ಮಾನವ ಹಕ್ಕು ರಕ್ಷಣೆ: ಬಸವರಾಜಗೆ ಪದಕ

ಬೀದರ್:ಜ.13: ಮಾನವ ಹಕ್ಕುಗಳ ರಕ್ಷಣೆ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ತೀಸ್ರಿ ಆಂಖ್ ಮಾನವ ಹಕ್ಕು ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಎ. ಅವರಿಗೆ ಪದಕ ದೊರೆತಿದೆ.

ತೀಸ್ರಿ ಆಂಖ್ ಮಾನವ ಹಕ್ಕು ಸಂಘಟನೆ ವತಿಯಿಂದ ಉತ್ತರ ಪ್ರದೇಶದ ಗೋರಕಪುರದಲ್ಲಿ ನಡೆದ ಮಾನವ ಹಕ್ಕುಗಳ ರಕ್ಷಣೆ ಹಾಗೂ ಜಾಗೃತಿ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಡಾ. ಗೌತಮ ಚೌಧರಿ ಅವರು ಪದಕ ಹಾಗೂ ಪ್ರಶಂಸೆ ಪತ್ರ ಪ್ರದಾನ ಮಾಡಿದರು. ತ್ರೀಸಿ ಆಂಖ್ ಮಾನವ ಹಕ್ಕು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಶೈಲೇಂದ್ರಕುಮಾರ ಮಿಶ್ರಾ, ವಿದೇಶ ಹಾಗೂ ದೇಶದ ವಿವಿಧ ರಾಜ್ಯಗಳ ಗಣ್ಯರು ಪಾಲ್ಗೊಂಡಿದ್ದರು.

ಮೂಲತಃ ಕೊಪ್ಪಳ ಜಿಲ್ಲೆಯ ತಾವರಗೇರಾದ ಬಸವರಾಜ ಎ. ಅವರು ಸದ್ಯ ಬೀದರ್‍ನಲ್ಲಿ ನೆಲೆಸಿದ್ದಾರೆ.