ಮಾನವೀಯತೆ ಮೆರೆದ ಕಲಬುರಗಿ ಸಂಸದ ಜಾದವ್

ವಿಜಯಪುರ:ಡಿ.25:ಸರ್ಕಾರಿ ಬಸ್ ಹಾಗೂ ಓಮಿನಿ ನಡುವೆ ಅಪಘಾತದಲ್ಲಿ ಗಾಯಗೊಂಡರನ್ನು ಆಸ್ಪತ್ರೆಗೆ ಸೆರೆಸಿ ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ ಜಾಧವ ಮಾನವೀಯತೆ ಮೆರೆದಿದ್ದಾರೆ.
ವಿಜಯಪುರ ಜಿಲ್ಲೆಯ ಶಿವಣಗಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 218ರಲ್ಲಿ ಓಮಿನಿ ವಾಹನಕ್ಕೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಐವರು ಗಾಯಗೊಂಡಿದರು. ಇದೇ ವೇಳೆ ಸಂಸದ ಉಮೇಶ ಜಾದವ್ ಕಲಬುರಗಿಯಿಂದ ವಿಜಯಪುರ ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಕಂಡು ಗಾಯಗೊಂಡರನ್ನು 108 ಆ್ಯಂಬ್ಯೂಲನ್ಸ್ ಗೆ ಕರೆ ಮಾಡಿದ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಅಲ್ಲದೇ, ಓಮಿನಿ ವಾಹನ್ ದಲ್ಲಿ ಸಿಲುಕಿಕೊಂಡಿದ್ದ ಡ್ರೈವರ್ ನ್ನು ಹೊರಗಡೆ ತಂದು ಪ್ರಾಣ ರಕ್ಷಣೆ ಮಾಡಿದ್ದಾರೆ.
‌ನಂತರ ವಿಜಯಪುರ ಎಸ್ಪಿ ಅಗರವಾಲ್ ಗೆ ಮಾಹಿತಿ ನೀಡಿ, ಗಾಯಗೊಂಡವರ ಪ್ರಾಣವನ್ನು ಸಂಸದ ಜಾದವ್ ಉಳಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.