ಮಾನವ ಧರ್ಮ ಸ್ಥಾಪನೆಯೆ ಸನ್ಯಾಸಿಯ ಮುಖ್ಯಗುರಿ:ಪರಮ ಪೂಜ್ಯ ಸಂಗನಬಸವ ಮಹಾಸ್ವಾಮಿಗಳು

ಕಲಬುರಗಿ,ನ.18: ನಗರದ ಶಿವಶಕ್ತಿ ಬಡಾವಣೆಯಲ್ಲಿ ಸಾಹಿತಿ ಡಾ. ಚಿ. ಸಿ ನಿಂಗಣ್ಣ ಅವರ ಸಾಹಿತ್ಯ ಕುಟೀರದಲ್ಲಿ ಆಧ್ಯಾತ್ಮಯೋಗಿ ಲಿಂಗೈಕ್ಯ ದಯಾನಂದ ಶಿವಯೋಗಿ ಚರಿತ್ರೆ ಕೃತಿಯನ್ನು ಬಂತನಾಳ ಶಾಖಾಮಠ ಯರನಾಳ – ಉಕ್ಕಲಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸಂಗನಬಸವ ಮಹಾಸ್ವಾಮಿಗಳು ಲೋಕಾಪರ್ಣೆಗೊಳಿಸಿ ಮಾತನಾಡುತ್ತ , ಭಾರತ ಭೂಮಿ ಹಲವು ಧರ್ಮಗಳ , ಹಲವು ಭಾಷೆಗಳಿಗೆ ಆಶ್ರಯ ನೀಡಿದ ಪವಿತ್ರ ಪುಣ್ಯ ಭೂಮಿ ಇದಾಗಿದೆ. ಪ್ರಪಂಚದಲ್ಲಿ ಯುದ್ಧದ ವಾತಾವರಣ ಮೂಡಿದ್ದು ಬಹಳ ನೋವಿನ ಸಂಗತಿ . ಬುದ್ಧ – ಬಸವ – ಅಂಬೇಡ್ಕರ ಅವರ ತತ್ವಾಚರಣೆಯನ್ನು ಮರೆತು ಸಾಗಿರುವುದರಿಂದ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಅದಪಥನಗೊಳ್ಳುತ್ತ ಸಾಗಿದ್ದರಿಂದ, ಸಮಾಜದಲ್ಲಿ ಕೊಲೆ , ಸುಲುಗೆ , ಮಾನಹಾನಿ, ಆರೋಪ, ಭ್ರಷ್ಟಾಚಾರದಂತಹ ಗಟನೆಗಳು ಹೆಚ್ಚಾಗಿ ಜರುಗುತ್ತಿರುವುದರಿಂದ ಸಮಾಜದಲ್ಲಿ ಸಹೋದರತೆ , ಪ್ರೀತಿ, ವಿಶ್ವಾಸ ಸದ್ಗುಣಗಳು ಕಾಣಸಿದಂತಾಗಿದೆ . ಅದಕ್ಕಾಗಿ ಸಂನ್ಯಾಸಿಯ ಸ್ಥಾನದಲ್ಲಿರುವವರು ಮಾನವ ಧರ್ಮ ಸ್ಥಾಪನೆಗೆ ಪ್ರಾಮಾಣಿಕವಾಗಿ ಪ್ರಯತ್ನಸಿಬೇಕಾಗಿದೆ . ವಿಶ್ವಗುರು ಬಸವಣ್ಣನವರು ತಿಳಿಸಿದ ಸಕಲ ಜೀವಾತ್ಮಗಳಿಗೆಲೇಸನ್ನು ಬಯಸುವ ಮಾರ್ಗವನ್ನು ಪ್ರತಿಯೊಬ್ಬರು ಅನುಸರಿಸಬೇಕೆಂದು ಕರೆನೀಡಿದರು .
ಸಾಹಿತಿ ಡಾ ಚಿ. ಸಿ ನಿಂಗಣ್ಣ ಅವರು ನಮ್ಮ ಮಠದ ಶಾಲೆಯಲ್ಲಿ ಓದಿದವರು ಗ್ರಾಮೀಣ ಪ್ರದೇಶದ ರೈತ ಕುಟಂಬದಿಂದ ಬಂದ ಇವರು ಸ್ವಪ್ರಯತ್ನದಿಂದ ಎತ್ತರದ ವ್ಯಕ್ತಿತ್ವ ಬೆಳಿಸಿಕೊಂಡಿದ್ದಾರೆ . ಶರಣ ಸಂಸ್ಕತಿಯ ಆರಾದಕರು ಮತ್ತು ಪ್ರಚಾರಕರು ಆಗಿದ್ದಾರೆ ಇವರು ರಚಿಸಿದ ಲಿಂ. ದಯಾನಂದ ಶಿವಯೋಗಿಗಳ ಚರಿತ್ರೆ ಕೃತಿಲೋಕಪರ್ಣೆಗೊಳಿಸುವ ಕಾರ್ಯ ನನ್ನಿಂದಲೆ ಮಾಡಿಸುರುವುದು ಅದು ನನ್ನ ಭಾಗ್ಯವೆಂದು ಭಾವಿಸಿರುವೆ. ದಯಾನಂದ ಶಿವಯೋಗಿಗಳು ಬಹಳ ಸರಳ ಶರಣರು , ಬಸವಣ್ಣನವರ ವಿಚಾರಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದವರು . ಆಧ್ಯಾತ್ಮಯೋಗಿ ದಯಾನಂದ ಶಿವಯೋಗಿಗಳ ಸತ್ಕಾರ್ಯಗಳನ್ನು ತಿಳಿಸುವ ಮಹತ್ವದ ಕೃತಿ ಇದಾಗಿದೆ. ನಿಂಗಣ್ಣನವರು ಒಬ್ಬ ಗಟ್ಟಿ ಬರಹಗಾರ ಎರಡುಮಾತಿಲ್ಲ ಅವರಿಂದ ಕನ್ನಡ ಸಾಹಿತ್ಯಕ್ಕು ಮತ್ತು ಸಮಾಜಕ್ಕು ಮಹತ್ವ ಸೇವೆ ಆಗಲೆಂದು ಶುಭ ಹಾರೈಯಿಸಿದರು
ಕಾರ್ಯಕ್ರಮದ ಮುಖ್ಯ ಅತಿಥಿ ಪ್ರೊ. ಶಿವರಾಜ ಪಾಟೀಲರು ಕೃತಿ ಕುರಿತು ಮಾತನಾಡುತ್ತ ಬಸವಾದಿ ಶಿವಶರಣರ ವಿಚಾರಗಳು ಮನ ಮತ್ತು ಮನೆಗೆ ಬೆಳಕು ನೀಡುವ ಜ್ಯೋತಿಯಾಗಿವೆ. ಲಿಂ. ದಯಾನಂದ ಶಿವಯೋಗಿಗಳ ಬದುಕಿನ ಆದರ್ಶತೆಗೆ ಆಧ್ಯಾತ್ಮ ನಿಷ್ಠತೆಗೆ ,ಶೈಕ್ಷಣಿಕ ಸೇವೆಗೆ ಈ ಕೃತಿ ಸಾಕ್ಷಿಯಾಗಿದೆ. ಅಂದಿನ ಬಂತನಾಳ ಲಿಂ. ಸಂಗನಬಸವ ಸ್ವಾಮಿಗಳ ಮೊಮ್ಮಗರಾದ ಪರಮ ಪೂಜ್ಯ ಶ್ರೀ ಸಂಗನಬಸವ ಮಹಾಸ್ವಾಮಿಗಳು ಇಂದು ನಿಂಗಣ್ಣನವರ ಸಾಹಿತ್ಯ ಕುಟೀರದಲ್ಲಿ ಪೂಜ್ಯರ ಕೃತಿ ಲೋಕಾಪರ್ಣೆ ಮಾಡಿರಿವುದು ನಿಜವಾಗಿಯು ಹರ್ಷ ತಂದಿದೆ. ಬಂತನಾಳ ಶರಣರ ಆಧ್ಯಾತಿಕ , ಶೈಕ್ಷಣಿಕ ಕೊಡುಗೆ ನಾಡಿಗೆ ಆದರ್ಶವಾಗಿದೆ . ಅಂಥ ಪೂಜ್ಯರ ವಿಚಾರದಾರೆಯಲ್ಲಿ ಸಾಗಿದ ಇಂದಿನ ಪೂಜ್ಯರಿಂದ ಜರಗುವ ಸಮಾಜಮುಖಿ ಸತ್ಕಾರ್ಯಗಳು ಸಮಾಜಕ್ಕು ನಮಗೂ ಆದರ್ಶವೆಂದು ತಿಳಿಸಿದರು.
ಪುಸ್ತಕ ಪ್ರಕಾಶಕರಾದ ಬಸವರಾಜ ಕೊನೇಕ ಅವರು ಅಧ್ಯಕ್ಷತೆವಹಿಸಿದ್ದರು, ಆರಂಭದಲ್ಲಿ ಸಾಹಿತಿ ಡಾ. ಚಿ. ಸಿ. ನಿಂಗಣ್ಣ ಸ್ವಾಗತಿಸಿ ಪ್ರಾಸ್ಥವಿಕ ಮಾತನಾಡಿ ಪೂಜ್ಯರಿಗೆ ಗೌರವ ಸನ್ಮಾನ ಮಾಡಿದರು . ಅತಿಥಿಗಳಾದ ಪ. ಮಾನುಸಾಗರ , ರವೀಂದ್ರ ವಿಭೂತಿ , ಬಸವರಾಜ ಪಾಟೀಲ ಹಿಪ್ಪರಗಿ, ಪ್ರೊ ಶಂಕ್ರಯ್ಯ ಗಂಟಿ ವೇದಿಕೆಮೇಲಿದ್ದರು , ಶಿವಾನಂದ ತೊರವಿ , ಕಿರಣಕುಮಾರ , ಶಿವಾನಂದ ಹಿರೇಮಠ, ಕಾಶಿಬಾಯಿ ಪಾಟೀಲ ಕಾವ್ಯಶ್ರೀ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆಂದು ಸಾಹಿತಿ ಡಾ. ಚಿ.ಸಿ ನಿಂಗಣ್ಣ ತಿಳಿಸಿದ್ದಾರೆ .