ಮಾನವೀಯತೆ ಮೆರೆದ ಬಸ್ ಚಾಲಕ – ನಿರ್ವಾಹಕ


ಕುಂದಗೋಳ ಜು. 21 : ಲಕ್ಷ್ಮೇಶ್ವರ ದಲ್ಲಿ ಖರೀದಿಸಿದ್ದ ಕೆಲ ಬೆಲೆ ಬಾಳುವ ವಸ್ತುಗಳನ್ನು ಬಸ್ ಪ್ರಯಾಣ ವೇಳೆ ಕಳೆದುಕೊಂಡಿದ್ದ ಪ್ರಯಾಣಿಕನಿಗೆ ಲಕ್ಷ್ಮೇಶ್ವರ ಬಸ್ಸಿನ ಚಾಲಕ-ನಿರ್ವಾಹಕರು ಪತ್ತೆ ಹಚ್ಚಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬೆಳ್ಳಿ ಚೈನ್ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳಿದ್ದ ಕೈ ಚೀಲವನ್ನು ಚಾಲಕ ಗೋಣೆಪ್ಪ ಮಲ್ಲಣ್ಣವರ ಹಾಗೂ ನಿರ್ವಾಹಕ ಮಂಜುನಾಥ ದಿದ್ದಿಗಿ ಅವರು ಕುಂದಗೋಳ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕ ಪ್ರಕಾಶ ಹುಗ್ಗಣ್ಣವರ ಅವರ ಸಮ್ಮುಖದಲ್ಲಿ ಕೊಟ್ಟು ಪ್ರಯಾಣಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ವಸ್ತುಗಳನ್ನು ಕಳೆದುಕೊಂಡಿದ್ದ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ವಿರೂಪಾಕ್ಷಪ್ಪ ಕೋಷ್ಟಿ ಅವರು ಮಾನವೀಯತೆ ಮೆರೆದ ಚಾಲಕ, ನಿರ್ವಾಹಕರಿಗೆ ಧನ್ಯವಾದಗಳು ಸಲ್ಲಿಸಿದರು.