ಮಾನವೀಯ ಮೌಲ್ಯಗಳು ಕಲಿಸುವುದೇ ಎನ್ ಎಸ್‍ಎಸ್ ಉದ್ದೇಶ: ರಾಜಶೇಖರ್ ಸೀರಿ

ಜೇವರ್ಗಿ:ಜೂ.27: ಸಮಾಜದಲ್ಲಿ ಪ್ರೀತಿ ಸಾಮರಸ್ಯ ಸಹಬಾಳ್ವೆ ಬಾಳಿ ಬದುಕಬೇಕು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದೇ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ದೇಶ ಎಂದು ಅಖಿಲ ಭಾರತ ವೀರಶೈವ ಸಮಾಜದ ತಾಲೂಕ ಅಧ್ಯಕ್ಷರು ರಾಜಶೇಖರ್ ಸಾಹುಕಾರ್ ಸೀರಿ ಹೇಳಿದರು
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಸಮಾಜದ ಕಟ್ಟ ಕಡೆ ವ್ಯಕ್ತಿಯು ಶಿಕ್ಷಣ ಸಂವಿಧಾನದ ಆಶಯವಾಗಿದೆ ಎಂದು ಹೇಳಿದರು ಸಾನಿಧ್ಯ ವಹಿಸಿದ ಡಾಕ್ಟರ್ ಶಿವಾನಂದ ಮಹಾಸ್ವಾಮಿಗಳು ಸೋನ್ನ ಮಾತನಾಡುತ ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಆಚಾರ ವಿಚಾರಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿ ಜೀವನ ಬಂಗಾರದ ಜೀವನ ಆಗಬೇಕೆಂದು ಶ್ರೀಗಳು ಹೇಳಿದರು ನಂತರ ಮಾಡಿದ ದಲಿತ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ್ ಹರನಾಳ ಮಾತನಾಡುತ್ತಾ ಮಹಿಳೆಯರಿಗೆ ಹಕ್ಕು ಬಾಧ್ಯತೆಗಳನ್ನು ಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನೆಸುವುದು ವಿದ್ಯಾರ್ಥಿನಿಯರು ಸೂಕ್ತ ಯಾಕಂದ್ರೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದ ಸಂವಿಧಾನದಿಂದ ಮಹಿಳೆಯರಿಗೆ ಸಮಪಾಲು ಸಮ ಬಾಳು ಸಿಗುತ್ತಿದೆ ಅಜ್ಞಾನ ಅಂಧಕಾರ ಮೌಡ್ಯ ಕಂದಾಚಾರಗಳು ಹೋಗಲಾಡಿಸಲು ವಿದ್ಯಾರ್ಥಿಗಳು ಶಪಥ ಮಾಡಬೇಕೆಂದು ಹೇಳಿದರು ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾಕ್ಟರ್ ಕರಿ ಗೂಳೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಎನ್ ಎಸ್‍ಎಸ್ ಶಿಬಿರ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಉನ್ನತ ಶಿಕ್ಷಣ ಸಿಗುತ್ತದೆ ಹಳ್ಳಿಗಳಲ್ಲಿರುವ ಪರಿಸ್ಥಿತಿ ಅರ್ಥವಾಗುತ್ತದೆ ಜೀವನದಲ್ಲಿ ಮೌಲ್ಯಗಳು ಕಷ್ಟ ಸುಖಗಳು ಬಗ್ಗೆ ಅರಿವು ಆಗುತ್ತದೆ ಎಂದು ಹೇಳಿದರು ಏನ್ ಎಸ್ ಎಸ್ ಶಿಬಿರದ ಸಂಚಾಲಕರಾದ ಡಾಕ್ಟರ್ ಗುರುಪ್ರಸಾದ್ ಹೂಗಾರ್ ಮಾತನಾಡಿದರು ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರಿಯಪ್ಪ ಬೇಗಾರ ಮಾಜಿ ಪುರಸಭಾ ಸದಸ್ಯರಾದ ರಾಯಪ್ಪ ಬಾರಿ ಗಿಡ ಶಿಬಿರಾರ್ಥಿ ಡಾಕ್ಟರ್ ನಾಗರೆಡ್ಡಿ ಮಾತನಾಡಿದರು ಸಹ ಶಿಬಿರಾರ್ಥಿ ಖುತೇಜಾ ನಸ್ರೀನ್ ಖಾಜವಾಲಿ ಈಚನಾಳ ಸ್ವಾಗತಿಸಿದರು ಅಮಿತ್ ಮಾನ ಮನಿ ವಂದಿಸಿದರು ಮಲ್ಲಿಕಾರ್ಜುನ ಹೂಗಾರ್ ನಿರೂಪಿಸಿದರು