ಮಾನವೀಯ ಮೌಲ್ಯಗಳ ತಿಳುವಳಿಕೆ ಅಗತ್ಯ

ವಿಜಯಪುರ, ಏ.೯-ಬರುತ್ತಿರುವ ರಣಬಿಸಿಲಿನಲ್ಲಿ ಮಾತು ಬರುವ ಮನುಷ್ಯ ಹೇಗೋ ತನ್ನ ಬಾಯಾರಿಕೆ ನೀಗಿಸಿಕೊಳ್ಳುವನು. ಆದರೆ ಮಾತು ಬಾರದ ಪ್ರಾಣಿ, ಪಕ್ಷಿಗಳ ಬಾಯಾರಿಕೆ ನೀಗುವ ಕೆಲಸ ಎಲ್ಲರೂ ಮಾನವೀಯತೆಯ ನೆಲೆಯಲ್ಲಿ ಮಾಡಬೇಕಾಗಿದೆ ಎಂದು ಸೋದರಿ ನಿವೇದಿತಾ ಪ್ರತಿಷ್ಟಾನದ ಸಂಚಾಲಕಿ ಭಾರತಿ ಪ್ರಭುದೇವ್ ತಿಳಿಸಿದರು.
ಅವರು ಜೆ.ಸಿ.ಬಡಾವಣಿಯ ಪಾರ್ಕ್‌ನಲ್ಲಿ ಪಕ್ಷಿಗಳ ದಾಹ ನೀಗಲು ಮರಗಳಿಗೆ ಕುಡಿಯುವ ನೀರಿನ ಮಡಕೆಗಳನ್ನು ಕಟ್ಟಿ, ವಾಯುವಿಹಾರಕ್ಕೆ ಬರುವವರಿಗೆ ಮಡಕೆಯಲ್ಲಿ ನೀರು ತುಂಬಲು ಮನವಿ ಮಾಡಿ, ಮಾತನಾಡಇದರು.
ಏಪ್ರಿಲ್ ತಿಂಗಳನ್ನು ಪಾಶ್ಚಿಮಾತ್ಯರಂತೆ ಏಪ್ರಿಲ್ ಫೂಲ್ ಆಗಿ, ಅರ್ಥೈಸದೇ, ಭಾರತೀಯ ಸಂಸ್ಕಾರದೊಂದಿಗೆ ಏಪ್ರಿಲ್ ಕೂಲ್ ಆಗಿ ಬಳಸಿ, ಪ್ರಾಣಿ, ಪಕ್ಷಿಗಳ ದಾಹ ನೀಗುವಂತಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೇದಿತ ಪ್ರತಿಷ್ಟಾನದ ಗೌರಿಗೋಪಾಲಕೃಷ್ಣ, ಅನ್ನಪೂರ್ಣಮಂಜುನಾಥ್, ನಿಶಾಂತ್, ಮತ್ತಿತರರು ಸರಕಾರಿ ಆಟದ ಮೈದಾನ, ಹಾಗೂ ಜೆ.ಸಿ.ಬಡಾವಣೆಯಲ್ಲಿನ ಮರಗಿಡಗಳಿಗೆ ನೀರಿನ ಮಡಕೆಗಳನ್ನು ಕಟ್ಟಲಾಯಿತು.
ವಾಯುವಿಹಾರಕ್ಕೆ ಬರುವವರು ತಮ್ಮೊಂದಿಗೆ ಒಂದೊಂದು ಬಾಟಲ್ ಕುಡಿಯುವ ನೀರನ್ನು ತಂದು ಮಡಕೆಗಳಲ್ಲಿ ತುಂಬಬೇಕೆಂದು ಮನವಿ ಮಾಡಿದರು.