ಮಾನವೀಯ ನೆಲೆಗಟ್ಟಿನಲ್ಲಿ ವಿವಿಧ ದೇಶಗಳಿಗೆ ವೈದ್ಯಕೀಯ ನೆರವು: ಡಾ.ಜೈ ಶಂಕರ್

ನವದೆಹಲಿ, ಏ.22- ಕೋವಿಡ್ ಸೋಂಕಿನ ಸಂಕಷ್ಟ ಸಮಯದಲ್ಲಿ ಭಾರತೀಯ ಮಿಲಿಟರಿ ವೈದ್ಯಕೀಯ ತಂಡಗಳು ವಿವಿಧ ದೇಶಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಹೇಳಿದ್ದಾರೆ.

ಕುವೈತ್, ಮಡಗಾಸ್ಕರ್, ಮಾಲ್ಡೀವ್ಸ್ ಸೇರಿದಂತೆ ಅನೇಕ ದೇಶಗಳಿಗೆ ಮಿಲಿಟರಿ ವೈದ್ಯಕೀಯ ತಂಡಗಳು ಆರೋಗ್ಯ ಪರಿಸ್ಥಿತಿ ಸುಧಾರಿಸಲು ಸಹಾಯ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಐಸಿಡಬ್ಯುಎ- ಯುಎಸ್ ಐ ಅಂತರಾಷ್ಟ್ರೀಯ ಕಾಲಿ ಪೋಲಿ ವರ್ಚುವಲ್ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೊರೋನಾ ಸಂಕಷ್ಟದ ಸಮಯದಲ್ಲಿ ಭಾರತ ವಿಶ್ವದ ಅನೇಕ ದೇಶಗಳಿಗೆ ಸೇರಿದಂತೆ ಇನ್ನಿತರೆ ರಕ್ಷಣಾ ಉಪಕರಣಗಳನ್ನು ಪೂರೈಕೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ವಿಶ್ವ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರು ತೋರಿದ ಕರ್ತವ್ಯ ನಿಷ್ಠೆಯ ಮಾದರಿಯಲ್ಲಿ ಕೊರೋನಾ ಸೋಂಕಿನ ಸಮಯದಲ್ಲಿ ಕರ್ತವ್ಯಪ್ರಜ್ಞೆ ಮೆರೆಯುತ್ತಿದ್ದಾರೆ. ಇದರ ಜವಾಬ್ದಾರಿ ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಭಾರತ ಕೋವಿಡ್ ಸಂಕಷ್ಟದ ಸಮಯದಲ್ಲಿ ಜಗತ್ತಿನ ಅನೇಕ ದೇಶಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಲಸಿಕೆಯನ್ನು ಪೂರೈಕೆ ಮಾಡಿ ನೆರೆಹೊರೆಯ ದೇಶಗಳ ನೀತಿಯನ್ನು ಪಾಲಿಸಿದೆ ಎಂದು ಅವರು ಹೇಳಿದರು.

ನೇಪಾಳ ಶ್ರೀಲಂಕಾ ,ಯಮೆನ್ ,ಸಿಶೆಲ್ಸ್, ಸೇರಿದಂತೆ ಇನ್ನಿತರ ದೇಶಗಳಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ನೆರವು ನೀಡಿದೆ ಎಂದು ಅವರು ತಿಳಿಸಿದ್ದಾರೆ

ಇಡೀ ಜಗತ್ತು ಕೊರೋನೋ ಸೋಂಕಿನ ಸಂಕಷ್ಟದ ಸಮಯದಲ್ಲಿದೆ. ಇಂತಹ ಸಮಯದಲ್ಲಿ ಒಂದು ದೇಶ ಮತ್ತೊಂದು ದೇಶಕ್ಕೆ ನೆರವು ನೀಡುವುದು ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ