
ಕಲಬುರಗಿ,ಸೆ.11:ಮಾನವ ಜನ್ಮ ಶ್ರೇಷ್ಠವಾದದ್ದು ಮಾನವ ಜನ್ಮದಲ್ಲಿ ಹುಟ್ಟಿ ಬಂದ ಮೇಲೆ ಪರೋಪಕಾರ ದಯೇ, ಸತ್ಯ, ಶೀಲ, ಸದ್ಗುಣಗಳನ್ನು ಸದಾಚಾರ ಅಳವಡಿಸಿಕೊಳ್ಳಬೇಕೆಂದು ವಿ.ಕೆ. ಸಲಗರದ ತಪೋರತ್ನ ದ್ವಿತಿಯ ಸಾಂಬ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಅವರು ಜೇವರ್ಗಿ ರಸ್ತೆಯಲ್ಲಿರುವ ಕೇಸರಿ ಬೆಟ್ಟದಲ್ಲಿ ಶ್ರಾವಣ ಮಾಸದ ಅಂಗವಾಗಿ ಇಷ್ಠಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನದಲ್ಲಿ ನಿತ್ಯ ಇಷ್ಠಲಿಂಗ ಪೂಜೆ, ವೀಭೂತಿ ರುದ್ರಾಕ್ಷಿಗಳ ಧಾರಣೆ ಪಂಚಾಕ್ಷರಿ ಮಾಹಾಮಂತ್ರ ಜಪ, ಧ್ಯಾನ ಮಾಡುತ್ತಾ ಜೀವನ ನಡೆಸುವವರ ಬಾಳ ಬಂಗಾರವಾಗುತ್ತದೆ. ಅವರ ಆರೋಗ್ಯ ನೆಮ್ಮದಿ, ದೀರ್ಘಾಯುಷ್ಯ ಸಿಗುತ್ತದೆ. ಶ್ರೇಷ್ಠ ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ ಎಂದರು. ಸಲಗರ ಸಂಸ್ಥಾನ ಹಿರೇಮಠದ ಅಂಗ ಸಂಸ್ಥೆಯಾದ ಕೇಸರಿಬೆಟ್ಟ ಶ್ರಾವಣ ಮಾಸದಲ್ಲಿ ಲೋಕಕಲ್ಯಾಣಕ್ಕಾಗಿ ಪೂಜೆ, ಜಪ, ತಪಗಳು ಭಕ್ತರಿಗಾಗಿ ನಡೆಯುತ್ತಿವೆ. ಪೂಜೆಯಲ್ಲಿ ಪಾಲ್ಗೋಂಡ ಭಕ್ತರು ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ನುಡಿದರು. ನಂತರ ದ್ವಿತೀಯ ಸಾಂಭ ಶಿವಾಚಾರ್ಯ ಮಾಹಾಸ್ವಾಮಿಗಳ ಬೆಟ್ಟದ ಜೇವರ್ಗಿ ಗ್ರಾಮದ ದಂಪತಿಗಳಾz ಶ್ರೀಮತಿ ಸಂಗಮ್ಮ ಬಂಡಯ್ಯ ಮಠಪತಿ ಶ್ರೀಗಳ ತುಲಾಭಾರ ನೆರವೇರಿಸಿದರು. ರಾಚಯ್ಯಸ್ವಾಮಿ ಇದ್ದರು.