ಮಾನವೀಯ ಮೌಲ್ಯ ವೈಭವೀಕರಿಸುವುದೇ ಸಾಂಸ್ಕೃತಿಕ ಚಟುವಟಿಕೆಗಳು

ದಾವಣಗೆರೆ-ಮಾ.26:ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಲಲಿತಕಲೆಗಳ ಎಲ್ಲಾ ಪ್ರಕಾರಗಳು ಮಾನವನ ಮಾನವೀಯ ಮೌಲ್ಯಗಳನ್ನು ವೈಭವೀಕರಿಸುವ, ಖಿನ್ನತೆಯ ಮನಸ್ಸುಗಳನ್ನು ಪುಳಕಿತಗೊಳಿಸುವ ದಿವ್ಯ ಶಕ್ತಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದೆ. ನಮ್ಮ ಜೀವನದ ದುಡಿಮೆಯ ಜತೆಯಲ್ಲಿ ಈ ಸಾಂಪ್ರದಾಯಿಕ ಪರಂಪರೆ, ನಮ್ಮ ಸಂಸ್ಕೃತಿ, ಸಂಸ್ಕಾರ, ಸಭ್ಯತೆ, ಸೌಮ್ಯತೆಗಳನ್ನು ತೊಡಗಿಸಿಕೊಂಡಾಗ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ನಗರದ ಭರತಾಂಜಲಿ ನೃತ್ಯ ಕಲಾ ಅಕಾಡೆಮಿಯ ಪ್ರಾಚಾರ್ಯರಾದ ಡಾ|| ಮಂಗಳಾ ಶೇಖರ್ ತಮ್ಮ ಅಂತರಾಳದ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ನಿನ್ನೆ ದಿನ ಕಸ್ತೂರ್ಬಾ ಬಡಾವಣೆಯ ಕಲಾಕುಂಚದ ಕಛೇರಿಯ ಸಭಾಂಗಣದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ “ದಾವಣಗೆರೆಯ ಗೃಹಿಣಿ ಸ್ಪರ್ಧೆ” ಯನ್ನು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಭರತನಾಟ್ಯದ ಪುರಾತನ ಇತಿಹಾಸವನ್ನು ಪರಿಪೂರ್ಣವಾಗಿ ವಿವರ ನೀಡಿದರು.ಶ್ರೀಮತಿ ಜ್ಯೋತಿ ಗಣೇಶ್ ಶೆಣೈಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆಯ ಸ್ವಚ್ಛ ಕರ್ಮಚಾರಿ ಶ್ರೀಮತಿ ರೇಣುಕಮ್ಮ ದುಗ್ಗಪ್ಪ ಮಾತನಾಡಿ, ಗೃಹಿಣಿ ಸ್ಪರ್ಧೆಯ ಸ್ಪರ್ಧಿಗಳಿಗೆ ಶುಭ ಕೋರಿದರು. ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಮತಿ ವಸಂತಿ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಮಾತನಾಡಿ, ಮೂಲೆಗುಂಪಾಗುತ್ತಿರುವ ಮಹಿಳೆಯರ ಸೂಕ್ತ ಪ್ರತಿಭೆಗಳನ್ನು ಮುಕ್ತವಾದ ವೇದಿಕೆ ಕಲ್ಪಿಸಿ ಅನಾವರಣಗೊಳಿಸುವ ಈ ಕಾಯಕ ಸಂಸ್ಥೆಯ ಗೌರವ ಹೆಚ್ಚುತ್ತಿರುತ್ತದೆ ಎಂದರು.ಬೆಳಿಗ್ಗೆಯಿAದ ಸಂಜೆಯ ತನಕ ದಾವಣಗೆರೆ ಗೃಹಿಣಿ ಸ್ಪರ್ಧಿಗಳು ನೆನಪಿನ ಶಕ್ತಿ, ಆಶುಭಾಷಣ, ಲಿಖಿತ ಪರೀಕ್ಷೆ, ರಸರಂಜನೆ, ಆಟೋಟಸ್ಪರ್ಧೆಗಳಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸಿ ಸಂತೋಷಪಟ್ಟರು. ಶ್ರೀಮತಿ ಶೈಲಾ ವಿನೋದ್ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕಲಾಕುಂಚ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲೀಲಾ ಸುಭಾಷ್ ವಂದಿಸಿದರು.