ಮಾನವ ಕಳ್ಳ ಸಾಗಾಣೆ ಪ್ರಕರಣ: ಪಂಜಾಬಿ ಗಾಯಕ ದಲೇರಿ ಮೆಹಂದಿಗೆ 2 ವರ್ಷ ಜೈಲು

ಪಾಟಿಯಾಲ, ಜು.14- ಮಾನವ ಕಳ್ಳ ಸಾಗಾಣೆ ಪ್ರಕರಣಕ್ಕೆ ಸಂಬಂದಿಸಿದಂತೆ ಪಂಜಾಬ್ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಪಾಟಿಯಾಲ ನ್ಯಾಯಾಲಯ ಎರಡು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಲೇರ್ ಮೆಹಂದಿ ಅವರ ವಿರುದ್ದ 2003 ರಲ್ಲಿ ಮಾನವ ಕಳ್ಳಸಾಕಾಣೆ ಆರೋಪ ಇತ್ತು. ಈ ಸಂಬಂಧ 19 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದು ಈಗ ಶಿಕ್ಷೆ ಪ್ರಕಟಿಸಲಾಗಿದೆ.

ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸುತ್ತಿದ್ಸಂತೆ ಪೊಲೀಸರ್ ದಲೇರ್ ಮೆಹಂದಿ ಅವರನ್ನು ವಶಕ್ಕೆ ಪಡೆದರು.

ದೆಲೇರ್ ಮೆಹಂದಿ ವಿರುದ್ದ ಜಾರಿ ಮಾಡಿದ ಆದೇಶ ಪಶ್ನಿಸಿ ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ ಎಂದು ದೂರುದಾರ ಪರ ವಕೀಲ ಗರ್ ಮೀಟ್ ಸಿಂಗ್ ಹೇಳಿದ್ದಾರೆ.

ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಶೇರ್ ಮೆಹಂದಿ ನನ್ನನ್ನು ಕೆನಡಾಕ್ಕೆ ಕಳುಹಿಸಲು ನನ್ನಿಂದ 13 ಲಕ್ಷ ರೂ.ಪಡೆದಿದ್ದರು.ಆದರೆ ಅವರು ನನ್ನನ್ನು ವಿದೇಶಕ್ಕೆ ಕಳುಹಿಸಲಿಲ್ಲ, ನನ್ನ ಹಣವನ್ನು ಹಿಂದಿರುಗಿಸಲಿಲ್ಲ. ಆ ಸಮಯದಲ್ಲಿ ಅವರು ಜನರನ್ನು ವಿದೇಶಕ್ಕೆ ಕಳುಹಿಸುವ ಕೆಲಸವನ್ನು ಮಾಡುತ್ತಿದ್ದರು ಎಂದು ದೂರುದಾರ ಬಕ್ಷೀಶ್ ಸಿಂಗ್ ಆರೋಸಿದ್ದರು,