ಮಾನವ ದೊಡ್ಡವನಲ್ಲ ಮಾನವೀಯತೆ ದೊಡ್ಡದು – ಚನ್ನಬಸವ ಶಿವಯೋಗಿ


ಸಂಜೆವಾಣಿ ವಾರ್ತೆ
ಹರಪನಹಳ್ಳಿ:, ಸೆ.02- ಕೈಲಾಸ ದೊಡ್ಡದಲ್ಲ ಕಾಯಕವೇ ದೊಡ್ಡದು ಮಾನವ ದೊಡ್ಡವನಲ್ಲ ಮಾನವೀಯತೆ ದೊಡ್ಡದು ಹೀನ ಕೃತ್ಯಗಳ  ಮಾಡುತ ನದಿಯಲಿ ಸ್ನಾನ  ಮಾಡಿದರೇನು ಫಲಾ ಶ್ರೀ ಮಂಜುನಾಥನ ಸ್ವಾಮಿ ಕೃಪೆಗೆ ಪಾತ್ರರಾಗಿ ಧನ್ಯರಾಗಿ ಎಂದು ಶ್ರೀ  ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು ವಿರುಕ್ತ ಮಠ ನೀಲಗುಂದ ಹೇಳಿದರು
ಹರಪನಹಳ್ಳಿ ತಾಲೂಕಿನ ದೇವರ ತಿಮ್ಮಲಾಪುರ ಗ್ರಾಮದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್. ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಹರಪನಹಳ್ಳಿ ವಲಯ ಗ್ರಾಮ ಸುಭಿಕ್ಷೇಕೆಗಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಭಾರತ ದೇಶದಲ್ಲಿ ಮಹಿಳೆಯರ ಪಾತ್ರ ದೊಡ್ಡದು ಮಹಿಳೆಯರಿಗೆ ಕಂಕಣ ಮತ್ತು ಸೌಭಾಗ್ಯ ಉಳಿಸುವ ಏಕೈಕ ಪೂಜೆಯೆಂದರೆ ವರಮಹಾಲಕ್ಷ್ಮಿ ಪೂಜೆ .
ಹರಪನಹಳ್ಳಿ ತಾಲೂಕಿನಲ್ಲಿ ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಸ್ಥೆ ಹಲವಾರು ಯೋಜನೆಗಳನ್ನ ಕೈಗೊಂಡಿದೆ ಇದರಲ್ಲಿ ನನಗೆ ಕಾರ್ಯಕ್ರಮ ಯೋಜನೆ ಎಂದರೆ ಮಧ್ಯ ವ್ಯಸನ ಯೋಜನೆ ತರಬೇತಿ ಶಿಬಿರ ಇದು 1500 ವ್ಯಕ್ತಿಗಳಿಗೆ ತರಬೇತಿಯನ್ನು ನೀಡಿ ಮಧ್ಯ ವೆಸೆನೆಯಿಂದ ದುಶ್ಚಟಗಳಿಂದ ವಿಮುಕ್ತಗೊಳಿಸಿದ್ದಾರೆ ಮುಂದಿನ ದಿನಮಾನಗಳಲ್ಲಿ ಇಂಥ ಹಲವಾರು ಯೋಜನೆಗಳನ್ನ ಜಾರಿಗೆ ತಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸಂಸ್ಥೆ ಅಭಿವೃದ್ಧಿ ಪಥದತ್ತ ನಡೆಯಲಿ ಎಂದು ಹಾರೈಸಿದರು
ದೇವರತಿಮ್ಮಲಾಪುರದ ಗ್ರಾಮದಲ್ಲಿ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯಲ್ಲಿ ಪೂಜ್ಯ ಶ್ರೀ ಶ್ರೀ ಚನ್ನಬಸವ ಶಿವಯೋಗಿಗಳ
ಆಶೀರ್ವಚನ ನೀಡಿ ಸ್ವಾಮೀಜಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು  ಶ್ರೀ ಜನಾರ್ಧನ ಎಸ್ ಮಾತನಾಡಿ, ಧರ್ಮಸ್ಥಳ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಅರ್ಥಿಕ ಸ್ವಾವಲಂಬನೆಯ ಜೊತೆಗೆ ಸದಸ್ಯರಲ್ಲಿ ಧಾರ್ಮಿಕ ಚಿಂತನೆ ಹಾಗೂ ಜಾಗೃತಿಯನ್ನು ಮೂಡಿಸುತ್ತಿದೆ ಸನ್ಮಾರ್ಗ ಸದಾಚಾರ ಒಳ್ಳೆಯ ಆಲೋಚನೆ ಸನ್ನಡತೆ ರೂಢಿಸಿಕೊಂಡಾಗ ನಾವು ಸಮಾಜಕ್ಕೆ ಆಸ್ತಿಯಾಗುತ್ತೇವೆ. ಮನುಷ್ಯ ಧರ್ಮದ ದಾರಿಯಲ್ಲಿ ನಡೆದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ ಹಳ್ಳಿ ಹಳ್ಳಿಗಳಲ್ಲಿ ಸತ್ಯನಾರಾಯಣ ಪೂಜೆ, ಶನಿ ಪೂಜೆ, ವರಮಹಾಲಕ್ಷ್ಮಿ ಪೂಜೆ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಧರ್ಮ ಜಾಗೃತಿ ಯನ್ನು ಮೂಡಿಸುತ್ತಿದೆ.
ನಮ್ಮ ಸಂಸ್ಥೆ ರೈತರಿಗೆ ಕೃಷಿ ತರಬೇತಿ ಹರಪನಹಳ್ಳಿ ತಾಲೂಕಿನಲ್ಲಿ ನಿರ್ಗತಿಕರಿಗೆ ಪ್ರತಿ ತಿಂಗಳಿಗೆ ಸಾವಿರ ರೂಪಾಯಿಗಳಂತೆ 60 ಜನರಿಗೆ ಮಾಸಾಶನ ನೀಡಲಾಗುತ್ತದೆ ಮಹಿಳೆಯರ ಸಬಲೀಕರಣಕ್ಕೆ ಆಗುತ್ತಿ ನೀಡಲಾಗುವುದು ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಸಾಮೂಹಿಕ ವಿವಾಹ ಶನಿ ಪೂಜೆ ಪರಿಸರ ಸಂರಕ್ಷಣೆ ಸ್ವಚ್ಛತಾ ಕಾರ್ಯ ವರಮಹಾಲಕ್ಷ್ಮಿ ಹೀಗೆ ಅನೇಕ ರೀತಿಯ ಕಾರ್ಯಕ್ರಮಗಳು ತಾಲೂಕಿನಲ್ಲಿ ನಡೆಸಿಕೊಂಡು ಬಂದಿದೆ ಎಂದರು   ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಸ್ಥೆಯ ಆಂತರಿಕ ಲೆಕ್ಕಪರಿಶೋಧಕ ರವಿಯವರು ಮಾತನಾಡಿ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುವ ಹಲವಾರು ಕಾರ್ಯಕ್ರಮ ಗಳ ಬಗ್ಗೆ,ಹೆಗ್ಗಡೆಯವರ ತತ್ವ ಮತ್ತು ಆದರ್ಶ ಬಗ್ಗೆ ಹಾಗೂ ಅಭಯ ದಾನಕ್ಕೆ ಧರ್ಮಸ್ಥಳ ಗ್ರಾಮಾಂಭಿವೃದ್ಧಿ ಯೋಜನೆಯ ಸೇವೆಯೂ ಅನ್ವಯವಾಗುವುದಾಗಿ ದಾವಣಗೆರೆ ಜಿಲ್ಲೆಯಲ್ಲಿ 5 ತಾಲೂಕುಗಳನ್ನು ಒಳಗೊಂಡಂತೆ ಹರಪನಹಳ್ಳಿ ತಾಲೂಕಿನಲ್ಲಿ 5000 ಸ್ವಸಹಾಯ ಸಂಘದ ರಚನೆ ಮಾಡಿ ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇದು ಶ್ಲಾಘನೀಯ ವಿಷಯ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರ ಕ್ಷೇಮವಾಗಿ ಸಂಘ 1982 ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೆ 6, 25,000 ಸಂಘಗಳನ್ನ ನಿರ್ಮಾಣ ಮಾಡಿ ರಾಜ್ಯದಿಂದ ಹಿಡಿದು ಗ್ರಾಮೀಣ ಭಾಗದವರೆಗೆ ಅಭಿವೃದ್ಧಿಯ ಪಥದತ್ತ ಸಾಗುತ್ತದೆ ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಮಹಿಳೆಯರಿಗೆ ಕಂಕಣ ಭಾಗ್ಯ ಮತ್ತು ಸೌಭಾಗ್ಯ ದೊರೆಯುವುದು ಎಂದು ಧಾರ್ಮಿಕ ವೇದ ಮತ್ತು ಪುರಾಣಗಳಲ್ಲಿ ನಂಬಿಕೆ ಇದೆ ಎಂದು ಹೇಳಿದರು
ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತಿಯ ಅದ್ಯಕ್ಷರಾದ  ಅನುಷ್ಕಾ ನಾಗರಾಜ್ ದೇವರ ತಿಮ್ಮಲಾಪುರ ಶ್ರೀ ಮತಿ ನಾಗರಾಜ್ ಬಿ ಪೂಜಾ ಸಮಿತಿ ಅದ್ಯಕ್ಷರು ಶ್ರೀ ಸಣ್ಣನಿಂಗಪ್ಪ ಪೂಜಾ ಸಮಿತಿ ಉಪಾಧ್ಯಕ್ಷೆರು ಶ್ರೀ ಮತಿ ರೇಣುಖಮ್ಮ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀ ಪಿ ಪ್ರಸನ್ನ ಗ್ರಾ ಪಂ ಸದಸ್ಯರು ಬಿ ಸಿ ಸುಜಾತ ಶ್ರೀ ಸಿ ಸುವರ್ಣಮ್ಮ ಬಸಮ್ಮ ನಾಗಮ್ಮ ನಾಗರತ್ನಮ್ಮ ಸಿ ರೂಪ  ಹನುಮಕ್ಕ ಅಧ್ಯಕ್ಷರು ಮತ್ತು. ಫಕೀರಮ್ಮ ಜಿ ಸುನಿತಾ ರೇಣುಕಮ್ಮ ದೇವರ ತಿಮ್ಮಲಾಪುರ ಹನುಮಕ್ಕ ಇತರೆ ಪದಾಧಿಕಾರಿಗಳು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು