ಮಾನವ ಸರಪಳಿ ಪ್ರತಿಭಟನೆ : ಒಂದು ಗಂಟೆ ಕಾಲ ರಸ್ತೆ ತಡೆ ಸಂಚಾರಕ್ಕೆ ಅಡಚಣೆ

ಸಿಂಧನೂರು.ಅ.೧೭-ಕರ್ನಾಟಕ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಎಂದು ಹೋರಾಟ ಮಾಡುತ್ತಾ ಹೋರಾಟದಲ್ಲಿ ಸದಾ ಗೆದ್ದವರು ನಾವು, ಸೋತವರು ನೀವು ಎಂದು ಅನಧಿಕೃತ ವಾಗಿ ಆಸ್ತಿ ಹೊಂದಿದವರ ಕುರಿತಾಗಿ ಆಕ್ರೋಶ ಹೊರ ಹಾಕಿದರು.
ನಗರದ ಗಾಂಧಿ ವೃತ್ತದಲ್ಲಿ ಒಂದು ಗಂಟೆ ರಸ್ತೆ ತಡೆ ನಡೆಸಿ ಮಾತನಾಡಿದ ಅವರು ಸಿಂಧನೂರಿನಲ್ಲಿ ಜಮೀನ್ದಾರರ ಸರ್ಕಾರ ಇದೇನಾ ಅಥವಾ ಜನರಿಂದ ಪ್ರತಿನಿಧಿಸಿದ ಸರ್ಕಾರದ ಪ್ರತಿನಿಧಿಗಳು ಇದ್ದರಾ ತಿಳಿಯದಾಗಿದೆ.ಒಟ್ಟು ೪೯೦೦ ಎಕರೆ ನಾಡಗೌಡರ ಒಡೆತನದ ಆಸ್ತಿ ಇದ್ದು ಅದರಲ್ಲಿ ೬೭೦ ಎಕರೆ ಭೂಮಿಯನ್ನು ಮಾತ್ರ ಹಂಚಿದ್ದಾರೆ ಆದರೆ ಉಳಿದ ಭೂಮಿ ಅವರ ಇನ್ನೂಳಿದ ಕುಟುಂಬದ ಸದಸ್ಯರ ಹೆಸರಿನಲ್ಲಿ, ಮನೆಯಲ್ಲಿನ ಪ್ರಾಣಿಗಳ ಹೆಸರಿನಲ್ಲಿ ಇದ್ದಾವೆ .ಈ ಕುರಿತಾಗಿ ನ್ಯಾಯಾಲಯ ತಡೆ ನೀಡಿದೆ ಎನ್ನುತ್ತಾರೆ ಆ ವಿಷಯವಾಗಿ ಕೊಟ್ಟಿರುವ ಹತ್ತು ಪುಟಗಳ ಆದೇಶದಲ್ಲಿ ಮೂರು ಪುಟಗಳು ಮಾಯ ಇನ್ನೂಳಿದ ಏಳು ಪುಟಗಳು ಮಾತ್ರ ಅದರಲ್ಲಿ ಅರ್ದ ಅರ್ಥ ಆದರೆ ಇನ್ನರ್ಧ ಅರ್ಥ ಆಗುವುದಿಲ್ಲ.ಈ ಕುರಿತು ನಕಲಿ ಪತ್ರ ಸೃಷ್ಟಿಸಿದ್ದಾರೆ ೧೯೮೪ ರಲ್ಲಿ ಆದೇಶ ಆಗಿದೆ ಅಲ್ಲಿಂದ ಮೂವತ್ತೊಂಬತ್ತು ವರ್ಷ ಅಧಿಕಾರಿಗಳು ಏನು ಮಾಡಿದ್ದಾರೆಂದರು.ಆ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಗಂಭೀರವಾಗಿ ಆರ್ ಮಾನಸಯ್ಯ ಆರೋಪ ಮಾಡಿದರು.
ಗಾಂಧಿ ವೃತ್ತದಲ್ಲಿ ಸುತ್ತ ಒಂದು ಕಿಲೋಮೀಟರ್ ವರೆಗೆ ವಾಹನಗಳನ್ನು ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದರು.ಹೆಚ್ಚಿನ ಪೋಲಿಸ್ ಬಂದು ಬಸ್ತ್‌ಗೆ ವ್ಯವಸ್ಥೆ ಮಾಡಿ ಮಾನವ ಸರಪಳಿಗೆ ಅನುಮತಿ ಕೊಡದಿರುವ ಕಾರಣ ಧರಣಿ ನಿರತ ಹೋರಾಟಗಾರರನ್ನು ಬಸ್ ನಲ್ಲಿ ಪೋಲಿಸ್ ಠಾಣೆಗೆ ಕರೆದೊಯ್ದರು.
ಪ್ರತಿಭಟನಾ ಸ್ಥಳದಲ್ಲಿ ತಹಶಿಲ್ದಾರ ಅರುಣ್ ಕುಮಾರ್, ಡಿವಾಯ್‌ಎಸ್ಪಿ ಬಿ.ಎಸ್, ತಳವಾರ, ಪಿ.ಐ ದುರಗಪ್ಪ ಡೊಳ್ಳಿನ್ ಸೇರಿದಂತೆ ಪೋಲಿಸ್ ತುಕಡಿಗಳು ಬಂದ್ ಬಸ್ತ್ ನಲ್ಲಿ ಇದ್ದರು.