ಮಾನವೀಯ ಮೌಲ್ಯಗಳ ಪ್ರತಿರೂಪ ಶ್ರೀರಾಮ ಜಪದಲ್ಲಿ ಇದೆ

 ದಾವಣಗೆರೆ.ನ.೨೦;  ಶ್ರೀರಾಮ ಜಪದಿಂದ ಮಾನವನ ಪೂರ್ಣ ಪ್ರಮಾಣದ ಪಾಪಗಳ ಪರಿಹಾರಕ್ಕೆ ನಾಂದಿಯಾಗುತ್ತದೆ. ಮಾನವನಾಗಿ ಅವತಾರವೆತ್ತಿದ ಶ್ರೀ ಮಹಾವಿಷ್ಣು ಸರಳವಾಗಿ ಮಾನವನ ಜೀವನವನ್ನು ತನ್ನ ಅವತಾರದಲ್ಲಿ ಬಿಂಬಿಸಿ ಮನುಷ್ಯನ ಸದ್ಗತಿಗೆ, ಸನ್ಮಾರ್ಗಕ್ಕೆ ದಾರಿದೀಪವಾಗಿದ್ದಾನೆ. ಮಾನವೀಯ ಮಾಲ್ಯಗಳ ಪ್ರತಿರೂಪ ಶ್ರೀರಾಮ ತಾರಕ ಜಪದಲ್ಲಿ ಇದೆ ಎಂದು ದಾವಣಗೆರೆಯ ಶ್ರೀ ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ತ್ಯಾಗೀಶಾನಂದ ಮಹಾರಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ಸ್ಪೂರ್ತಿ ಸೇವಾ ಟ್ರಸ್ಟ್, ಶಾಸ್ತಿçಹಳ್ಳಿ ಅಭಯಾಶ್ರಮ, ಶ್ರೀ ಗಾಯತ್ರಿ ಪರಿವಾರ ಹಾಗೂ ಇಸ್ಕಾನ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಳ್ಳಳಾದ “ಆಧ್ಯಾತ್ಮ ಉತ್ಸವ” ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದಾವಣಗೆರೆಯ ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಧರ್ಮಶಾಲಾ ಆವರಣದಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದ ಈ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರಾದ ಅವಧೂತ ಚಂದ್ರದಾಸ್ ಮಾತನಾಡಿ, ಶ್ರೀರಾಮ ಧ್ಯಾನದಿಂದ ಆಧ್ಮಾತ್ಯ ಸೇವೆಗಳಿಂದ ಯಾವುದೇ ಜಾತಿ, ಮತ, ಬೇಧವಿಲ್ಲದೇ ಮಾನವನ ಪಾಪಗಳಿಗೆ ಮುಕ್ತಿ ದೊರೆಯುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ಡಾ. ಸುಶೀಲಮ್ಮ ಮಾತನಾಡಿ, ಮಧ್ಯ ಕರ್ನಾಟಕದ ದೇವನಗರಿಯಲ್ಲಿ ಶ್ರೀ ಗಾಯತ್ರಿ ದೇವಿ ದೇವಸ್ಥಾನ ಇಲ್ಲದಿರುವುದು ವಿಷಾದದ ಸಂಗತಿ. ದಾವಣಗೆರೆಯಲ್ಲಿ ಶ್ರೀ ಗಾಯತ್ರಿ ದೇವಿ ದೇವಸ್ಥಾನ ನಿರ್ಮಾಣಕ್ಕೆ ಎಲ್ಲಾ ಭಕ್ತಾಧಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ಪೂರ್ತಿ ಸೇವಾ ಟ್ರಸ್ಟ್ನ ಸಂಸ್ಥಾಪಕರಾದ ಬಿ.ಸತ್ಯನಾರಾಯಣ ಮೂರ್ತಿ ಮಾತನಾಡಿ, 2 ದಿನಗಳ ಈ ಆಧ್ಯಾತ್ಮ ಉತ್ಸವಕ್ಕೆ ಎಲ್ಲಾ ರೀತಿಯಲ್ಲಿ ಸಹಕಾರ, ಸಹಯೋಗ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.ಶ್ರೀ ಗರುಡ ಧ್ವಜಾರೋಹಣದಿಂದ ಪ್ರಾರಂಭವಾದ ಈ ಆಧ್ಯಾತ್ಮ ಉತ್ಸವದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದೇವರಮನಿ ಶಿವಕುಮಾರ್, ದಾವಣಗೆರೆ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಎಸ್.ಟಿ.ವೀರೇಶ್‌ರವರ ಉಪಸ್ಥಿತಿಯಲ್ಲಿ ಶ್ರೀ ರಾಮತಾರಕ ಯಜ್ಞ, ಶ್ರೀಕೃಷ್ಣ ನಾಮಕೀರ್ತನೆ, ಶ್ರೀ ದಾಮೋದರ ದೀಪೋತ್ಸವ ಶ್ರೀ ತುಳಸಿ ಕಲ್ಯಾಣ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ವೇದಮೂರ್ತಿ ಜಯತೀರ್ಥಾಚಾರ್ ಮತ್ತು ವೇದಮೂರ್ತಿ ಶಂಕರನಾರಾಯಣ ಶಾಸ್ತಿç ಮತ್ತು ಶಿಷ್ಯವೃಂದ ಸುಸಂಪನ್ನವಾಗಿ ನಡೆಸಿಕೊಟ್ಟರು. ಶ್ರೀ ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ಪ್ರಸ್ತಾವನೆಯಾಗಿ ಮಾತನಾಡಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.ಶ್ರೀಮತಿ ಶ್ರೀಲಕ್ಷ್ಮಿ ಆದಿತ್ಯಾಶಾಸ್ತಿçಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್, ಭಾವನ್ನಾರಾಯಣ, ಜಿ.ಬಿ.ಲೋಕೇಶ್, ಶ್ರೀಮತಿ ಶೈಲಾ ವಿಜಯಕುಮಾರ್ ಶೆಟ್ಟಿ, ಡಾ.ಸಿ.ಕೆ.ಆನಂದತೀರ್ಥಾಚಾರ್, ಶ್ರೀಮತಿ ಸುಮಾ ಏಕಾಂತಪ್ಪ, ಎ.ಕೊಟ್ರಪ್ಪ ಕಿತ್ತೂರು, ಶ್ರೀಮತಿ ಜ್ಯೋತಿ ಗಣೇಶ್‌ಶೆಣೈ, ಸುಜಾತ ಬಸವರಾಜಿ, ಶ್ರೀಲಕ್ಷಿö್ಮÃ ಆಂಜನೇಯ, ಶ್ರೀಮತಿ ಸಾವಿತ್ರಮ್ಮ ಶಂಕರ ನಾರಾಯಣ ಶಾಸ್ತಿç ಮುಂತಾದವರು ಉಪಸ್ಥಿತರಿದ್ದರು.

Attachments area

ReplyReply to allForward