ಮಾನವೀಯತೆ ಮರೆದ ಕೆಕೆಆರ್‌ಟಿಸಿ ಸಿಬ್ಬಂದಿ

ಅರಕೇರಾ,ಜು.೨೨-
ಜು.೧೯ರಂದು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಅಜಾಗರುಕತೆಯಿಂದ ಮೊಬೈಲ್ ಕಳೆದುಕೊಂಡಿದ್ದ ಪ್ರಯಾಣಿಕನೋರ್ವನಿಗೆ ಕೆಕೆಆರ್‌ಟಿಸಿ ಸಿಬ್ಬಂದಿ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಗುರುವಾರ ನಡೆದಿದೆ.
ಲಿಂಗಸೂಗೂರು ಡಿಪೋದ ರಾಯಚೂರು ಇಲಕಲ್ ಮಾರ್ಗದ ಬಸ್‌ನಲ್ಲಿ ರಾಯಚೂರಿನಿಂದ ಸಿರವಾರಕ್ಕೆ ಪ್ರಯಾಣಿಸುವಾಗ ಪಟ್ಟಣದ ನಿವಾಸಿ ಸೂಗೂರೇಶ್ವರ ತಾಳಿಕೋಟಿ ಮೊಬೈಲ್ ಕಳೆದುಕೊಂಡಿದ್ದರು. ಕರ್ತವ್ಯದಲ್ಲಿದ್ದ ಚಾಲಕ ಎಂ.ಡಿ ಉಸ್ಮಾನ್, ಚಾಲಕ ಕಂ ನಿರ್ವಾಹಕ ವಿರುಪಾಕ್ಷ ಅವರಿಗೆ ಸಿಕ್ಕಿದ್ದ ಮೊಬೈಲ್‌ಗೆ ಬಂದ ಕರೆಗಳನ್ನು ಸ್ವೀಕರಿಸಿ ಕಳೆದುಕೊಂಡಿರುವ ಬಗ್ಗೆ ಸ್ನೇಹಿತರಿಗೆ ತಿಳಿಸಿದ್ದಾರೆ. ಜು.೨೦ ರಂದು ಸಿರವಾರ ಬಸ್ ನಿಲ್ದಾಣದಲ್ಲಿ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.