ಮಾನಸಿಕವಾಗಿ ಸದೃಢವಾಗಲು ಯೋಗಾಸನಗಳ ಮಹತ್ವ ಅರಿಯಬೇಕು : ಡಾ. ಸಿಂಗೆ

ಅಫಜಲಪುರ:ಜೂ.22: ಮಾನಸಿಕವಾಗಿ ಸದೃಢವಾಗಲು ಎಲ್ಲರೂ ಯೋಗಾಸನಗಳ ಮಹತ್ವ ಅರಿತು ಸುಂದರ ಜೀವನ ನಡೆಸಬೇಕು ಎಂದು ಪ್ರಾಂಶುಪಾಲ ಡಾ.ಸಂಗಣ್ಣ ಎಂ. ಸಿಂಗೆ ಹೇಳಿದರು.

ತಾಲೂಕಿನ ಮಲ್ಲಾಬಾದ ಗ್ರಾಮದ ಶ್ರೀ ಹರ್ಷವರ್ಧನ ಡಿಗ್ರಿ ಕಾಲೇಜಿನ ಆವರಣದಲ್ಲಿ 9 ನೇ ಅಂತರಾಷ್ಟೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನುಷ್ಯ ಸೋಮಾರಿಯಾಗುತ್ತಿದಂತೆ ಹತ್ತು ಹಲವು ರೋಗ ರುಜಿನಗಳಿಗೆ ತುತ್ತಾಗುತ್ತಾನೆ. ಆ ಎಲ್ಲ ಕಾಯಿಲೆಗಳಿಂದ ಮುಕ್ತನಾಗಬೇಕಾದರೆ ಪ್ರತಿನಿತ್ಯ ಯೋಗಾಸನ ಮಾಡಬೇಕು. ಯೋಗಾಸನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಲ್ಲರೂ ಯೋಗಾಸನ ರೂಢಿಸಿಕೊಂಡು ರೋಗ ಮುಕ್ತ ಜೀವನ ನಡೆಸಬೇಕು ಎಂದರು.

ಶಿಕ್ಷಕ ಅಬ್ಬಾಸಲಿ ನದಾಫ್ ಹಾಗೂ ಮಲ್ಲಯ್ಯ ಮಠ ಮಾತನಾಡಿ ಮನುಷ್ಯ ನೆಮ್ಮದಿಯಿಂದ ಹಾಗೂ ಕಾಯಿಲೆಗಳಿಂದ ಮುಕ್ತವಾಗಿರಲು ಪ್ರತಿದಿನ ಯೋಗಾಸನದ ಅಭ್ಯಾಸ ರೂಢಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿಗೆ ಯೋಗಾಸನ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಈ ವೇಳೆ ಶ್ರೀ ಹರ್ಷವರ್ಧನ ಡಿಗ್ರಿ ಕಾಲೇಜು, ದೇವರಾಜ ಅರಸು ಪಿಯು ಕಾಲೇಜು, ಸಿದ್ಧಾರ್ಥ ಪ್ರೌಢ ಶಾಲೆ, ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಯೋಗಾಸನದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಯಲ್ಲಾಲಿಂಗ ಪೂಜಾರಿ, ನಿಂಗಣ್ಣ ಪೂಜಾರಿ, ಸಂಜೀವಕುಮಾರ ಟಪ್ಪಾ, ಲಾಲಬಿ ನದಾಫ್, ಶರಣು ಆಲಮೇಲ, ಅಂಕಿತಾ ಆಸಂಗಿಹಾಳ, ಬೌರಮ್ಮ ಗಂಗಾವತಿ, ಆಜ್ರಾ ಎಂ.ಪಟೇಲ್, ಬಾಬುಗೌಡ ಪಾಟೀಲ, ಮುಜಾಮಿಲ್ ಸಿಪಾಯಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.