ಗುರುಮಠಕಲ್:ಜು.24: ಲೋಕಕಲ್ಯಾಣಾರ್ಥವಾಗಿ ಸಮಸ್ಥ ಜೀವ ರಾಶಿಗಳಿಗು ಹಾಗೂ ರೈತರಿಗೂ ಸಕಾಲಕ್ಕೆ ಬೆಳೆ ಮಳೆಯಾಗಿ ಭಗವಂತನ ಅನುಗ್ರಹ ದಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿ ಎಂದು ಸೇಡಂ ತಾಲೂಕಿನ ಸುಕ್ಷೇತ್ರ ಮೊತಕಂಪಳ್ಳಿ ಶ್ರೀ ಬಲಭೀಮಶೇನ ದೇವಸ್ಥಾನ ಸನ್ನಿಧಿಯಲ್ಲಿ ವೇದೊಚಿತ ಪೀಠ. ಪೂಜ್ಯ ಮನೊನಿತ ಅನಂತಚಾರ್ಯ ಅಪೆÇಚ್ಚಿ ಕುಲಪತಿಗಳ ಅದ್ವರ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಶ್ರಾವಣ ಅಧಿಕಮಾಸದ ನಿಮಿತ್ಯ ಭೀಮಸೇನ ದೇವರ ಸನ್ನಿಧಿಯಲ್ಲಿ ಜರುಗಿದ ಅನೇಕ ಭಾಗ್ವತ್ ಪಾದರ ಭಕ್ತರು ಹಾಗೂ ಮೊತಕಂಪಳ್ಳಿ ಬಲಭೀಮಶೇನ ದೇವಸ್ಥಾನದ ಅರ್ಚಕ ಪರಿವಾರದವರ ಮತ್ತು ಅನೇಕ ಭಕ್ತರ ಸಮ್ಮುಖದಲ್ಲಿ 33 ಭವಮಾನ ಹೋಮಗಳನ್ನು ಮಾಡಿದರು. ಹನ್ನೆರಡು ತಿಂಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅದಕ್ಕಿಂತ ಹೆಚ್ಚಾಗಿ ಈ ಅಧಿಕ ಶ್ರಾವಣ ಮಾಸಕ್ಕೆ ಇದೆ ಈ ಅಧಿಕ ಮಾಸವನ್ನು ಪುರುಷೋತ್ತಮ ಮಾಸವೆಂದು ಕೂಡ ಕರೆಯುತ್ತಾರೆ ಇಂತಹ ಮಾಸ ಮಾನವ ತನ್ನ ನಿಜ ಜೀವನದಲ್ಲಿ 3 ಅಥವ 4 ಬಾರಿ ಬರುವದು ಇಂತಹ ಪುಣ್ಯ ಕಾರ್ಯದಲ್ಲಿ ಅಂದರೆ ಇವತ್ತಿನ ದಿನ ಸುಕ್ಷೇತ್ರ ದೇವರ ಸನ್ನಿಧಿಯಲ್ಲಿ ಜರುಗುವ 33 ಮಹಾಯಜ್ಞದಲ್ಲಿ ಭಾಗಿಯಾದ ಮಹಾಭಕ್ತರು ಕಣ್ ತುಂಬಿ ಕೊಂಡು ನೋಡಿದರು ಮಹಾ ಭಗವತ್ಪಾದರು ಪಠಿಸುವ ವೇದಮಂತ್ರ ಘೋಷಗಳು ಮಾನವ ಕುಲಕೋಟಿಗಳ ಪುಣ್ಯಾತ್ಮರು ಕೆಳಿದರು ಕೂಡ ಗಂಗಾ ಗೋದಾವರಿ ನದಿ ಸಕಲ ತೀರ್ಥಗಳಲ್ಲಿ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ ಎಂದು ವೇದ ಮೂರ್ತಿಗಳು ಭಾಗ್ವತ್ ಪಾದರು ಅಧಿಕ ಶ್ರಾವಣ ಮಾಸದ ವಿಶೇಷತೆಯನ್ನು ಭಕ್ತರು ಸಮ್ಮುಖದಲ್ಲಿ ಅತ್ಯಂತ ಸಂತೋಷದಿಂದ ಹಂಚಿಕೊಂಡರು.