
ಬೀದರ್: ಎ.24:ಮಾನವಿಯ ಮೌಲ್ಯಗಳು ಮಹಿಳೆಯರ ನೈಜ ಭೂಷಣವಾದಾಗ ಸಮಾಜ ಪರಿಚರ್ತನೆ ಸಾಧ್ಯವಿದೆ ಎಂದು ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕಮವರು ನುಡಿದರು.
ಇತ್ತಿಚೀಗೆ ಚಿಕಪೇಟ್ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಮಹಿಳಾ ವಸತಿ ನಿಲಯದಲ್ಲಿ ನೆಹರು ಯುವ ಕೇಂದ್ರ ಬೀದರ್ ಹಾಗೂ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಮಹಿಳೆಯನ್ನು ದೇವತೆಗೆ ಸಮಾನವಾಗಿ ಕಾಣಲಾಗಿದೆ. ದೇಶದ ನದಿಗಳು, ಭೂಮಿ ಇತ್ಯಾದಿ ಪ್ರಕೃತಿಕ ವಸ್ತುಗಳನ್ನು ಸಹ ಮಹಿಳೆ ಹೆಸರಿಂದ ಸಂಭೋದಿಸಲಾಗಿದೆ,. ಹೀಗಿರುವಾಗ ಮಹಿಳೆ ತನ್ನ ಅಂತಶಕ್ತಿ ಜಾಗೃತಗೊಳಿಸಿಕೊಂಡು ಎತ್ತರದಲ್ಲಿ ನಿಲ್ಲಬೇಕಾಗಿದೆ ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಮಹಿಳಾ ಶೋಷಣೆ ತಗ್ಗಿಸಿ, ಆಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ವೇದಿಕೆಯಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ಉದ್ಘಶಾಟಿಸಿದ ನಗರ ಸಭೆ ಸದಸ್ಯೆ ಉಲ್ಲಾಸಿನಿ ಮುದಾಳೆ ಮಾತನಾಡಿ, ಇಂದು ಮಹಿಳೆ ಎಲ್ಲ ರಂಗಗಳಲ್ಲಿ ಗುರ್ತಿಸಿದರೂ ಗ್ರಾಮೀಣ ಭಾಗದ ಮಹಿಳೆ ಆತ್ಮಶಕ್ತಿಯಿಂದ ವಂಚಿತರಾಗುತ್ತಿರುವಳು. ಆಕೆಗೆ ತನ್ನ ನೈಜ ಶಕ್ತಿಯ ಅರಿವಾದಾಗ ಪುಟಿದೇಳುವಳು. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಅಧಿಕಾರ ದುರುಪಯೋಗವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯುಟೌನ್ ಪೋಲಿಸ್ ಠಣೆಯ ಪಿ.ಎಸ್.ಐ ಯಶೋದಾ ಕಟಗಿ ಮಾತನಾಡಿ, ಮಹಿಳೆ ಮನಸ್ಸು ಮಾಡಿದರೆ ಏನನ್ನು ಮಾಡಲು ಸಾಧ್ಯ. ಪುರುಷರಿಗಿಂತ ಅಧಿಕ ಶಕ್ತಿ ಮಹಿಳೆಯರಲ್ಲಿ ಇರುತ್ತದೆ ಎಂಬುದು ಆಕೆಯ ಅರಿವಿಗೆ ಬರಬೇಕು. ತನ್ನ ಮರ್ಯಾದೆಗಂಜಿ ಶೋಷಣೆ ಸಹಿಸುತ್ತಿರುವಳು. ಇದನ್ನು ಧಿಕ್ಕರಿಸಿ ವೀರವನಿತೆಯರನ್ನು ಮಾದರಿಯಾಗಿಸಿಕೊಂಡು ಬಲಿಷ್ಟ ಭಾರತದ ಬಲಿಷ್ಟ ಮಹಿಳಾ ಮಣಿಗಳಾಗಿ ಹೊರ ಹೊಮ್ಮಬೇಕೆಂದು ಕರೆ ನೀಡಿದರು.
ವಸತಿ ನಿಲಯದ ಮೇಲ್ವಿಚಾರಕಿ ಅನುರಾಧಾ ವೇದಿಕೆಯಲ್ಲಿದ್ದರು. ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಮಂಗಲಾ ಮರಕಲೆ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ನಾಗಮಣಿ, ಹಾಸ್ಟೆಲ್ ಮೇಲ್ವಿಚಾರಕಿ ಸಂಗೀತಾ, ಅಲ್ಲಿಯ ವಿದ್ಯಾರ್ಥಿನಿಯರಾದ ಕು.ಸಾಕ್ಷಿ, ಕು.ಭಾಗ್ಯಶ್ರೀ, ಕು.ಪೂಜಾ ಹಾಗೂ ಕು.ಸುನಿತಾ ಅವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಸುನಿತಾ ಮರಕಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನೆಹರು ಯುವ ಕೇಂದ್ರದ ಕಾರ್ಯಕರ್ತರು, ಮಹಿಳಾ ಮಂಡಳದ ಸದಸ್ಯರು, ವಸತಿ ನಿಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿದ್ದರು.