ಮಾನವೀಯತೆ ಮರೆದ ಶಾಸಕ ಮುದ್ನಾಳ ದುರ್ಮರಣಕ್ಕಿಡಾದ ಕಾರ್ಮಿಕರ ಸಂಸ್ಕಾರಕ್ಕೆ ಆರ್ಥಿಕ ನೇರವು

ಶಹಾಪುರ:ಎ.22:ಕೂಲಿ ಕೆಲಸಕ್ಕೆಂದು ದೇವದುರ್ಗಾದ ಹುವನಹಡಗಿ ಗ್ರಾಮಕ್ಕೆ ಹೊಗುತ್ತಿದ್ದ ವಡಗೇರಾ ತಾಲೂಕಿನ ಮುನಮುಟಗಿ ಗ್ರಾಮದ ಕೂಲಿ ಕಾರ್ಮಿಕರಿಗೆ ಬೇಳಗಿನ ಜಾವದಲ್ಲಿ ಜವರಾಯನ ಅಟ್ಟಹಾಸ್ಯದಿಂದು ದುರ್ಮರಣಕ್ಕಿಡಾಗಿ 5 ಹನರು ಸ್ಥಳದಲ್ಲೆ ಸಾವನ್ನಪ್ಪಿದ್ದರಿಂದ ಗ್ರಾಮವೇ ದುಃಖ ಸಾಗರದಲ್ಲಿ ಮುಳುವಂತಾಗಿತ್ತು. ನೊಂದವರ ದ್ವನಿಯಾಗಿ ಕಾರ್ಮಿಕ ಕುಟುಂಬದ ದುಃಖದಲ್ಲಿ ಭಾಗಿಯಾದ ಯಾದಗಿರಿ ಮತ ಕ್ಷೇತ್ರದ ಶಾಸಕರಾದ ವೆಂಟಕರಡ್ಡಿ ಮುದ್ನಾಳರವರು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡ ಎಂದು ವೈಧ್ಯರಿಗೆ ಮನವರಿಕೆ ಮಾಡಿದರು. ಅಲ್ಲದೆ ತೀರಾ ದುಃಖದ ಮುಡುವಿನಲ್ಲಿ ಮುಳುಗಿದ ಕಾರ್ಮಿಕ ಕುಟುಂಬಕ್ಕೆ ಸಾಂತ್ವಾನ ಹೇಳಿ ಮೃತ ದುರ್ದೈವಿಗಳ ಅಂತ್ಯ ಸಂಸ್ಕಾರಕ್ಕಾಗಿ ತಲಾ 10 ಸಾವಿರ ರೂ ಗಳ ಆರ್ಥಿಕ ನೇರವು ನೀಡಿ ಮಾನವೀಯತೆಗೆ ಸಾಕ್ಷಿಯಾದರು. ಈ ಸಂಧರ್ಭದಲ್ಲಿ ಯುವ ನಾಯಕ ಮಹೇಶರಡ್ಡಿÀ ಮುದ್ನಾಳ, ಸಿದ್ದಣಗೌಡ ದೇವಿಂದ್ರಪ್ಪ ಮುನಮುಟಗಿ, ಸಾಹೇಬಗೌಡ ತಾ.ಪಂ. ಸದಸ್ಯರಾದ ಪರಶುರಾಮ ಕುರುಕುಂದಿ, ಸೇರಿದಂತೆ ಹಲವಾರು ಜನ ಮುಖಂಡರು, ರಾಜಕಿಯ ನಾಯಕರು ಹಾಜರಿದ್ದರು.