ಮಾನವ ಹಕ್ಕುಗಳ ಉಲ್ಲಂಘಣೆ ಬಗ್ಗೆ ಜಾಗೃತಿ ಅಗತ್ಯ : ಶ್ರೀಕಾಂತ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.11-ವಿದ್ಯಾರ್ಥಿನಿಯರು ಮಾನವ ಹಕ್ಕುಗಳ ಉಲ್ಲಂಘಣೆ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಸಂವಿಧಾನ ದತ್ತವಾಗಿ ದೊರೆಕಿರುವ ಮಹಿಳಾ ಸಮಾನತೆ ಹಕ್ಕು ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ರಾಮಸಮುದ್ರ ಪೂರ್ವ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀಕಾಂತ್ ತಿಳಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಲ್ಲಿರುವ ಸರ್ಕಾರಿ ವರ್ಗೀಕೃತ ಬಾಲಕಿಯರ ವಿದ್ಯಾರ್ಥಿನಿಯರ ನಿಲಯದಲ್ಲಿ ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟಕ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಅಶ್ರಯದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
1948 ಡಿ. 10 ರಂದು ಭಾರತದಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸಲು ಮಾನವ ಹಕ್ಕುಗಳ ದಿನಾಚರಣೆ ಅಸ್ತಿತ್ವಕ್ಕೆ ಬಂತು. ಸ್ವಾತಂತ್ರ್ಯ ನಂತರ ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ ಪೋಲಿಸ್ ವ್ಯವಸ್ಥೆ ಜಾರಿಯಾಲ್ಲಿತ್ತು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿತ್ತು. ನಂತರ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾದ ಬಳಿಕ ಸಂವಿಧಾನದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸ್ಪಷ್ಟವಾದ ಕಾಯ್ದೆಯನ್ನು ನೀಡಲಾಯಿತು. ಹೀಗಾಗಿ ತಮ್ಮದೇ ಯಾವುದೇ ಸಮಸ್ಯೆಗಳು ಹಾಗೂ ತೊಂದರ ಉಂಟಾದರೆ ನೇರವಾಗಿ ಠಾಣೆ ಬಂತು ದೂರು ನೀಡುವ ಮೂಲಕ ರಕ್ಷಣೆಯನ್ನು ಪಡೆದುಕೊಳ್ಳಬೇಕು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಕಲ್ಪಿಸುವ ಕೊಡುವ ಮೂಲಕ ಸಮಾನತೆಯನ್ನು ಸಾರಿದರು. ಶಿಕ್ಷಣ ಮತ್ತು ಉದ್ಯೋಗ ಹಕ್ಕು ನೀಡುವ ಜೊತೆಗೆ ಪುರುಷರಷ್ಟೇ ಮಹಿಳೆಯು ಸಮಾನರಾಗಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿರವು ತಾವೆಲ್ಲರು ವ್ಯಾಸಂಗಕ್ಕೆ ಮೊದಲ ಅದ್ಯತೆ ನೀಡಬೇಕು. ಶಿಕ್ಷಣದಿಂದ ಬದಲಾವಣೆ ತರಲು ಸಾಧ್ಯವಿದೆ. ಅಪ್ಪ ಅಮ್ಮ ನಿಮ್ಮ ಮೇಲೆ ವಿಶ್ವಾಸವಿಟ್ಟು ಬಹಳ ದೂರದಿಂದ ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರ ನಂಬಿಕಗೆ ಸ್ವಲ್ಪ ಚ್ಯುತಿ ಬರದಂತೆ ನಡೆದುಕೊಳ್ಳುವ ಜೊತೆಗೆ ತಮ್ಮ ಗುರಿಯನ್ನು ಸಾಧನೆ ಮಾಡಬೇಕು. ಪ್ರೀತಿ, ಪ್ರೇಮ, ಪ್ರಣಯ ಇವು ಶಾಶ್ವತವಲ್ಲ. 5 ವರ್ಷದ ಆಸೆಗೆ 50 ವರ್ಷಗಳ ಸ್ವಾಭಿಮಾನದ ಬದುಕು ಹಾಗೂ ನೆಮ್ಮದಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ನಿಮ್ಮೆಲ್ಲರ ಅದ್ಯತೆ ಶಿಕ್ಷಣವಾಗಬೇಕು ಎಂದು ಶ್ರೀಕಾಂತ್ ಕಿವಿಮಾತು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಸಂಸ್ಥೆಯ ಮಟ್ಟದಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಣೆ ಜಾರಿಯಲ್ಲಿದೆ. ಜೈಲು ಹಾಗು ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘಣೆಯಾಗುತ್ತವೆ. ಅನಗತ್ಯವಾಗಿ ಓರ್ವ ವ್ಯಕ್ತಿಗೆ ಅವನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುವುದೇ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಪ್ರತಿಯೊಬ್ಬರು ಸ್ವಾತಂತ್ರ್ಯರು. ಅವರ ಜೀವನ ಮತ್ತು ಬದುಕುನ್ನು ಕಿತ್ತುಕೊಳ್ಳಲು ಯಾರಿದಂಲು ಸಾಧ್ಯವಿಲ್ಲ. ಜೀತ ಪದ್ದತಿಯಂತ ಕ್ರೂರ ನಡತೆ ದೂರವಾಗಬೇಕು. ಹೆಣ್ಣು ಗಂಡು ಸಮಾನಗಳು. ಮದುವೆಯಾಗುವಾಗ ಅತಿಯಾದ ವರದಕ್ಷಿಣೆಗೆ ಪೀಡಿಸುವುದು ಸಹ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದರು.
ವಕೀಲೆ ಸವಿತಾ ಬಾಲ್ಯ ವಿವಾಹ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಿಕ್ರಂನ ಜಿಲ್ಲ ಸಂಯೋಜಕ ಕೆ.ಸಿ. ರೇವಣ್ಣ, ಜನಹಿತಶಕ್ತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ವಕೀಲ ಎಂ. ಮಹೇಶ್, ಹಾಸ್ಟೆಲ್‍ನ ನಿಲಯಪಾಲಕಿ ಶಿವಮ್ಮ, ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.