ಮಾನಸಿಕ ಅಸ್ವಸ್ಥತೆ ಅರಿವಿಗೆ ಅಮಿತಾಬ್ ಕಾರ್ಯಕ್ರಮ

ನವದೆಹಲಿ,ನ.೧೦-ದೇಶದಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಕಳವಳಕಾರಿಯಾಗಿ ಹೆಚ್ಚುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳಲು ಬಾಲಿವುಡ್‌ನ ಮೇರು ನಟ ಅಮಿತಾಭ್ ಬಚ್ಚನ್ ಕೈ ಜೋಡಿಸಿದ್ದಾರೆ.

ಮಾನಸಿಕ ಅನಾರೋಗ್ಯದ ಜನರು ಎದುರಿಸುತ್ತಿರುವ ಸವಾಲುಗಳು, ಸಮಾಜಕ್ಕೆ ಪರಿಹಾರ ನೀಡಲು ಯೂಟ್ಯೂಬ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಪುಟಗಳಲ್ಲಿ ಎಂಪವರ್ ಸ್ಥಾಪಕಿ ಅಧ್ಯಕ್ಷೆ ನೀರಜ್ ಬಿರ್ಲಾ ಅವರ ಜೊತೆ ಕೈ ಜೋಡಿಸಿ ಅರಿವು ಮೂಡಿಸಲು ಮುಂದಾಗಿದ್ದಾರೆ

ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಮತ್ತು ಅದರಿಂದ ಬಳಲುವ ವ್ಯಕ್ತಿಗಳನ್ನು ನೋಡಿ ನೆರವಿನ ಹಸ್ತಚಾಚಿ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲು ನೆರವಾಗುವ ಉದ್ದೇಶವೊಂದಿದ್ದಾರೆ. ಅಮಿತಾಭ್ ಬಚ್ಚನ್ ಮಾನಸಿಕ ಅನಾರೋಗ್ಯದ ಲಕ್ಷಣಗಳನ್ನು ಅರ್ಥೈಸಿಕೊಳ್ಳಲು, ಲಕ್ಷಣಗಳನ್ನು ಗುರುತಿಸುವಲ್ಲಿ ಶಿಕ್ಷಣವು ನಿರ್ವಹಿಸುವ ಮಹತ್ವದ ಪಾತ್ರದ ಕುರಿತು ಮಾತನಾಡಿದ್ದಾರೆ. ಶಾಲಾ ಮಕ್ಕಳಿನಿಂದ ಹಿಡಿದು ಕಾರ್ಪೊರೇಟ್ ವೃತ್ತಿಪರರವರೆಗೆ, ಕಲಾವಿದರಿಂದ ರಾಜಕಾರಣಗಳವರೆಗೆ ಸಹಕಾರ ನೀಡಿದ್ದಾರೆ.
ಮಾನಸಿಕ ಅನಾರೋಗ್ಯದ ಚಿಕಿತ್ಸೆಯು ದುಬಾರಿಯಾಗಿದೆಇದೇ ಕಾರಣಕ್ಕೆ ಬಹುತೇಕ ಜನರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಗೌರವ ಮತ್ತು ಘನತೆಯಿಂದ ಬದುಕುವ ಅವಕಾಶದಿಂದ ಯಾರೊಬ್ಬರೂ ವಂಚಿತರಾಗದಂತೆ ನೋಡಿಕೊಳ್ಳಲು, ಎಂಪವರ್, ತಾನು ಸಾಗಿ ಬಂದಿರುವ ಮಾರ್ಗದ ಉದ್ದಕ್ಕೂ ಸಮಾಜದ ವಿವಿಧ ವರ್ಗದ ಜನರಿಗೆ ತಿಳಿವಳಿಕೆ ನೀಡುತ್ತ ಬಂದಿರುವುದರ ಬಗ್ಗೆ ಬಿರ್ಲಾ ಹೇಳಿದ್ದಾರೆ.
ಒಂದು ತಿಂಗಳವರೆಗೆ F #SunoDekhoKaho ಪ್ರಚಾರ ಅಭಿಯಾನ ನಡೆಯಲಿದೆ. ಜನರು ಕಿವಿಗೊಟ್ಟು ಆಲಿಸಲು, ಗಮನವಿಟ್ಟು ನೋಡಲು ಮತ್ತು ನೆರವು ಪಡೆಯಲು ಮುಕ್ತವಾಗಿ ಮಾತನಾಡಲು ಈ ಪ್ರಚಾರ ಕಾರ್ಯಕ್ರಮವು ಪ್ರೇರಣೆ ನೀಡಲಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವವರು ಅದರಿಂದ ಹೊರ ಬರಲು ಮತ್ತು ಅವರಿಗೆ ಅಗತ್ಯವಾದ ಎಲ್ಲ ಬಗೆಯ ಬೆಂಬಲ ನೀಡಲಿದೆ.
೧೦ ಂಒIಖಿಊಃ ಃಂಅಅಊಂಓ