ಮಾನವೀಯತೆಯೊಂದಿಗೆ ಧರ್ಮದ ಜಾಗೃತಿ ಅಗತ್ಯ

ಇಂಡಿ:ಜ.29:ಶಿಕ್ಷಣ ಮೌಲ್ಯ ಹಾಗೂ ಮಾನವೀಯತೆಯನ್ನು ಕಲಿಸುವ ಜತೆಗೆ ಧರ್ಮದ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ ಎಂದು ವಿಶ್ರಾಂತ ಉಪನ್ಯಾಸಕ ಎಂ.ಜೆ.ಪಾಟೀಲ ಹೇಳಿದರು.
ಪಟ್ಟಣದ ಬೀರಪ್ಪ ನಗರದ ಲಯನ್ಸ ಪ್ರೌಢಶಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಯನ್ಸ ಸಂಸ್ಥೆಯ ಆಡಳಿತಾಧಿಕಾರಿ ವಾಯ್.ಬಿ.ತಮಶೆಟ್ಟಿ ಮಾತನಾಡಿ 12 ನೆಯ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣ ಹಾಗೂ ಶರಣರು ನಮಗಾಗಿ ತಮ್ಮ ಅಚಾರ ವಿಚಾರ ನೀಡಿದ್ದು ಅದು ಅಭಿವೃದ್ದಿಗೆ ಪೂರಕÀ ಎಂದರು.
ಶಸಾಪ ಉಪಾಧ್ಯಕ್ಷ ಎಚ್.ಎಸ್.ಎಳೆಗಾಂವ ಜೇಡರ ದಾಸಿಮಯ್ಯನವರ ಕುರಿತು ಮಾತನಾಡಿದರು.
ಶಸಾಪ ಅಧ್ಯಕ್ಷ ಬಿ.ಎಸ್.ಪಾಟೀಲ, ಕದಳಿ ವೇದಿಕೆಯ ಅಧ್ಯಕ್ಷೆ ಗಂಗಾಬಾಯಿ ಗಲಗಲಿ,ಲಾಯನ್ಸ ಪ್ರೌಢಶಾಲೆಯ ಮುಖ್ಯ ಗುರುಗಳಾದ ಎಸ್.ಎಸ್.ಯಡ್ರಾಮಿ,ಎ.ಎಸ್.ಕರಜಗಿ, ಶ್ರೀಮತಿ ಎಸ್.ಎ. ಬಿರಾದಾರ ಮಾತನಾಡಿದರು.
ಲಿಂಗೈಕ್ಯ ಜಾನಗೌಡ ಪಾಟೀಲ ಮತ್ತು ನಿರ್ಮಲಾ ಗೋಡೆಕರ ಕುರಿತು ದತ್ತಿ ಉಪನ್ಯಾಸ ನಡೆಯಿತು.
ಎಂ.ಜೆ.ಪಾಟೀಲ, ಶ್ರೀಮತಿ ಕೆ.ಜಿ.ನಾಟಿಕಾರ ದತ್ತಾ ದಾನ ಮಾಡಿದ್ದರು.
ಎಸ್.ಆಯ್.ಸುಗೂರ,ಬಿ.ಎಸ್.ಕಂಬಾರ,ಎನ್.ಬಿ.ಬಿರಾದಾರ ಮಾತನಾಡಿದರು.