ಮಾನವೀಯ ಮೌಲ್ಯ ಸಂಬಂಧಗಳು ಬದಲಾಗಬಾರದು : ರಂಭಾಪುರಿ ಶ್ರೀ

 ಬಾಳೇಹೊನ್ನೂರು. ನ.೬; ಮನುಷ್ಯನ ಸ್ಥಾನಮಾನಗಳು ಮತ್ತು ಆಸ್ತಿಗಳು ಬದಲಾಗಬಹುದು. ಆದರೆ ಮಾನವೀಯ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳು ಎಂದೆಂದಿಗೂ ಬದಲಾಗದಂತಿರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ನಗರದ ಶಾಸಕ ಕಳಕಪ್ಪ ಬಂಡಿಯವರು ಸಂಘಟಿಸಿದ ಬಲಿ ಪಾಡ್ಯಮಿ ಗೋ ಪೂಜಾ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು. ಹೂವಿನ ಪರಿಮಳ ಗಾಳಿ ಬಂದ ದಿಕ್ಕಿನಲ್ಲಿ ಮಾತ್ರ ಪಸರಿಸಿದರೆ ಮನುಷ್ಯನ ಒಳ್ಳೆಯತನದ ಪರಿಮಳ ಎಲ್ಲೆಡೆಯೂ ಹಬ್ಬುತ್ತದೆ. ಆರ್ಥವಲ್ಲದ ಓದು, ಶಾಂತಿಯಿಲ್ಲದ ಮನೆ, ರುಚಿಯಿಲ್ಲದ ಅಡಿಗೆ, ಖುಷಿಯಿಲ್ಲದ ಜೀವನ, ಮಧುರತೆಯಿಲ್ಲದ ಮಾತು, ನೀತಿಯಿಲ್ಲದ ಬದುಕು, ನಿಷ್ಠೆಯಿಲ್ಲದ ಧ್ಯಾನ ಜೀವನದಲ್ಲಿ ಯಾವತ್ತೂ ಇರಬಾರದು. ಭಾರತೀಯ ಆಧ್ಯಾತ್ಮ ಸಂಪತ್ತು ಅಪಾರವಾಗಿದ್ದು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಧಾರ್ಮಿಕ ಸಂಪ್ರದಾಯ ಮತ್ತು ಆಚರಣೆಗಳು ಮನುಷ್ಯನ ಮಾನಸಿಕ ಶಾಂತಿ ನೆಮ್ಮದಿಗೆ ಪ್ರೇರಕ ಶಕ್ತಿಯಾಗಿವೆ. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲರಿಗೂ ಹಿತವನ್ನು ಬಯಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಧರ್ಮದ ದಶವಿಧ ಸೂತ್ರಗಳು ಜೀವನ ಶ್ರೇಯಸ್ಸಿಗೆ ಅವಶ್ಯಕವಾಗಿವೆ. ಗೋಮಾತೆಯನ್ನು ಪವಿತ್ರ ಭಾವನೆಯಿಂದ ಪೂಜಿಸುವ ಪರಿಪಾಠವಿದೆ. ಗೋ ಮಾತೆಯಲ್ಲಿ ಅದ್ಭುತ ಶಕ್ತಿ ಮತ್ತು ಸಂಪನ್ಮೂಲ ಶಕ್ತಿಯನ್ನು ಕಾಣಬಹುದು. ಬಲಿ ಪಾಡ್ಯಮಿಯಂದು ಸರಕಾರ ಗೋ ಪೂಜಾ ಕಾರ್ಯಕ್ರಮಕ್ಕೆ ಉತ್ತೇಜನ ಕೊಟ್ಟಿರುವುದನ್ನು ಹೃದಯ ತುಂಬಿ ಬೆಂಬಲಿಸುತ್ತೇವೆ ಎಂದರು. ಸಮಾರಂಭವನ್ನು ಉದ್ಘಾಟಿಸಿದ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಮಾತನಾಡಿ ಮನುಷ್ಯ ಜೀವನದಲ್ಲಿ ಗುರು ಮತ್ತು ಗುರಿ ಇರಲೇಬೇಕು. ಶಾಂತಿ ನೆಮ್ಮದಿಗೆ ಧರ್ಮಾಚರಣೆ ಅವಶ್ಯಕ. ಹಿಂದಿನ ಪೂರ್ವಜರು ಹಾಕಿದ ಆದರ್ಶ ಪದ್ಧತಿಗಳು ಸುಖ ಸಂತೋಷಕ್ಕೆ ಸೋಪಾನವಾಗಿವೆ. ಶ್ರೀ ರಂಭಾಪುರಿ ಜಗದ್ಗುರುಗಳು ಸಂಸ್ಕೃತಿ, ಸಾಮರಸ್ಯ ಸಂವರ್ಧನೆಗೆ ನಿರಂತರ ಶ್ರಮಿಸುತ್ತಿದ್ದಾರೆ ಎಂದರು.  ಮುಖ್ಯ ಅತಿಥಿಗಳಾಗಿ ಚಂದ್ರಶೇಖರಯ್ಯ ಹಿರೇಮಠ, ಡಾ. ಬಿ.ವಿ.ಕಂಬಳ್ಯಾಳ, ಪುರಸಭಾ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ರು, ರೋಣ ತಾಲೂಕ ಬಿ.ಜೆ.ಪಿ.ಅಧ್ಯಕ್ಷ ಮುತ್ತಣ್ಣ ಕಡಗದ ಸೇರಿದಂತೆ ಹಲವಾರು ಗಣ್ಯರು ಮತ್ತು ಧರ್ಮಾಭಿಮಾನಿಗಳು ಶ್ರೀ ರಂಭಾಪುರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು. ನ್ಯಾಯವಾದಿ ಬಿ.ಎಂ. ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಸಂಗಡಿಗರಿAದ ಸಂಗೀತ ಕಾರ್ಯಕ್ರಮ ಜರುಗಿತು. ಶಿವಾನಂದ ಮಠದ ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ಗೋ ಪೂಜಾ ನಿಮಿತ್ಯ ಮುತ್ತೆöÊದೆÀಯರಿಗೆ ಉಡಿ ತುಂಬಿ ರುದ್ರಾಭಿಷೇಕ ಪೂಜಾ ಸಮಾರಂಭಗಳು ಜರುಗಿದವು.