ಮಾನಸಿಕ ಅಸ್ವಸ್ತನಿಗೆ ಸ್ಪಂದಿಸಿದ ದಲಿತ ಸಂಘಟನೆ ಮುಖಂಡರು

ದೇವದುರ್ಗ.ಅ.೨೮-ಪಟ್ಟಣದಲ್ಲಿ ವಾಸವಾಗಿದ್ದ ಮಾನಸಿಕ ಅಸ್ವಸ್ತ ಯುವಕನಿಗೆ ಚಿಕಿತ್ಸೆಗಾಗಿ ದಲಿತ ಸಂಘಟನೆ ಮುಖಂಡರು ಹಣ ನೀಡಿ ಮಾನವೀಯತೆ ಮೆರೆದ ಘಟನೆ ಜರುಗಿದೆ.
ಶಿವರಾಜ ತಂ.ರಾಮಪ್ಪ ಕಡುಬಡವನಾಗಿದ್ದು ಚಿಕಿತ್ಸೆ ಸ್ಥಗತಿಗೊಂಡಿರುವ ಹಿನ್ನಲೆಯಲ್ಲಿ ಹುಚ್ಚನಂತೆ ಅಲೆದಾಡುತ್ತಿದ್ದ.ಪಾಲಕರು ಬಡತನ ಇರುವದರ ಜೊತೆಗೆ ಕೊರೋನಾ ಹಾವಳಿ ಹೆಚ್ಚಾಗಿರುವದರಿಂದ ಚಿಕಿತ್ಸೆ ಕೊಡಿಸಲು ಅಸಹಾಯಕರಾಗಿದ್ದರು ಎನ್ನಲಾಗುತ್ತಿದೆ.
ವಿಷಯ ತಿಳಿದ ದಲಿತ ಸಂಘಟನೆ ಮುಖಂಡ ಬೂದೆಪ್ಪ ಕ್ಯಾದಗಿ ಬೂದಿನಾಳ ಧಾರವಾಡದಲ್ಲಿ ಚಿಕಿತ್ಸೆ ಕೊಡಿಸಲು ೫ಸಾವಿರ ಹಣವನ್ನು ಅಸ್ವಸ್ತ ಬಾಲಕನ ಪಾಲಕರಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜೊಂಡೆ,ಯಲ್ಲಪ್ಪ ಕಾಶಾಪೂರ,ಬಡಿಗೇರ ಹುಲಿಗೆಪ್ಪ ಯರಮಸಾಳ ಹಾಗೂ ಇತರರು ಇದ್ದರು.