ಮಾನವಿತೆ ಮೆರೆದ ಕೆ.ಎಸ್.ಆರ್.ಟಿ.ಸಿ ನೌಕರರು

ಸಂಜೆವಾಣಿ ವಾರ್ತೆ
ಸಿರುಗುಪ್ಪ ಸೆ 24 : ತಾಲೂಕಿನ ಚಳ್ಳೆಕೂಡ್ಲೂರು ಗ್ರಾಮದಲ್ಲಿ 1ಲಕ್ಷ 7ಸಾವಿರ ರೂ ನಗದು ಮತ್ತು 80 ಸಾವಿರ ರೂ ಮೌಲ್ಯದ ಚೆಕ್‍ಗಳಿರುವ ಬ್ಯಾಗನ್ನು ಮರೆತು ಹೋಗಿದ್ದ ಹೈದರಾಬಾದಿನ ಕಂಪನಿಯ ಮಾರಾಟ ವ್ಯವಸ್ಥಾಪಕನಿಗೆ ಗ್ರಾಮದ ಶ್ರೀ ಮಾರಿಕಾಂಭೆ ದೇವಸ್ಥಾನದಲ್ಲಿ ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ.
 ಸಿಂಧನೂರಿಗೆ ಹೋಗಬೇಕಿದ್ದ ಹೈದರಾಬಾದಿನ ಕಾಚಿಗೂಡದ ಬೇಗಂ ಬಜಾರ್‍ನಲ್ಲಿರುವ ಶಾಂತಿ ಸಪ್ಲೈಯರ್ಸ್ ಕಂಪನಿಯ ಕಿರಾಣಿ ಸಾಮಾಗ್ರಿಗಳ ಮಾರಾಟ ವ್ಯವಸ್ಥಾಪಕ ರಂಜತ್ ದೆ. ವಸೂಲಾತಿಗಾಗಿ ನಗರದ ಹರಿಪ್ರಿಯ ಸೂಪರ್ ಮಾರ್ಕೆಟಿಗೆ ಬಂದಿದ್ದು ಸಿಂಧನೂರು ಬಸ್ಸೆಂದು ತಿಳಿದು ಚಳ್ಳೆಕೂಡ್ಲೂರು ಗ್ರಾಮಕ್ಕೆ ಹೋಗುವ ಬಸ್ ಹತ್ತಿ ನಂತರ ಮಹಾತ್ಮಗಾಂಧೀಜಿ ವೃತ್ತದಲ್ಲಿ ಅವಸರವಾಗಿ ಬ್ಯಾಗ್ ಮರೆತು ಕೆಳಗಿಳಿದಿದ್ದು ಚಳ್ಳೆಕೂಡ್ಲೂರು ಗ್ರಾಮ ತಲುಪಿದ ನಂತರ ಬ್ಯಾಗ್ ಗಮನಿಸಿದ  ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕ ಎಂ.ಚಂದ್ರಶೇಖರ್ ಭಜಂತ್ರಿ, ಮತ್ತು ಚಾಲಕ ಹುಚ್ಚೆಪ್ಪ ಗುಡಿಸಿಲಿಮನಿ ಅವರು ದೂರವಾಣಿ ಕರೆ ಮಾಡಿ ತಿಳಿಸಿ ಹಿಂತಿರುಗಿಸಿದ ಸಾರಿಗೆ ನೌಕರರ ಕಾರ್ಯವನ್ನು ರಂಜತ್.ದೆ ಪ್ರಶಂಸಿದ್ದಾರೆ.