ಮಾನವ ಸಂಪನ್ಮೂಲದ ಸದ್ಬಳಕೆ ದೇಶದ ಪ್ರಗತಿಗೆ ಪೂರಕ

ಕಲಬುರಗಿ:ಸೆ.10: ಮನುಷ್ಯ ಶಕ್ತಿ ಪ್ರಬಲವಾದ ಸಂಪತ್ತಾಗಿದ್ದು ಅದರ ಸರಿಯಾದ ಬಳಕೆ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ ಹೀಗೆಂದು ಡಾ.ಸಂಗಮೇಶ ಹಿರೇಮಠ ಅಭಿಪ್ರಾಯ ಪಟ್ಟರು.
ಅವರು ನಗರದ ಸೈಯ್ಯದ್ ಚಿಂಚೋಳಿ ಕ್ರಾಸ್ ಹತ್ತಿರದ ಕೆ.ವಿ.ಪಿ. ಪಿಯುಸಿ ಕಾಲೇಜಿನಲ್ಲಿ ಜರುಗಿದ ಪ್ರಥಮ ವರ್ಷದ ಪಿ.ಯು.ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ದೇಶ ಈಗ ಯುವಕರು ಹೆಚ್ಚಿರುವ ದೇಶವಾಗಿದ್ದು ಇವರನ್ನು ಸರಿಯಾದ ಮಾರ್ಗದಲ್ಲಿ ನಡೆಸಲೆಂದೇ ಶ್ರೀಯುತ ಕಲ್ಯಾಣರಾವ ಶೀಲವಂತ ಈ ಸಂಸ್ಥೆ ಯನ್ನು ಕಟ್ಟಿ ಬೆಳೆಸಲು ಶ್ರಮಿಸುತ್ತಿದ್ದಾರೆ ಅವರ ಕಾರ್ಯಕ್ಕೆ ಅಭಿನಂದನೆ ಹೇಳಲೇಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ಇಂದಿನ ಯುವಕರು ನಟಿ ನಟಿಯರನ್ನು ಹೀರೋ ಎಂದು ಭಾವಿಸಿಕೊಂಡಿರುವುದು ದುರಂತ, ಖ್ಯಾತ ನಟ ಒಬ್ಬ ಜನಿಸಿಲ್ಲದಿದ್ದರೆ ದೇಶಕ್ಕೆ ಅಂತಹ ದೊಡ್ಡ ನಷ್ಟ ಆಗುವುದಿಲ್ಲ ಅದೇ ಗಾಂಧಿ ಅಂಬೇಡ್ಕರ್ ಬಸವಣ್ಣ ಅಕ್ಕಮಹಾದೇವಿ ಅಂಥವರು ಇರದಿದ್ದರೆ ಸ್ವಾತಂತ್ರ್ಯ ಸಮಾನತೆ ಕನಸಿನ ಮಾತಾಗುತಿತ್ತು. ಕನ್ನಡ ಕಲಿತರೆ ಉದ್ಯೋಗ ಸಿಕ್ಕುತ್ತಿಲ್ಲ ಎಂಬುದು ಸುಳ್ಳು ಇಂದಿನ ಬಹುಪಾಲು ದೊಡ್ಡ ಸಾಧಕರು ಕನ್ನಡ ಮಾಧ್ಯಮದಲ್ಲಿ ಓದಿದವರು ಅದರಲ್ಲೂ ಹಳ್ಳಿಯಲ್ಲೇ ಓದಿದವರಾಗಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕಲ್ಯಾಣರಾವ ಶೀಲವಂತ ನಮ್ಮ ಈ ಗುರುಜಿ ಪದವಿ ಮಹಾವಿದ್ಯಾಲಯ ಮತ್ತು ಕೆವಿಜಿ ಪಿಯು ಕಾಲೇಜಿನಲ್ಲಿ ಓದುವ ಮಕ್ಕಳು ತುಂಬಾ ಜಾಣರಾಗಿದ್ದಾರೆ ಕಲಿಸುವ ಉಪನ್ಯಾಸಕರು ಅಧ್ಯಯನ ಶೀಲರಾಗಿದ್ದು ಮಕ್ಕಳನ್ನು ಹುರಿದುಂಬಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದ್ದಾರೆ. ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ ಹವ್ಯಾಸ ಬದಲಾದರೆ ಹಣೆಬರಹವೇ ಬದಲಾಗುತ್ತದೆ ನೀವು ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಬಿ.ಎಸ್ ಪಾಟೀಲ ಮಳ್ಳಿ ಉಪನ್ಯಾಸಕರು ಮಾತನಾಡುತ್ತಾ ಸಂಸ್ಥೆ ಕಟ್ಟಿ ಬೆಳೆಸುವುದು ಸುಲಭದ ಮಾತಿಲ್ಲ ತುಂಬಾ ಉತ್ಸಾಹ ಶಾಲಿ ಕೊಡುಗೈ ದಾನಿ ಆದ ಶೀಲವಂತರು ನಿಮಗಾಗಿ ಈ ಕಾಲೇಜು ತೆರೆದಿದ್ದಾರೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಡಾ. ಸಿದ್ದಣ್ಣ ಹಾಗರಗಿ ಗುರುಜಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯರು ನಿಮ್ಮ ಅದೃಷ್ಟ ನೀವು ಇಂತಹ ಕಾಲೇಜಿನಲ್ಲಿ ಪ್ರವೇಶ ಪಡೆದಿರುವಿರಿ ಒಳ್ಳೆಯ ಲಾಭ ಪಡೆದು ಕೊಳ್ಳಿ ಎಂದರು, ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಎಸ್.ಎಸ್.ಪಾಟೀಲ ಪ್ರಾಂಶುಪಾಲರು ಮಾತನಾಡಿ ಕೆವಿಪಿ ಪಿ.ಯು ಕಾಲೇಜು ತೆಗೆದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದಾರೆ ಇದನ್ನು ನಾವು ಕಾಯಾ ವಾಚಾ ಮನಸಾ ಶ್ರಮಿಸಿ ಬೆಳೆಸಬೇಕು ಎಂದರು.
ಸಭೆಯಲ್ಲಿ ಗುರೂಜಿ ಡಿಗ್ರಿ ಕಾಲೇಜನ ಉಪನ್ಯಾಸಕರು ಸಿಬ್ಬಂದಿ ವಿದ್ಯಾರ್ಥಿಗಳು ಹಾಗೆಯೇ ಕೆವಿಪಿ ಪಿಯು ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿಯರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಶ್ವೇತಾ ಮತ್ತು ಶ್ರೀಮತಿ ಭುವನೇಶ್ವರಿ ಉಪನ್ಯಾಸಕೀಯರು ನಿರೂಪಿಸಿದರು ಡಿಗ್ರಿ ಕಾಲೇಜಿನ ಶ್ರೀಮತಿ ಸವಿತಾ ಉಪನ್ಯಾಸಕರು ಸ್ವಾಗತಿಸಿದರು ಶ್ರೀಮತಿ ತ್ರೀಷಲಾ ಉಪನ್ಯಾಸಕ ಉಪನ್ಯಾಸಕಿಯರು ವಂದಿಸಿದರು. ಎರಡೂ ಕಾಲೇಜಿನ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.