ಮಾನವ ಕಳ್ಳ ಸಾಗಣೆಗೆ ದೊಡ್ಡ ಅಪರಾಧ – ಯಲ್ಲಪ್ಪ ಬಾದರದಿನ್ನಿ

ಮಾನ್ವಿ,ಆ.೦೧- ಮಕ್ಕಳನ್ನಾಗಲಿ ಮಹಿಳೆಯರನ್ನಾಗಲಿ ಮಾರಾಟ ಮಾಡುವುದು ಭಾರತೀಯ ಕಾನೂನಿನಲ್ಲಿ ಬಾರಿ ದೊಡ್ಡ ರೀತಿಯ ಕಾನೂನು ಅಪರಾಧವಾಗಿದೆ ಅಂತಹವರಿಗೆ ಸಂವಿಧಾನದಡಿಯಲ್ಲಿ ಹತ್ತು ವರ್ಷ ಶಿಕ್ಷೆ ನೀಡಬಹುದಾಗಿದೆ ಎಂದು ಯಲ್ಲಪ್ಪ ಬಾದರದಿನ್ನಿ ವಕೀಲರು ಹೇಳಿದರು.
ಪಟ್ಟಣದ ಶಾರದಾ ಕಾಲೇಜಿನಲ್ಲಿ ತಾಲೂಕ ಸೇವಾ ಸಮಿತಿ ಹಾಗೂ ತಾಲೂಕ ವಕೀಲರ ಸಂಘದಿಂದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ನ್ಯಾಯದೀಶರಾದ ಶಿವರಾಜ ವಿ ಸಿದ್ದೇಶ್ವರ ಉದ್ಘಾಟಿಸಿ ಮಾತಾನಾಡಿದ ಅವರು ಮಾನವ ಕಳ್ಳ ಸಾಗಾಣಿಕೆ ಕುರಿತು ಕಾನೂನಿನ ಅಪರಾಧಗಳ ಕುರಿತು ಮಾಹಿತಿ ನೀಡಿದರು. ನಂತರ ಸಿವಿಲ್ ನ್ಯಾಯದೀಶರಾದ ಆಶಪ್ಪ ಸಣ್ಣಮನಿಯವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾನವ ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ ೧೧೨ ಹಾಗೂ ೧೦೯೮ ನಂಬರಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದರು..
ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕಿ ಅರ್ಚನಾ ಹನುಮೇಶ, ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಕಾರ್ಯದರ್ಶಿ ರವಿಕುಮಾರ ಪಾಟೀಲ, ಎಬಿ ಉಪ್ಪಳಮಠ, ಗುಮ್ಮ ಬಸವರಾಜ, ಸಂಸ್ಥೆಯ ಅಧ್ಯಕ್ಷ ಕಿಶೋರ, ಪ್ರಾಚಾರ್ಯ ವೀರಭದ್ರಯ್ಯ ಹಿರೇಮಠ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.