ಮಾನಸಧಾರ  ಆರೈಕೆ  ಕೇಂದ್ರದಲ್ಲಿ  ಕನ್ನಡ ರಾಜ್ಯೋತ್ಸವ 

ದಾವಣಗೆರೆ.ನ.೨;  ನಗರದಲ್ಲಿರುವ ಮಾನಸಧಾರ ಆರೋಗ್ಯ ಕೇಂದ್ರದಲ್ಲಿ‌ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎನ್. ಮಲ್ಲೇಶಪ್ಪ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ  ಮಾಡಿದರು.ನಂತರ ಮಾತನಾಡಿದ ಅವರು ಕನ್ನಡ ನಮ್ಮ ಮಾತೃ ಭಾಷೆ ಮೊದಲು ನಾವು ಕನ್ನಡಿಗರು ನಮ್ಮ ಭಾಷೆಯ ಉಳಿವಿಗಾಗಿ ನಾವು ಶ್ರಮಿಸಬೇಕು. ಮತ್ತು ಎಲ್ಲಾ ವಿಚಾರದಲ್ಲೂ ಕೂಡ ಕನ್ನಡ ಭಾಷೆ ಮೊದಲ ಆದ್ಯತೆಯಾಗಿರಬೇಕು ಎಂದರು.. ರಾಜ್ಯ ಸರ್ಕಾರವು ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುತ್ತಿರುವುದು ಖುಷಿಯ ವಿಚಾರ ಪುನೀತ್ ರಾಜ್ ಕುಮಾರ್  ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಫಾರ್ಮಸಿ ಅಧಿಕಾರಿಗಳಾದ ಡಾ. ಶಿವಾನಂದ ದಳವಾಯಿ, ಮತ್ತು ಪ್ರಭು ಎಂ. ಕೆ ಹಾಗೂ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯದ ಬಾಪೂಜಿ ಬ್ಯಾಂಕ್ ನ ಸಿಬ್ಬಂದಿಯಾದ ಅರವಿಂದ ಎಂ. ಎಸ್ ಅವರಿಗೆ ಸನ್ಮಾನ ಮಾಡಲಾಯಿತು. ಹಾಗೂ ಈ ಸಂದರ್ಭದಲ್ಲಿ  ಆರೋಗ್ಯ ಇಲಾಖೆಯ ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ್ ಕುಮಾರ್ ಮತ್ತು  ನಿರ್ದೇಶಕರಾದ ಶ್ರೀಮತಿ ದಿವ್ಯಾ ಟಿ.  ಹಾಗೂ ಸೋಶಿಯಲ್ ವರ್ಕರ್ ಯೋಗೇಶ್, ಸ್ಟಾಫ್ ನರ್ಸ್ ಲತಾ, ರೂಪ. ಮತ್ತು ದಿನೇಶ್ ಹಾಜರಿದ್ದರು.