ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಕರೆ

ಕೋಲಾರ,ನ.೧೩:ಭವ್ಯ ಭಾರತದ ಪ್ರಜೆಗಳಾಗಬೇಕಾದ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಗುರು-ಹಿರಿಯರು ತಂದೆ-ತಾಯಿಗಳೆಂಬ ಬಾಂಧವ್ಯವನ್ನು ಗಟ್ಟಿಮಾಡುವ ನಿಟ್ಟಿನಲ್ಲಿ ಬೆಳವಣಿಗೆ ಶಿಕ್ಷಣವನ್ನು ಪಡೆದಾಗ ಉತ್ತಮ ಉದಾತ್ತ ಗುಣಗಳು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ತಿಳಿಸಿದರು.
ತಾಲ್ಲೂಕಿನ ಯಲವಾರ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಂದು ಸಾಲು ಮರದ ತಿಮ್ಮಕ್ಕೆ ಇಕೋ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಚಳಿಗಾಲ ಆರಂಭವಾಗಿದೆ. ಮನೆಯಲ್ಲಿ ಇರುವ ತಾತ, ಅಜ್ಜಿ ಅಪ್ಪ, ಅಮ್ಮ ಸಂಬಂಧಗಳಿಗೆ ಹೆಚ್ಚಿನ ಆಧ್ಯತೆ ನೀಡುವಂಹತದ್ದನ್ನು ವಿದ್ಯಾರ್ಥಿ ದೆಸೆಯಲ್ಲಿ ಕಲಿಯಬೇಕು. ತಮ್ಮನ್ನು ಸಾಕಿ ಬೆಳೆಸಿದ ಹಿರಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಕಾರ್ಯ ನಿರಂತರವಾಗಬೇಕು. ಈ ದೆಸೆಯಲ್ಲಿ ಅಕ್ಷರ ಆರೋಗ್ಯ ವೃದ್ಧಿಗೆ ತಮ್ಮನ್ನೇ ತಾವು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಮನೆಗೆ ಎರಡು ಗಿಡ, ಊರಿಗೆ ಒಂದು ವನ ಎಂಬುದು ಹಳೆಯ ಮಾತು, ಶಾಲೆಯಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ವಾತಾವರಣವನ್ನು ಸುಂದರಗೊಳಿಸುವ ಜೊತೆಗೆ ಆಮ್ಲಜನಕ ಪಡೆಯಲು ವಿದ್ಯಾರ್ಥಿಗಳು ಸನ್ನದ್ಧರಾಬೇಕು ಎಂದರು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೈ.ಎಂ.ಮುನಿಸ್ವಾಮಿ ಮಾತನಾಡಿ ಶಾಲೆ ಉತ್ತಮ ಮಟ್ಟದಲ್ಲಿದ್ದು, ಇದರೊಂದಿಗೆ ಮುಂದಿನ ದಿನಗಳಲ್ಲಿ ಇಂಗ್ಲೀಷ್ ಮಾದ್ಯಮವನ್ನು ಆರಂಭಿಸಲು ಅಗತ್ಯ ಅನುಕೂಲ ಕಲ್ಪಿಸಬೇಕೆಂದು ಕೋರಿದರು.
ಮುಖ್ಯೋಪಾಧ್ಯಾಯಿನಿ ವಿ.ಭಾಗ್ಯಲಕ್ಷ್ಮಮ್ಮ ಮಾತನಾಡಿ ವಿದ್ಯಾರ್ಥಿಗಳ ಪ್ರಗತಿಗೆ ಪೋಷಕರು ಮತ್ತು ಶಾಲಾಭಿವೃದ್ಧಿ ಸಮಿತಿ, ಗ್ರಾಮ ಪಂಚಾಯಿತಿ ಸದಸ್ಯರು ಸಹಕಾರ ನೀಡಿರುವುದು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದ್ದು, ಈ ದೆಸೆಯಲ್ಲಿ ಶಿಕ್ಷಕರ ಸೇವೆ ಸುತ್ಯಾರ್ಹ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಾಮಕೃಷ್ಣಪ್ಪ, ಸಹ ಶಿಕ್ಷಕರುಗಳಾದ ವಿ.ಶ್ರೀನಿವಾಸ್, ವಿ.ಕೆ.ಬಾಬು, ಎಂ.ರವಿ, ಕೆ.ಎನ್.ಪದ್ಮ, ಟಿ.ಎಂ.ಉಮಾದೇವಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮುನಿನಂಜಪ್ಪ, ನಾಗೇಶ್, ನಂದೀಶ್, ತ್ಯಾಗರಾಜ್, ಶ್ರೀನಿವಾಸ್, ಗೂಳಪ್ಪ, ಶಶಿಕಲಾ, ತೇಜಶ್ವಿನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶೈಲಜಾ, ರಮ್ಯ, ವೆಂಕಟೇಶ್, ಅಂಗನವಾಡಿ ಶಿಕ್ಷಕಿ ಮುನಿರತ್ನಮ್ಮ, ಶೋಭಾ, ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.