ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು


ಧಾರವಾಡ, ಮೇ.24: ಮಾನಸಿಕ ಕಾಯಿಲೆಗಳ ಬಗ್ಗೆ ಮನೋವೈದ್ಯರ ಬಳಿ ಚರ್ಚಿಸಿ, ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು. ಸಾರ್ವಜನಿಕರು ಇಂದಿನ ದಿನಮಾನಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಮತ್ತು ಒಳ್ಳೆಯ ಹವ್ಯಾಸಗಳನ್ನು ಜನರು ಅನುಸರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಹೇಳಿದರು.
ಅವರು ನಗರದ ಡಿಮ್ಹಾನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಸ್ಕಿಜೋಫ್ರೆನಿಯಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಸ್ಕಿಜೋಫ್ರೇನಿಯಾ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಬಾರದು. ಮನೋವೈದ್ಯರ ಮಾರ್ಗದರ್ಶವನ್ನು ಸರಿಯಾದ ಸಂದರ್ಭದಲ್ಲಿ ಪಡೆದುಕೊಂಡು, ಬೇಕಾದ ರೋಗಿಗಳಿಗೆ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಸ್ಕಿಜೊಫ್ರೇನಿಯಾ ಕಾಯಿಲೆ ಬಗ್ಗೆ ಅರ್ಥಮಾಡಿಕೊಂಡು ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ದೊರಕುವಲ್ಲಿ ನೆರವಾಗಬೇಕು. ಎಲ್ಲರೂಕೂಡಿ ಕೆಲಸ ಮಾಡಿದಾಗ ಸಮುದಾಯದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.
ಬೆಳಗಾವಿ ಮತ್ತು ಕಲಬುರಗಿಯ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿ ಅಧ್ಯಕ್ಷರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ಆರ್.ರೇಣಕೆ ಅವರು ಮಾತನಾಡಿ, ವಿಶ್ವ ಸ್ಕಿಜೋಫ್ರೆನಿಯಾ ಎಂಬುವುದು ಒಂದು ಮಾನಸಿಕ ಕಾಯಿಲೆ ಯಾಗಿದ್ದು, ಇದು ಸುಮಾರು 300 ಜನರಲ್ಲಿ ಒಬ್ಬರಿಗೆ ಕಂಡು ಬರುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಗುಣಮುಖರಾಗುವದು ಅತೀ ವಿರಳವಾಗಿದ್ದು, ಮಾನಸಿಕ ಆರೋಗ್ಯ ಕಾಳಜಿ ಕಾಯಿದೆ 2017 ರ ಮಹತ್ವದ ಬಗ್ಗೆ ಅವರು ತಿಳಿಸಿದರು.
ಸ್ಕಿಜೋಫ್ರೆನಿಯಾ ಕಾಯಿಲೆಯು ಮಧ್ಯ ವಯಸ್ಕರರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಇದಕ್ಕೆ ಹಲವಾರು ಕಾರಣಗಳು ಇವೆ ಆಸೆ, ಆಕಾಂಶೆ, ಪೆÇೀ?Àಕರು ಮಕ್ಕಳ ಮೇಲೆ ಅತೀಯಾದ ಒತ್ತಡ ಹಾಕುವುದು, ಕುಟುಂಬ, ಶಿಕ್ಷಣ, ಉದ್ಯೋಗ ಮುಂತಾದವುಗಳು ಮಾನಸಿಕ ಸ್ವಾಸ್ತೆ ಚಿಂತೆಮಾಡುವ ಮೂಲಕ ವ್ಯಕ್ತಿಯು ಈ ಕಾಯಿಲೆಗೆ ತುತ್ತಾಗುತ್ತಾನೆ. ಸ್ಕಿಜೋಫ್ರೆನಿಯಾ ಕಾಯಿಲೆಯಿಂದ ಯಾವ ರೀತಿಯಲ್ಲಿ ಹೊರ ಬರುವುದು ಎಂಬುದನ್ನು ಕುಟುಂಬ ಮತ್ತು ಸಮಾಜವು ಒಂದು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.
ಜೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಎಸ್.ವಿ.ವಾಯ್.ಎಮ್ ನಿರ್ವಹಣಾ ಸಮಿತಿ ಸದಸ್ಯ ಡಾ. ಎಸ್.ಎನ್.ಹೆಗಡೆ ಅವರು ಮಾತನಾಡಿ, ಖಾಯಿಲೆಗಳಲ್ಲಿ ಎರಡು ವಿದಗಳನ್ನಾಗಿ ಮಾಡಲಾಗಿದೆ ಒಂದು ಮಾನಸಿಕ ಖಾಯಿಲೆ ಮತ್ತು ದೈಹಿಕ ಖಾಯಿಲೆಗಳನ್ನಾಗಿ ವಿಂಗಡಣೆ ಮಾಡಲಾಗಿದೆ, ಈ ಎರಡೂ ಕಾಯಿಲೆಗಳಲ್ಲಿ ಅತೀ ಹೆಚ್ಚು ಪರಿಣಾಮಕಾರಿಯಾದ ಕಾಯಿಲೆ ಅಂದರೆ ಅದು ಮಾನಸಿಕ ಕಾಯಿಲೆ ಎಂದು ಅವರು ಹೇಳಿದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಿಮಾನ್ಸ್ ನೀರ್ದೇಶಕ ಡಾ. ಅರುಣಕುಮಾರ ಸಿ ಅವರು ಮಾತನಾಡಿ, ಕೆಲವು ಸಂಭಾವನೀಯ ವಿಷಯಗಳು ಮತ್ತು ಅಂಶಗಳು ಸ್ಕಿಜೋಫ್ರೆನಿಯಾ ಕಾಯಿಲೆಗೆ ಸೇರಿವೆ. ಮುಂದಿನ ದಿನಮಾನಗಳಲ್ಲಿ ಈ ಕಾಯಿಲೆ ಹೆಚ್ಚಿನ ಸ್ಥಿತಿಯಲ್ಲಿ ಕಂಡುಬರಬಹುದು. ಭಾರತದಲ್ಲಿ ರೋಗದ ಅಂಕಿಅಂಶದ ಬಗ್ಗೆ ಬೆಂಗಳೂರಿನ ನಿಮ್ಯಾನ್ಸ್ ಸಂಸ್ಥೆಯಲ್ಲಿ ಮಾಡಿರುವ ಸಂಶೋಧನೆಯ ಬಗ್ಗೆ ಅವರು ತಿಳಿಸಿದರು.
ಸ್ಕಿಜೋಫ್ರೆನಿಯಾ ಕಾಯಿಲೆಗೆ ಕಾರಣ, ಲಕ್ಷಣ ಹಾಗೂ ಅದಕ್ಕೆ ಚಿಕತ್ಸೆಯ ಸೌಲಭ್ಯಗಳ ಬಗ್ಗೆ ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ಅಂಗವಾಗಿ ಸಿದ್ದಪಡಿಸಿದ್ದ ಭಿತ್ತಿ ಪತ್ರಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಪರಶುರಾಮ ಏಫ್ ಕೆ., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಮಂಜುನಾಥ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ರವೀಂದ್ರ ಬೊವೇರ, ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್., ಧಾರವಾಡ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಅಶೋಕ ಏಣಗಿ, ಜಿಲ್ಲಾ ಐ.ಇ.ಸಿ ಅಧಿಕಾರಿ ಬಿ.ಆರ್. ಪಾತ್ರೋಶ, ಜಿಲ್ಲಾ ಮನೋವೈದ್ಯ ತಜ್ಞರಾದ ಡಾ.ಆದಿತ್ಯ ಪಾಂಡುರಂಗಿ, ಡಾ. ಸ್ವಪ್ನಪಾಂಡುರಂಗಿ, ಡಾ.ರಂಗನಾಥ, ಡಾ. ಮಂಜುನಾಥ ಭಜಂತ್ರಿ ಅವರು ಉಪಸ್ಥಿತರಿದ್ದರು.
ಡಿಮ್ಹಾನ್ಸ್ ಸಂಸ್ಥೆಯ ಡಾ. ಸುನಂದಾ ಜಿ.ಟಿ ಅವರು ನಿರೂಪಿಸಿದರು. ನಸಿರ್ಂಗ್ ಅಧಿಕಾರಿ ಹನುಮಂತ ಮೂದೆಗೊಳ ಅವರು ಸ್ವಾಗತಿಸಿದರು. ಹಾಗೂ ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಡಾ. ಅಶೋಕ ಕೋರಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಸಿಬ್ಬಂದಿಗಳು. ಡಿಮ್ಹಾನ್ಸ್‍ನ ವಿವಿಧ ವಿಭಾಗದ ಬೋಧಕ ಹಗೂ ಬೋಧಕೇತರ ಸಿಬ್ಬಂದಿಗಳು, ಡಿಮ್ಹಾನ್ಸ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಸಿದ್ದರು.