ಮಾನವೀಯತೆಯ ವಿಕಾಸವೆ ನಿಜವಾದ ಶಿಕ್ಷಣ :ದರೂರು ಶಾಂತನಗೌಡ


ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.25: ರಾಷ್ಟ್ರೀಯ ಸೇವಾಯೋಜನೆಯ ದಿನವನ್ನು ವೀರಶೈವ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾಯೋಜನೆ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡ್ರಾ ವಿಭಾಗದ ಸಹಯೋಗದಲ್ಲಿ                 ಆಚರಿಸಲಾಯಿತು.
ರಾಷ್ಟ್ರೀಯ ಸೇವಾಯೋಜನೆಯ ಸ್ಥಾಪಕರಾದ ಡಾ.ವಿ.ಕೆ.ಆರ್.ವಿ. ರಾವ್ ಅವರ ಭಾವಚಿತ್ರ ಪೂಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಅಧ್ಯಕ್ಷರಾದ ದರೂರು ಶಾಂತನಗೌಡರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾನವೀಯತೆಯ ವಿಕಾಸವೇ ನಿಜವಾದ ಶಿಕ್ಷಣ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಜಿ.ಮನೋಹರ ಅವರು ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾಯೋಜನೆಯ ಅಧಿಕಾರಿಗಳಾದ ಶ್ರೀ.ಶರಣಬಸವ ಮತ್ತು ಶ್ರೀಮತಿ.ವೈ.ಭ್ರಮರಾಂಭ ಮತ್ತು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕವಿತಾ ಸಂಗನಗೌಡ.ಎಂ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.