ಮಾನವೀಯತೆ ಮೆರೆದ ಧೀರಜ:ಕತ್ತಿ

ಧಾರವಾಡ,ಜೂ9: ತಮ್ಮ ವೃತ್ತಿ ಜೊತೆಗೆ ಪರಿಸರ, ಜೀವವೈವಿಧ್ಯದ, ಸದಾ ಸಮಾಜಮುಖಿ ಕಾರ್ಯಮಾಡುತ್ತಿರುವ ಹಾಗೂ ಸ್ವತಃ ತಾವೇ ನವನಗರದ ಖಾಲಿ ನಿವೇಶನಗಳ ಮತ್ತು ಸ್ಮಶಾನದ ಸ್ವಚ್ಚತಾ ಹರಿಕಾರ. ಎಲ್ಲರೊಂದಿಗೆ ಸ್ನೇಹದಿಂದ ಇರುವ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾದವರು. ಪ್ರಾಣಿಶಾಸ್ತ್ರದಲ್ಲಿ ಸಂಶೋಧನೆ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನದ ಕಣಿಯಾದ ಡಾ. ಧೀರಜ ವೀರನಗೌಡರ ಅವರು 45ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೇಷ್ಠ ವ್ಯಕ್ತಿ ಡಾ.ಧೀರಜ ವೀರನಗೌಡರ ಎಂದು ಮಾರ್ತಾಂಡಪ್ಪ ಎಮ್ ಕತ್ತಿ ಹೇಳಿದರು.

ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಧಾರವಾಡ ಮತ್ತು ಪದ್ಮಶ್ರೀ ಡಾ.ಆರ್.ಬಿ.ಪಾಟೀಲ ಕ್ಯಾನ್ಸರ್ ಆಸ್ಪತ್ರೆ, ನವನಗರದ ವತಿಯಿಂದ ರಕ್ತಭಂಡಾರದಲ್ಲಿ ರಕ್ತದ ಪ್ಲೆಟ್‍ಲೆಟ್ಸ್ ದಾನ ಮಾಡಿದ ಶ್ರೇಷ್ಠ ರಕ್ತದಾನಿ ಡಾ.ಧೀರಜ ವೀರನಗೌಡರ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ ಉಳಿದವರಿಗೆ ಮಾದರಿ ವ್ಯಕ್ತಿ ಡಾ.ಧೀರಜ ವೀರನಗೌಡರ ಸಮಾಜಸೇವೆ ಮಾಡುತ್ತಾ ಸಂಘಟನೆಯಲ್ಲೂ ಚತುರರು. ಉತ್ತಮವಾಗ್ಮಿಗಳು, ವಿದ್ಯಾರ್ಥಿಗಳ ಮೆಚ್ಚಿನ ಪ್ರಾಧ್ಯಾಪಕರು ಆಗಿದ್ದಾರೆ ಎಂದು ಹೇಳಿದರು.

ರಕ್ತಭಂಡಾರದ ಡಾ.ಉಮೇಶ ಹಳ್ಳಿಕೇರಿ ಮಾತನಾಡಿ ಭಾರತೀಯ ರೆಡ್‍ಕ್ರಾಸ ಸಂಸ್ಥೆಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸಿ ಮಾದರಿಯಾದವರು ಇವರು. ಕೋವಿಡ್ ಸಮಯದಲ್ಲಿ ರಕ್ತದಾನ ಮಾಡಿದ ಪ್ರಯುಕ್ತ ಈ ಚಿಕ್ಕ ಎರಡಕ್ಷರದ ಗೌರವ ಅಷ್ಟೇ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಕ್ತದಾನಿ ಡಾ.ಧೀರಜ ವೀರನಗೌಡರ, ವೈದ್ಯರಾದ ಡಾ.ಮಂಜುಳಾ ಹುಗ್ಗಿ, ವಿಶಾಲ ಕರಣಿ, ದಯಾನಂದ ಸಾಧನಿ ಇದ್ದರು.