ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ

ಬೀದರ:ಜೂ.10: ಭಾಲ್ಕಿ ತಾಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದಿಂದ ಜೂನ್ 8ರಂದು ಮಾನಸಿಕ ಅಸ್ವಸ್ಥರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಹಾಗೂ ಕೋವಿಡ್-19 ಲಸಿಕಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಶ್ರೀಯುತ ಗೌರವಾನ್ವಿತ ಟಿ.ಪಿ.ಸಿದ್ರಾಮ. ಅವರು ಮಾತನಾಡಿ, ಮಾನಸಿಕ ಅಸ್ವಸ್ಥರು ಸಹ ಕೋವಿಡ್-19 ಲಸಿಕೆ ಪಡೆದು ಸಾಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು. ಸಮುದಾಯದಲ್ಲಿ ಪ್ರತಿಯೊಬ್ಬರು ಕೋವಿಡ್-19 ಮಹಾಮಾರಿಗೆ ಹೆದರದೆ ಸಕಾಲಕ್ಕೆ ಚಿಕಿತ್ಸೆ ಪಡೆದು ಆರೋಗ್ಯದಿಂದಿರಬೇಕು ಎಂದು ತಿಳಿಸಿದರು.
ಶ್ರೀಯುತ ಮಲ್ಲಿಕಾರ್ಜುನ ಅಂಬಲಿ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಜೆ.ಎಮ್.ಎಫ್.ಸಿ ಭಾಲ್ಕಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳ ಜೊತೆಗೆ ಸಾಮಾಜಿಕ ನೈತಿಕ ಬೆಳೆವಣೆಗೆಗೆ ಒತ್ತು ಕೊಡಬೇಕು. ಈ ದಿನಗಳಲ್ಲಿ ಮಾನಸಿಕವಾಗಿ ಆರೋಗ್ಯದಿಂದ ಇರಲು ಧ್ಯಾನ, ಯೋಗ, ಪ್ರಾಯಾಣಾಮ ತುಂಬಾ ಅವಶ್ಯಕ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯರಾದ ಡಾ.ಅಭಿಜೀತ ಎಸ್.ಪಾಟೀಲ್ ಅವರು ಮಾತನಾಡಿ, ಬಹಳಷ್ಟು ಜನರು ಈಗ ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅಂತಹ ಒತ್ತಡದ ಬದುಕಿನಿಂದ ಹೊರ ಬರಬೇಕು ಎಂದು ತಿಳಿಸಿದರು.
ಡಾ.ಎಮ್ ಡಿ ಖಾದರ್ ಮುಖ್ಯಾವೈದ್ಯಾಧಿಕಾರಿಗಳು ಸರಕಾರಿ ಸಾರ್ವಜನಿಕ ಆಸ್ಪತ್ರೆ ಭಾಲ್ಕಿ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಬಿರಾದಾರ ಅಧಿಕಾರಿಗಳು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೀದರ, ಶ್ರೀಯುತ ಪ್ರಶಾಂತ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ಭಾಲ್ಕಿ., ಡಾ.ರವಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಎಲ್ಲಾ ಸಿಬ್ಬಂದಿ ಇದ್ದರು.
ರಾಜಕುಮಾರ ಔಷಧಿ ವಿತರಕರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಭಾಲ್ಕಿ ಅವರು ನಿರೂಪಿಸಿದರು. ಶ್ರೀ ಮಲ್ಲಿಕಾರ್ಜು ಗುಡ್ಡೆ ಮನೋತಜ್ಞರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಬೀದರ ಸ್ವಾಗತಿಸಿದರು. ರಾಜಕುಮಾರ ಪರಶುರಾಮ ವಂದಿಸಿದರು.