
ಸಂಜೆವಾಣಿ ವಾರ್ತೆ
ಸಾಣೇಹಳ್ಳಿ ಸೆ.2: ಮಾನವನ ಮೂಲ ಉದ್ದೇಶ ಶರಣನಾಗುವುದು. ಮಾನವ ಮಾನವನಾಗಿ ಉಳಿದರೆ ತಪ್ಪೇನಿಲ್ಲ ಎಂದು ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಹೇಳಿದರುಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದು ಲಿಂಗದೀಕ್ಷೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಅವರು ಕೆಲವೊಂದು ಸಾರಿ ದಾನವನಾಗುತ್ತಾನೆ. ಶರಣನಾದರೆ ದೇವನಾದ ಹಾಗೆ. ಶರಣನಾಗಬೇಕಾದರೆ ಸತ್ಯವನ್ನೇ ನುಡಿಯಬೇಕು. ಸತ್ಯವನ್ನು ನುಡಿಯುವುದು ಎಷ್ಟು ಮುಖ್ಯವೋ ನಡೆಯುವುದು ಅಷ್ಟೇ ಮುಖ್ಯ. ನಮ್ಮ ಆಚಾರಗಳು ಸತ್ಯದ ತಳಹದಿಯ ಮೇಲೆ ನಿಲ್ಲಬೇಕು. ಲಿಂಗ ಎಂದರೆ ಗುಡಿಯಲ್ಲಿರುವ ಶಿಲಾಮೂರ್ತಿ ಅಲ್ಲ. 12ನೆಯ ಶತಮಾನದ ಶರಣರು ಅದನ್ನು ಲಿಂಗ, ದೇವರು ಅಂತ ಕರೆಯಲಿಲ್ಲಿ. ಮನುಷ್ಯರನ್ನೇ ದೇವರೆಂದು ಕರೆದರು. ಮಾನವ ದೇವನಾದಾಗÀ ವ್ಯಕ್ತಿತ್ವ ವಿಕಾಸ ಆಗುತ್ತೆ. ಪ್ರತಿಯೊಬ್ಬ ವ್ಯಕ್ತಿಯ ಅಂತರAಗದಲ್ಲಿ ಶಿವನಚೈತನ್ಯ ಅಡಗಿದೆ. ತಾನೇ ಶಿವನಾಗಲಿಕ್ಕೆ ಅವಕಾಶ ಇದೆ. ಅದಕ್ಕೆ ಅರಿವು ಬೇಕು. ಆ ಅರಿವನ್ನು ಲಿಂಗದೀಕ್ಷೆಯ ಮೂಲಕ ಪಡೆದುಕೊಳ್ಳಬೇಕು. ದೇವರೆಂದರೆ ಗುಡಿ, ಮಂದಿರ, ಮಠ, ಗಿಡ, ಮರ, ನದಿಗಳಲ್ಲಿ ಇದಾನೆ ಅಂತ ಅಲ್ಲ. ದೇವರು ಸರ್ವಾಂತರ್ಯಾಮಿ. ಭಗವಂತನ ಶಕ್ತಿ ಎಲ್ಲ ಕಡೆ ಅಡಗಿಕೊಂಡಿದೆ. ಭಗವಂತ ನಿರಾಕಾರ. ಅದರ ಸಂಕೇತವಾಗಿ ಈ ಇಷ್ಟಲಿಂಗವನ್ನು ಕರುಣಿಸುತ್ತಿರುವುದು. ಇಷ್ಟಲಿಂಗ ಜಗತ್ತಿನ ಗೋಳಾಕಾರÀವಾಗಿದೆ. ನನ್ನೊಳಗಿನ ಬೆಳಕಿನ ಪ್ರತಿರೂಪವಾಗಿ ಶರಣರು ಇಷ್ಟಲಿಂಗವನ್ನು ಕರುಣಿಸಿದರು. ದೇವರ ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ದೀಕ್ಷೆ ಸಹಕಾರಿ. ದೀಕ್ಷೆ ಎಂದರೆ ದೀಯತೆ ಮತ್ತು ಕ್ಷೀಯತೆ. ಕೊಡುವುದು ಮತ್ತು ಕಳೆದುಕೊಳ್ಳುವುದು. ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನವನ್ನು ಪಡೆದುಕೊಳ್ಳುವುದು. ಮನುಷ್ಯ ಆಂತರಿಕವಾಗಿ ಮತ್ತು ಬಾಹ್ಯವಾಗಿ ಸ್ವಚ್ಛವಾದಾಗ ದೇವನಾಗುತ್ತಾನೆ. ಗುಡಿ-ಗುಂಡಾರವನ್ನು ಸುತ್ತುವುದಿಲ್ಲ. ಪೂಜಾರಿ, ಪುರೋಹಿತ, ದೇವರ ಮಧ್ಯೆ ಮೀಡಿಯೇಟರ್ ಅವಶ್ಯಕತೆ ಇರುವುದಿಲ್ಲ. ನನ್ನ ದೇವರನ್ನು ನಾನೇ ಮುಟ್ಟಿ ಪೂಜಿಸುವ ಅವಕಾಶ ಇದೆ. ಇಷ್ಟಲಿಂಗ ಎನ್ನುವುದು ನಮ್ಮಲ್ಲೇ ಇರುವ ದೇವರ ಒಂದು ಕುರುಹು. ಅದನ್ನು ಹಿಡಿದುಕೊಂಡು ಅರಿವನ್ನು ಪಡೆದುಕೊಳ್ಳಬೇಕು. ಲಿಂಗಪೂಜೆಯಿAದ ಮನಸ್ಸಿಗೆ ಸದಾ ಆನಂದ, ಶಾಂತಿ, ನೆಮ್ಮದಿ ಉಂಟಾಗುತ್ತೆ. ಮನುಷ್ಯನಿಗೆ ಏನೇ ಸಮಸ್ಯೆಗಳು ಬಂದಾಗ ಅದನ್ನು ಎದುರಿಸುವಂಥ ಧೈರ್ಯ ತನ್ನಿಂದತಾನೇ ಉಂಟಾಗುತ್ತದೆ. ಎಲ್ಲ ಕಾರ್ಯಗಳಿಗೆ ಸ್ಪೂರ್ತಿಯನ್ನು ತುಂಬುತ್ತದೆ. ಇಷ್ಟಲಿಂಗ ಆರಾಧಕನು ಯಾವಾಗಲೂ ಕ್ರಿಯಾಶೀಲನಾಗುತ್ತಾನೆ. ವಂಚನೆ, ಮೋಸ, ದ್ರೋಹ ಮಾಡುವುದಕ್ಕೆ ಅವಕಾಶವಿಲ್ಲ. ಗುರುಕರುಣಿಸಿದ ಇಷ್ಟಲಿಂಗವೇ ನನ್ನ ದೇವರೆಂದು ನಿತ್ಯವು ನಿಷ್ಠೆಯಿಂದ ಪೂಜೆ ಮಾಡಬೇಕು ಎಂದರು. ನಿವೃತ್ತ ಪ್ರಾಚಾರ್ಯ ಐ ಜಿ ಚಂದ್ರಶೇಖರಯ್ಯನವರು ಇಷ್ಟಲಿಂಗ ದೀಕ್ಷೆಯನ್ನು ನಡೆಸಿಕೊಟ್ಟರು. ಹೆಚ್ ಎಸ್ ನಾಗರಾಜ ವಚನಗೀತೆಗಳನ್ನು ಹಾಡಿದರು. ವಿದ್ಯಾರ್ಥಿ ಸುಮಂತ್ ಪೂಜೆಯ ವ್ಯವಸ್ಥೆಯನ್ನು ಮಾಡಿದರು. 18 ಜನ ಇಷ್ಟಲಿಂಗದೀಕ್ಷೆಯನ್ನು ಪಡೆದುಕೊಂಡರು.