ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ : ಬಸವಂತಯ್ಯ ಹಿರೇಮಠ

ಗಂಗಾವತಿ: ಮಾನವೀಯ ಮೌಲ್ಯಗಳೇ ಕಳೆದು ಹೋಗಿರುವಂತಹ ಈ ಕಾಲಘಟ್ಟದಲ್ಲಿ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವಂತಹ ರೀತಿಯಲ್ಲಿ ನಾವು ಬದುಕಬೇಕು ಎಂದು ಮನಿರಾಬಾದನ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಬಸವಂತಯ್ಯ ಹಿರೇಮಠ ಹೇಳಿದರು.
ತಾಲ್ಲೂಕಿನ ಬಸವನದುರ್ಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಂತರ ಮಾಜಿ ಸಂಸದ ಶಿವರಾಮಗೌಡ ಮಾತನಾಡಿದರು.
ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ವಿದ್ಯಾರ್ಥಿಗಳು ಸಂಚರಿಸಿ ಕೊರೊನಾ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಈ ವೇಳೆ ಕಲ್ಮಠ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಬಿ.ಎಂ.ಲೋಕೇಶ್, ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಛತ್ರಪ್ಪ, ಪ್ರಮುಖರಾದ ಚನ್ನಬಸವಸ್ವಾಮಿ, ಕೆ.ಕಾಳಪ್ಪ, ಮೌನೇಶ್, ಶಿಬಿರದ ನಿರ್ದೇಶಕ ಮಂಜುನಾಥ, ಕೆ.ಎಚ್.ಕೊಳ್ಳನ್ನವರ, ಯು.ಎಂ.ಬಸವರಾಜ, ಬಸವರಾಜಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್ ಬಾಬು, ಹುಲಿಗೆಮ್ಮ, ರಾಜಶೇಖರ್ ಸೇರಿದಂತೆ ಗ್ರಾಮದ ಮುಖಂಡರು ವಿದ್ಯಾರ್ಥಿಗಳು ಇದ್ದರು.