ಮಾನವ ಶರೀರ ಭಗವಂತನಿಂದ ನಿರ್ಮಾಣ

(ಸಂಜೆವಾಣಿ ವಾರ್ತೆ)
ಇಂಡಿ:ಆ.22: ವೇದಗಳ ಕಾಲದಲ್ಲಿ ದೇಹದ ಮಹತ್ವದ ಕುರಿತು ಪ್ರಸ್ತಾಪವಾಗಿದೆ.ಜೀವವೇ ಶಿವನ ಸ್ವರೂಪವಾಗಿದೆ ಎಂದು ಯೋಗ ಗುರು ಬಿ ಎಸ್ ಪಾಟೀಲರು ಹೇಳಿದರು.
ಅವರು ಇಂಡಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಯುವ ಘಟಕ ಹಾಗೂ ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿಯ ಸಹಯೋಗದಲ್ಲಿ ದತ್ತಿದಾನಿ ಪೆÇ್ರ ಐ ಬಿ ಸುರಪುರ ಅವರ ತಾಯಿ ಲಿಂ. ಸಂಗಮ್ಮ ಬಶೆಟ್ಟೆಪ್ಪ ಸುರಪುರ ಇವರ ಸ್ಮರಣಾರ್ಥ ಏರ್ಪಡಿಸಿದ್ದ “ದೇಹವೇ ದೇವಾಲಯ” ಈ ವಿಷಯದ ಕುರಿತು ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.
ಪ್ರಕೃತಿಯೇ ದೇವರು ನಿನ್ನೊಳಗಿರುವ ಚೈತನ್ಯವೇ ದೇವರು ದೇಹದೊಳಗೆ ದೇವಾಲಯವಿದ್ದರೆ ಮತ್ತೇಕೆ ಬೇರೆ ದೇವಾಲಯಕ್ಕೆ ಹೋಗಬೇಕು ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ನಮ್ಮ ಮನದಾಗ ಒಳ್ಳೆಯ ಭಾವವಿದ್ದರೆ ಅದುವೇ ದೇವಾಲಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೆÇ್ರೀ ಎ ಎಸ್ ಗಾಣಿಗೇರ ಅವರು ಮಾತನಾಡಿ, ಉಳ್ಳವರು ಶಿವಾಲಯ ಮಾಡುವರು.ಕಾಲೆ ಕಂಬಗಳು.ತಲೆಯೇ ಕಳಸ.ಆತ್ಮವೇ ಲಿಂಗ, ಈ ದೇಹದಲ್ಲಿ ಆತ್ಮಲಿಂಗ ಬಂದ ಜ್ಞಾನವು ಅಮೃತವಾದುದು. ಭೌತಿಕ ವಸ್ತುವಿಗಿಂತ ಆತ್ಮದಲ್ಲಿರುವುದೇ ಶ್ರೇಷ್ಠ ಜ್ಞಾನ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಆರ್ ವಿ ಪಾಟೀಲ ಶರಣ ಸಾಹಿತ್ಯವು ನಡೆದ ಬಂದ ದಾರಿ,ಅದರ ಉದ್ದೇಶಗಳು, ಸಾಧನೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕದಳಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ ಅವರು ದತ್ತಿ ದಾಸೋಹಿಗಳ ಕುರಿತು ದತ್ತಿ ಸ್ಮರಣೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸತ್ಸಂಗ ಸಮಿತಿ ಅಧ್ಯಕ್ಷ ಪೆÇ್ರ ಐ ಬಿ ಸುರಪುರ, ಯುವ ಘಟಕದ ಅಧ್ಯಕ್ಷ ಎಸ್ ಆಯ್ ಸೂಗೂರ, ಪೆÇ್ರ ಎಂ ಜೆ ಪಾಟೀಲ, ಸಿ ಎಂ ಉಪ್ಪಿನ, ಎಸ್ ಎಸ್ ಈರನಕೇರಿ, ಕೆ ಜಿ ನಾಟಿಕಾರ, ಬಿ ಇ ಹಿರೇಮಠ, ಎಸ್ ವಿ ಹೂಗಾರ, ಜಾಮಗೊಂಡಿ ಹಾಗೂ ಎನ್ ಎಲ್ ಹಚಡದ ಉಪಸ್ಥಿತರಿದ್ದರು.