ಮಾನಸಿಕ ಅಸ್ವಸ್ಥತೆಗೆ,ಚಿಕಿತ್ಸೆ, ಪ್ರೀತಿ ವಿಶ್ವಾಸವೇ ಮದ್ದು

ಕೋಲಾರ, ಮೇ ೨೭- ಸ್ಕಿಜೋಫ್ರೀನಿಯಾ ಎಂದರೆ ಚಿತ್ತವಿಕಲತೆ ಅಥವಾ ಮನೋ ವಿಕಲ್ಪತೆ ಎಂದು ಕರೆಯಲ್ಪಡುವ, ಈ ಕಾಯಿಲೆಯನ್ನು ಸರಿಯಾದ ಸಮಯದಲ್ಲಿ ಸಾಧಾರಣ ಚಿಕಿತ್ಸೆ ನೀಡುವುದರ ಜೊತೆಗೆ ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡಿದರೆ ರೋಗದಿಂದ ಗುಣಮುಖರಾಗುತ್ತಾರೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್. ಹೊಸಮನಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಹಾಗೂ ವಕೀಲರ ಸಂಘ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಂಬಾಕು, ಗುಟಕ, ಗಾಂಜಾ, ಮದ್ಯ, ಧೂಮಪಾನ ಮುಂತಾದ ಚಟಗಳಿಗೆ ಒಳಗಾಗದೆ. ವಿದ್ಯಾರ್ಥಿ ಜೀವನವನ್ನು ಉತ್ತಮ ಚಟುವಟಿಕೆಗಳನ್ನು ಅಳವಡಿಸಿಕೊಂಡು ಸಾಗಬೇಕೆಂದರು.
ಫಲಿತಾಂಶ ಬಂದಾಗ ಕುಗ್ಗದೆ ಹಾಗೂ ತಮ್ಮ ಸುತ್ತ ಘಟನೆಗಳ ಬಗ್ಗೆ ಚಿಂತಿಸದೆ ಹಾಗೂ ಮನಸ್ಸಿಗೆ ಒತ್ತಡ ಕೊಡದೆ ಬದುಕಬೇಕೆಂದರು. ಮಾನಸಿಕ ಒತ್ತಡಕ್ಕೆ ಒಳಗಾದರೆ ಕೂಡಲೇ ಮಾನಸಿಕ ವೈದ್ಯರನ್ನು ಭೇಟಿಯಾಗುವುದು ಸೂಕ್ತ ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಗದೀಶ್ ಅವರು ಪ್ರತಿ ವರ್ಷ ಮೇ ೨೪ ರಂದು ಸ್ಕಿಜೋಫ್ರೀನಿಯ ಆಚರಣೆ ಮಾಡುತ್ತಿದ್ದು, ಸಾರ್ವಜನಿಕರಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ಮಾನಸಿಕ ಅಸ್ಥಸ್ತರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಅವರು ಸಹ ನಮ್ಮೆಲರಂತೆ ಸಮಾಜದಲ್ಲಿ ಉತ್ತಮವಾಗಿ ಜೀವನ ಮಾಡಬಹುದು ಎಂದರು. ಕೋಲಾರದ ಬೀರಂಡಹಳ್ಳಿಯಲ್ಲಿ ನಿರಾಶ್ರಿತರ ಕೇಂದ್ರವಿದ್ದು, ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಂಬಂಧಿಸಿದವರಿಗೆ ಇದರ ಪ್ರಯೋಜನ ಪಡೆಯಲು ತಿಳಿಸಬೇಕೆಂದರು. ನಿಮ್ಮ ಸುತ್ತಮುತ್ತಲು ಮಾನಸಿಕ ಅಸ್ವಸ್ತತೆಯ ವ್ಯಕ್ತಿಗಳು ಕಂಡುಬಂದಲ್ಲಿ ಸನಿಹದ ಅರಕ್ಷಕ ಠಾಣೆಯಲ್ಲಿ ಮಾಹಿತಿ ನೀಡಬೇಕೆಂದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಎನ್.ಸಿ ನಾರಾಯಣಸ್ವಾಮಿ ಮಾತನಾಡಿ, ಚಿತ್ತವಿಕಲತೆಯು ಸಾಮಾನ್ಯವಾಗಿ ನೂರರಲ್ಲಿ ಒಬ್ಬರಿಗೆ ಕಂಡುಬರುತ್ತದೆ. ಅದರಲ್ಲಿಯೂ ೧೫ ರಿಂದ ೨೫ ವಯೋಮಾನದವರಿಗೆ ಕಂಡು ಬರುವುದೇ ಹೆಚ್ಚು. ಆಫೀಮು, ಗಾಂಜಾ, ಮದ್ಯಪಾನ, ಕಳ್ಳತನ, ಲೈಂಗಿಕ ಚಟುವಟಿಕೆಗಳಲ್ಲಿ ಭಾಗವಹಿಸುವವರು ಈ ಮಾನಸಿಕ ಖಾಯಿಲೆಗೆ ಒಳಗಾಗಲು ಬಹುಮುಖ್ಯ ಕಾರಣವಾಗುತ್ತದೆ. ಈ ಕಾಯಿಲೆಯಿರುವ ರೋಗಿಯು ಊಟ ಮಾಡುವುದಿಲ್ಲ. ಮಾನಸಿಕವಾಗಿ ಕುಗ್ಗಿರುತ್ತಾರೆ. ಬೇರೆಯವರ ಜೊತೆ ಬೆರೆಯುವುದಿಲ್ಲ ಒಂಡಿಯಾಗಿಯೆ ಇರುತ್ತಾರೆ. ಸುಮ್ನೆ ನಗುವುದು ಅಥವಾ ಅಳುತ್ತಿರುತ್ತಾರೆ. ಇಲ್ಲದೇ ಇರುವುದನ್ನು ಪರಿಕಲ್ಪನೆ ಮಾಡಿಕೊಳ್ಳುತ್ತಿರುತ್ತಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ.
ಮಾನಸಿಕ ಆರೋಗ್ಯದ ಬಗ್ಗೆ ವಿಜೇತದಾಸ್ ಅವರು ಸ್ಕಿಜೋಫ್ರೀನಿಯ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮಲ್ಲಿ ವಕೀಲ ಸಂಘದ ಅಧ್ಯಕ್ಷರಾದ ಮುನೇಗೌಡ, ಎಸ್.ಡಿ.ಸಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|| ಶಿವರಾಮ್ ಪಾಟೀಲ್, ಜಿಲ್ಲಾ ಆರೋಗ್ಯ ಶಿಕ್ಷಕಿ ಪ್ರೇಮಾ, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.