ಮಾನವ ಕಂಪ್ಯೂಟರ ಎಂದೇ ಖ್ಯಾತಿ ಪಡೆದ ಬಸವರಾಜ ಉಮ್ರಾಣಿ

ಭಾಲ್ಕಿ : ಸೆ.25:ಬಸವರಾಜ್ ಉಮ್ರಾಣಿ ಅಥಣಿ ಅವರು ಕಣ್ಣಿನಿಂದ ಕುರುಡರಿದ್ದರು. ಪೆನ್ನು ಮತ್ತು ಕಪ್ಪುಹಲಗೆ ಬಳಸದೆ ಮಕ್ಕಳಿಗೆ ಗಣಿತ ವಿಷಯದಲ್ಲಿ ಯಾವುದೇ ಲೆಕ್ಕ ಮಾಡಿ ತೋರಿಸುವ ಸಾಮಥ್ರ್ಯ ಅವರದಾಗಿದೆ. ದೇವರು ಕೊಟ್ಟ ಸ್ಮರಣಶಕ್ತಿ ಎಂದೇ ಹೇಳಬಹುದು, ಸ್ಮರಣಶಕ್ತಿ ಜ್ಞಾನಶಕ್ತಿಯಲ್ಲಿ ಎಷ್ಟು ಜನ ಕಣ್ಣಿದ್ದು ಕುರುಡರಾಗುತ್ತಾರೆ. ಆದರೆ ಭಗವಂತ ಅವರಿಗೆ ಎಂತಹ ಜ್ಞಾನ ಕೊಟ್ಟಿರಬಹುದು .
ಬಸವರಾಜು ಅವರು ಶ್ರೀ ಸಂಗಮೇಶ್ವರ ಪ್ರೌಢಶಾಲೆ ಭಾಲ್ಕಿ ಶಾಲೆಗೆ ಭೇಟಿ ನೀಡಿ ಗಣಿತ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಮಕ್ಕಳಿಗೆ ಬೋಧಿಸಿದರು. ಅವರು ಅನೇಕ ಟಿವಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಭೇಟಿ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶ-ವಿದೇಶದಲ್ಲಿ ಸಹ ಅವರು ಉಪನ್ಯಾಸ ನೀಡುತ್ತಾರೆ. ಬಸವರಾಜ್ ಅವರು ಮಾನವ ಕಂಪ್ಯೂಟರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಅವರ ಬೋಧನೆಗೆ ಶಾಲಾ ಮುಖ್ಯಸ್ಥರಾದ ವಿಶ್ವನಾಥ್ ಪಕ್ಕಾ, ಶಿಕ್ಷಕರಾದ ಪ್ರದೀಪ ಘoಟೆ, ಶಿವರಾಜ್ ಯಾಲಾ,ಸಂಗಮೇಶ್ ಹಳ್ಳಿಖೇಡೆ, ಪರಮೇಶ್ವರ ಕಡಾಳೆ, ಪುಂಡಲಿಕ ಚೌಹಾಣ ,ದೆವರಾಜ್ ಕುಂಬಾರ್ , ಬಾಬು ಬೆಲ್ದಾಳ ಹಾಗೂ ಶಿಕ್ಷಕ ವೃoಧ ಹರ್ಷ ವ್ಯಕ್ತಪಡಿಸಿದ್ದಾರೆ.