
ಕೋಲಾರ ಜ.೫- ನಿಶಕ್ತಿಯಿಂದ ಬಳಲುತ್ತಿದ್ದ ವಯೋವೃದ್ದೆಯನ್ನು ಕ್ಷೇಮವಾಗಿ ಮನೆಗೆ ತಲುಪಿಸಿ ಸಂಚಾರಿ ಪೊಲೀಸ್ ಪೇದೆ ರಫೀಕ್ ಶೇಖ್ರವರು ಮಾನವೀಯತೆ ಮೆರೆದಿದ್ದಾರೆ.
ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಮನೆಗೆ ಹೋಗದೆ ನಿಶಕ್ತಿಯಿಂದ ಬಳಲುತ್ತಿದ್ದ ಗಾಂಧಿನಗರ ನಿವಾಸಿ ಸುಮಾರು ೮೫ ವರ್ಷದ ವಯೋವೃದ್ದೆ ರತ್ನಮ್ಮ ರವನ್ನು ಕಂಡ ಕೋಲಾರ ಪೊಲೀಸ್ ಸಂಚಾರಿ ಪೇದೆ ರಫೀಕ್ ಶೇಖ್ ರವರು ವೃದ್ದೆಯನ್ನು ನೆರಳಲ್ಲಿ ಕುಳ್ಳರಿಸಿ ವಿಚಾರಿಸಾಗಿದಾಗ ತೊದಲುತ್ತಾ ತನ್ನ ಹೆಸರು ರತ್ನಮ್ಮ, ಕೋಲಾರ ನಗರದ ಗಾಂಧಿನಗರ ವಾಸಿ ಎಂದು ನುಡಿದಿರುತ್ತಾರೆ.
ಓಡಾಡಲು ಸಾಧ್ಯವಾಗದೆ ನಿಶಕ್ತಕೊಂಡಿದ್ದ ರತ್ನಮ್ಮನವರನ್ನು ಪೊಲೀಸ್ ಪೇದೆ ರಫೀಕ್ ಶೇಖ್ ಮತ್ತು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ರವರು ಆಟೋ ಮುಖಾಂತರ ಅವರ ಮನೆಗೆ ಕಳುಹಿಸಿಕೊಟ್ಟು ಮಾನವೀಯತೆ ಮರೆದಿದ್ದಾರೆ.