ಮಾನಸಿಕ ಅಸ್ವಸ್ಥ ಮಹಿಳೆ ನಾಪತ್ತೆ

ಬೆಂಗಳೂರು, ನ.೨೩-ವಾಕಿಂಗ್ ಗೆ ಹೋಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಚಿಕ್ಕ ಬಾಣಸವಾಡಿಯ ಮನೆಯಿಂದ ಕಾಣೆಯಾಗಿದ್ದಾರೆ.
ಚಿಕ್ಕ ಬಾಣಸವಾಡಿಯ ೪ನೇ ಕ್ರಾಸ್ ನ ನಾಗದೇವತೆ ದೇವಾಲಯದ ಬಳಿಯ ಮನೆಯಿಂದ ಆದಿನಾರಾಯಣಮ್ಮ ಅವರು
ಕಳೆದ ನವೆಂಬರ್೧೬ ರ ಬೆಳಿಗ್ಗೆ ೭.೪೫ ಗಂಟೆಗೆ ವಾಯು ವಿಹಾರಕ್ಕೆ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಆದಿನಾರಾಯಣಮ್ಮ ಅವರಿಗಾಗಿ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಲಾಗಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಈ ಸಂಬಂಧ ಆದಿನಾರಾಯಣಮ್ಮ ಕುಟುಂಬದವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದಿನಾರಾಯಣಮ್ಮ ಅವರು ಮಾನಸಿಕ ಅಸ್ವಸ್ಥರಾಗಿದ್ದು ಅವರೇನಾದರೂ ಕಂಡುಬಂದರೆ ಬಾಣಸವಾಡಿ ಠಾಣೆ ೨೨೯೪೨೫೫೨ ಇಲ್ಲವೇ ೬೩೬೨೫೩೦೧೫೫ನ್ನು ಸಂಪರ್ಕಿಸಬಹುದು.