ಮಾನವೀಯತೆ ಮೆರೆದ ಸರ್ಕಲ್ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ

ಗುಂಡ್ಲುಪೇಟೆ: ಮೇ.26: ಖಾಸಗಿ ಆಸ್ಪತ್ರೆಯೊಂದು ಮೃತದೇಹ ನೀಡದೆ ವಾರಸುದಾರರು ಬಿಲ್ ಕಟ್ಟುವಂತೆ ಒತ್ತಾಯಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ತಾಲ್ಲೂಕಿನ ಮೂಖಹಳ್ಳಿ ಕಾಲೋನಿಯ ಸೋಂಕಿಗೆ ಒಳಗಾಗಿ ಕೆಲವು ದಿನಗಳ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾದೆ ಶಿವಯ್ಯ ಎಂಬವರು ಮೃತಪಟ್ಟಿದ್ದರು.
ಬಿಲ್ ಕಟ್ಟಿದ್ದರೆ ಮಾತ್ರ ಮೃತದೇಹವನ್ನು ನೀಡಲಾಗುವುದು ಎಂದು ಆಸ್ಪತ್ರೆಯವರು ಪಟ್ಟುಹಿಡಿದಿದ್ದರಿಂದ ಕುಟುಂಬದವರ ಬಳಿ ಅಷ್ಟೊಂದು ಬಿಲ್ ಕಟ್ಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿಯೇ ಮೃತದೇಹಕ್ಕೆ ಕೈ ಮುಗಿದು ಹಿಂದುರಿಗಿತು. ಈ ವಿಷಯವನ್ನು ತಿಳಿದ ಪಟ್ಟಣ ಪೆÇಲೀಸ್ ಠಾಣೆಯ ಸರ್ಕಲ್ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ ಎಂಬವರು ಕುಟುಂಬದವರಿಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ನೊಂದ ಕುಟುಂಬಕ್ಕೆ 10 ಸಾವಿರ ನೆರವು ನೀಡಿದ್ದಾರೆ. ಇವರ ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ.