ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಕೃತಕ ಬುದ್ದಿ ಮತ್ತೆ ಪಾತ್ರ ಮಹತ್ವ

ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಹೆಚ್.ಆರ್. ಶೇಪರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮಾನವ ಸಂಪನ್ಮೂಲ ಸಮಾವೇಶವನ್ನು ಫಾರ್ನಾಕ್ಸ್ ಕಾರ್ಪೊರೇಟ್ ಸರ್ವಿಸಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ್ ಭಟ್ ಉದ್ಘಾಟಿಸಿದರು.

ಬೆಂಗಳೂರು:೧೦ ಉತ್ಪಾದಕ ಕೃತಕ ಬುದ್ದಿಮತ್ತೆ ತಂತ್ರಜ್ಞಾನ (ಜನರೇಟಿವ್ ಎ.ಐ) ಉದ್ಯಮ ಕ್ಷೇತ್ರಗಳ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಫಾರ್ನಾಕ್ಸ್ ಕಾರ್ಪೊರೇಟ್ ಸರ್ವಿಸಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ್ ಭಟ್ ಹೇಳಿದರು.
ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಹೆಚ್.ಆರ್. ಶೇಪರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮಾನವ ಸಂಪನ್ಮೂಲ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಜೆಎಐ ಕೃತಕ ಬುದ್ದಿಮತ್ತೆಗಿಂತ ಭಿನ್ನ. ಇದು ಕೇವಲ ತಾಂತ್ರಿಕ ಮಾಹಿತಿ ಸಂಗ್ರಹ ಮಾಡದೆ, ಮಾಹಿತಿಯ ಔಚಿತ್ಯಗಳನ್ನು ಹಾಗೂ ವಿಶೇಷಗಳನ್ನು ಸಾದರಪಡಿಸುತ್ತದೆ. ಜೊತೆಗೆ ಕರಾರುವಾಕ್ಕಾದ ಮಾಹಿತಿ ತಕ್ಷಣ ಲಭ್ಯವಾಗುವುದರಿಂದ ಮಾನವ ಸಂಪನ್ಮೂಲವನ್ನು ನಿರ್ವಹಿಸುವವರ ಮೇಲಣ ಒತ್ತಡ ಕಡಿಮೆಯಾಗುತ್ತದೆ. ಸಮಯದ ಉಳಿತಾಯವಾಗುತ್ತದೆ ಎಂದರು.
ವಿಶ್ಲೇಷಣಾ ವರದಿ ಹಾಗೂ ಮಾಹಿತಿಗಳ ಗೌಪ್ಯತೆ ಕಾಪಾಡಬೇಕೆಂಬ ಆತಂಕವೂ ಈ ತಂತ್ರಜ್ಞಾನದ ಅಳವಡಿಕೆಯಿಂದ ದೂರವಾಗುತ್ತದೆ ಎಂದು ಹೇಳಿದರು.
ಹೆಚ್.ಆರ್. ಶೇಪರ್ಸ್ ಸಂಸ್ಥೆಯ ಸಂಸ್ಥಾಪಕ ಆಶಿಶ್ ಗಾಕ್ರೆ ಗೌರವಾನ್ವಿತ ಅತಿಥಿಗಳಾಗಿದ್ದರು. ಮಾನವ ಸಂಪನ್ಮೂಲ ನಿರ್ವಹಣೆಯ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕ ಕೃತಕ ಬುದ್ದಿಮತ್ತೆಯ ಪರಿಣಾಮಕಾರಿ ಅಳವಡಿಕೆ ಕುರಿತಂತೆ, ದೇಶದ ವಿವಿಧ ಉದ್ಯಮಗಳ ಮುಖ್ಯಸ್ಥರೊಡನೆ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸುಧೀರ್ಘ ಸಂವಾದ ನಡೆಸಿದರು.ಪ್ರಾರಂಭದಲ್ಲಿ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಎಂ. ವೇಣುಗೋಪಾಲ್ ಸಮಾವೇಶದ ಪ್ರಸ್ತುತತೆಯನ್ನು ವಿವರಿಸಿ ಸ್ವಾಗತಿಸಿದರು.
ಸಮಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಅಕಾಡೆಮಿಕ್ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಡಾ. ನಿಟ್ಟೆ ಶಂಕರ ಅಡ್ಯಂತಾಯ ಪದವಿ ಕಾಲೇಜ್‌ನ ಪ್ರಾಂಶುಪಾಲ ಡಾ. ಆರ್. ರಾಘವೇಂದ್ರ, ನಿಟ್ಟೆ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಮತ್ತು ಡಿಸೈನ್‌ನ ಸಹ ನಿರ್ದೇಶಕಿ ಪ್ರೊ. ರಜಿನಿ ಇಥಮ್ ಹಾಗೂ ಸಮಾವೇಶದ ಸಂಯೋಜಕ ಪ್ರೊ. ಎಂ.ಎಸ್ ಬಾಲಕೃಷ್ಣಾಚಾರ್ ಉಪಸ್ಥಿತರಿದ್ದರು.