಾಣಿ ಕರೆಗೆ ಈ ಕೆಳಗಿನವರು ಕರೆ ಮಾಡಬಹುದು, ವ್ಯಥೆಗೆ ಒಳಗಾದವರು, ಒತ್ತಡಕ್ಕೆ ಒಳಗಾದವರು, ಕೌಟುಂಬಿಕ ಸಮಸ್ಯೆಗಳಿಗೆ ಒಳಗಾದವರು, ಆತ್ಮ ಹತ್ಯೆ ಆಲೋಚನೆ, ಮಾದಕ ವಸ್ತು ವ್ಯಸನ ಸಮಸ್ಯೆ, ಸಂಬಂಧಗಳ ಸಮಸ್ಯೆ, ಜ್ಞಾಪಕ ಶಕ್ತಿ ತೊಂದರೆ, ಆರ್ಥಿಕ ಒತ್ತಡ ಇತರ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಯಾಗಿರು ವ್ಯಕ್ತಿಗಳಿಗಾಗಿ.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶಾಂತ ಕುಮಾರ್ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ನಿರೀಕ್ಷಕ, ಕಾವ್ಯ ಮಾನಸಿಕ ತಜ್ಞರು, ರಂಜಿತ ಸ್ಟಾಫ್ ನರ್ಸ್ ಹಾಗೂ ಬಿಹೆಚ್ಈಓ ಮೊಹಮ್ಮದ್ ಖಾಸಿಂ, ಬಿಪಿಎಂ ಪ್ರಹಲ್ಲಾದ್, ಪೋಲಿಸ್ ಇಲಾಖೆಯ ಸಿಪಿಐ ಸುಂದರೇಶ್, ಎ ಎಸ್ ಐಗಳಾದ ಕುಮಾರಸ್ವಾಮಿ, ಮೊಹಮ್ಮದ್ ಯೂನುಸ್ ಇದ್ದರು.
One attachment • Scanned by Gmail