ಮಾನವೀಯ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ರಂಭಾಪುರಿ ಶ್ರೀ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜ.21 ಜೀವನದಲ್ಲಿ ಪ್ರತಿಯೊಬ್ಬರೂ ಮಾನವೀಯ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
 ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ವಿಜ್ಞೇಶ್ವರ ಈಶ್ವರ ಶರಣಬಸವೇಶ್ವರ ನಂದಿಮೂರ್ತಿ ಪ್ರತಿಷ್ಠಾಪನೆ ಹಾಗೂ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಉದೇಶಿಸಿ ಮಾತನಾಡಿದರು. ಸಮಾಜದಲ್ಲಿ ಸಾಕಷ್ಟು ಧರ್ಮಗಳಿವೆ ಆದರೆ ಎಲ್ಲಾ ಧರ್ಮದಕ್ಕಿಂತ ಮಾನವ ಧರ್ಮ ದೊಡ್ಡದು. ನೀನು ಜೀವನದಲ್ಲಿ ಏನಾದರೂ ಆಗು ಮೊದಲು ಮಾನವನಾಗು  ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಸಂಘರ್ಷಗಳು ಕಾಣುತ್ತಿವೆ ರಾಜಕೀಯ ಶಕ್ತಿಗಳ ಪ್ರೇರಣೆಯಿಂದಾಗಿ ಸಾಮಾಜಿಕ ಸಾಮರ್ಥ್ಯ ಕದಡುವ ಯತ್ನಗಳು ಹೆಚ್ಚಾಗಿ.. ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಲ್ಲರೂ ಒಂದಾಗಿ ಬಾಳಿದರೆ ನಂದನವನವಾಗುತ್ತದೆ ಎಂದು ಕರೆ ನೀಡಿದರು.
 ಸಭೆಯ ಆರಂಭದಲ್ಲಿ ಅಹಿಂದ ಮುಖಂಡ ಬುಡ್ಡಿ  ಬಸವರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು.
 ನಂದಿಪುರ ಡಾ. ಮಲ್ಲೇಶ್ವರ ಸ್ವಾಮೀಜಿ, ಹಂಪ ಸಾಗರ ನವಿಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಗ್ಗಿನ ಮಠದ ವರಸದ್ಧೋಜಾತ ಶಿವಾಚಾರ್ಯ, ಹನಸಿ ಮಠದ ಶಂಕರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ,, ಹಿರೇಮಲ್ಲಿನ ಕೇರಿಯ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
 ಗ್ರಾಮದಲ್ಲಿ ಬೆಳಗ್ಗೆ ಅದ್ದೂರಿಯಾಗಿ ಅಡ್ಡ ಪಲ್ಲಕ್ಕಿ ಉತ್ಸವ ಜರುಗಿತು. ಮಹಿಳೆಯರು ಕುಂಭ ಕಳಸದೊಂದಿಗೆ ವಿವಿಧ ವಾದ್ಯಗಳೊಂದಿಗೆ ವೀರಗಾಸೆ ನೃತ್ಯ ಮೂಲಕ ಭಕ್ತಿಯಿಂದ ಉತ್ಸವ ನಡೆಯಿತು.
 ಈ ಸಂದರ್ಭದಲ್ಲಿ ರೇಣುಕ ವಿದ್ಯಾ ಸಂಸ್ಥೆಯ ಕಾರ್ಯಧ್ಯಕ್ಷ ತಿಪ್ಪೇಸ್ವಾಮಿ, ವಲಭಾಪುರ ಸುಭಾಷ್ ಶಾಸ್ತ್ರಿ , ಗ್ರಾಮದ ಎಲಿಗಾರ್ ಕುಬೇರಪ್ಪ, ಜಿ ಪ್ರಭುಗೌಡ, ಮುಂಡರಗಿ ಮಂಜುನಾಥ, ಬಾಳಪ್ಪ ರೇವಣ್ಣ, ಗೌಡ್ರು ಶಿವಣ್ಣ ಕೆ ಶಿವಾನಂದ ಎಸ್ ಬಾಳಪ್ಪ ರೇವಣ್ಣ, ಬುಳ್ಳನ ಗೌಡ ಸಿ. ಬಸವರಾಜ, ಅಂಬಳಿ ಕೇಶವ,  ಇತರರಿದ್ದರು.
 ಬ್ಯಾಲಾಳ ಕರಿಬಸವನಗೌಡ ಕಾರ್ಯಕ್ರಮ ನಿರ್ವಹಿಸಿದರು .