ಮಾನವೀಯತೆ ಮೆರೆದ ಶಾಸಕ ಎಂ.ಎಸ್ ಸೋಮಲಿಂಗಪ್ಪ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ನ.10: ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಎಸ್ ಸೋಮಲಿಂಗಪ್ಪ ಅವರು ತೆಕ್ಕಲಕೋಟೆಯ ತಮ್ಮ ನಿವಾಸದಿಂದ ಸಿರುಗುಪ್ಪ ನಗರಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಹಳೆಕೋಟೆಯ ಮಾರೆಮ್ಮ ದೇವಿ ಗುಡಿ ಹತ್ತಿರ ದ್ವಿಚಕ್ರ ವಾಹನ ಬರುತ್ತಿದ್ದ ವೇಳೆ ಎಮ್ಮೆ ಅಡ್ಡ ಬಂದು ಬೈಕ್ ಸವಾರನಿಗೆ ಮತ್ತು ನಾಗರತ್ನಮ್ಮ ಎಂಬ ವೃದ್ದೆಯು ಆಯಾತಪ್ಪಿ ಬಿದ್ದು ಗಾಯಗಳಾಗಿದ್ದವು ಕೂಡಲೇ ಶಾಸಕರು ಸ್ಥಳದಲ್ಲಿಯೇ ಕಾರ್ ನಿಲ್ಲಿಸಿ ಸ್ವತಃ ಅವರ ಕಾರಿನಲ್ಲಿಯೇ ಅವರನ್ನು ಕರೆದುಕೊಂಡು ಸಿರುಗುಪ್ಪ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಏನು ಆಗಲ್ಲ ಎಂದು ಧೈರ್ಯ ತುಂಬಿ ಮಾನವೀಯತೆ ಮೆರೆದಿದ್ದಾರೆ.