ಮಾನವನ ಬದುಕು ಉಜ್ವಲವಾಗಲು ಶಿಕ್ಷಣ ಮತ್ತು ಸಂಸ್ಕಾರದ ದೀಕ್ಷೆಯಾಗಿರಬೇಕುಃ ಯೋಗೀಶ್ವರಿ ಮಾತಾಜಿ

ವಿಜಯಪುರ, ನ.12-ಉಳಿಪೆಟ್ಟು ತಿಂದ ಶಿಲೆ ದೇವರ ಮೂರ್ತಿಯಾಗುವಂತೆ ಬೆಂಕಿ ಕುಲುಮೆಯಲ್ಲಿ ಬೆಂದ ಬಂಗಾರ ಒಡವೆಯಾಗುವಂತೆ ಸಂಸ್ಕರಿಸಿದ ಹಾಲು ಬೆಣ್ಣೆ ತುಪ್ಪವಾಗುವಂತೆ ಮಣ್ಣು ಮಡಿಕೆಯಾದಂತೆ ಮಾನವನ ಬದುಕು ಉಜ್ವಲವಾಗಲು ಶಿಕ್ಷಣ ಮತ್ತು ಸಂಸ್ಕಾರದ ದೀಕ್ಷೆಯಾಗಿರಬೇಕೆಂದು ಬುರಣಾಪುರ ಆರೂಢಾಶ್ರಮದ ಶ್ರೋ.ಭ್ರ.ನಿ.ಷ.ಬ್ರ.ಶ್ರೀ ಯೋಗೀಶ್ವರಿ ಮಾತಾಜಿ ನುಡಿದರು.
ಅವರು ಬುರಣಾಪುರ ಆರೂಢಾಶ್ರಮದಲ್ಲಿ ಬುರಣಾಪುರ, ಬಸವನಗರ, ಮದಭಾವಿ, ಮುಂತಾದ ಊರುಗಳ ಭಕ್ತ ಸಮೂಹದಿಂದ ಮಾತಾಜಿಯವರ 44ನೇ ಗುರುವಂದನಾ ಕಾರ್ಯಕ್ರಮದಲ್ಲಿ ಪಾದಪೂಜೆ ಸತ್ಕಾರ ಹಾಗೂ ಭಕ್ತಿ ನಮನ ಸ್ವೀಕರಿಸಿ ಮಾತನಾಡಿದ ಅವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುತ್ತ ಬಾಳಿನಲ್ಲಿ ಬರುವ ಎಡರು-ತೊಡರು ಪರಿಹರಿಸಿಕೊಳ್ಳಲು ಸದ್ಗುರುಗಳ ಸೇವೆ ಮಾಡುತ್ತ ಜೀವನದಲ್ಲಿ ಉತ್ತಮ ಆಚಾg-ವಿಚಾರ ಶಿಕ್ಷಣ-ಸಂಸ್ಕಾರ-ಸಂಸ್ಕøತಿ ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿ ಉಪನ್ಯಾಸಕರಾಗಿದ್ದ ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಮಾನವೀಯ ಮೌಲ್ಯಗಳೆಲ್ಲ ಶಿಕ್ಷಣ ಸಂಸ್ಕಾರ ಹೊಂದಿದ ಮಾನವನ ಜೀವನ ಪಾವನ. ಅದಕ್ಕೆ ಸದ್ಗುರುಗಳ ಸೇವೆ ದರ್ಶನ ಆಶೀರ್ವಾದ ಅತ್ಯವಶ್ಯ. ಭೂಮಿಯ ಮೇಲೆ ಗುರುವಿಗಿಂತ ಮಿಗಿಲಾದವರಿಲ್ಲ. ಹರ ಮುನಿದರೆ ಗುರು ಕಾಯುವನು ಹರಿ-ಹರ-ಬ್ರಹ್ಮಾದಿಗಳಿಗಿಂತ ಗುರು ಶ್ರೇಷ್ಠನು. ಕಾರಣ ಜೀವನವನ್ನು ಸಾಪಲ್ಯಗೊಳಿಸಿಕೊಳ್ಳಬೇಕಾದರೆ ಸದ್ಗುರುಗಳ ಸೇವೆ ದರ್ಶನ ಆಶೀರ್ವಾದದ ಭಾಗ್ಯ ಸಿಗಬೇಕಾದರೆ ಪೂರ್ವ ಜನ್ಮದ ಸೂಕೃತದ ಫಲವಿರಬೇಕೆಂದು ಉದಾಹರಣೆ ಸಮೇತ ವಿವರಿಸಿದರು.
ಸಾಧಕರಾದ ಶ್ರೀ ಸಂಗೀತಾ ಮಾತಾಜಿಯವರು ಆಶೀರ್ವಚನ ನೀಡಿ ಮುಂದಿನ ದಿನಗಳಲ್ಲಿ ಬುರಣಾಪುರ ಆರೂಢಾಶ್ರಮದಲ್ಲಿ ಹಲವಾರು ಧಾರ್ಮಿಕ ವಿದಿ-ವಿಧಾನ ಪ್ರತಿ ಅಮಾವಾಸೆಗೆ ಆಧ್ಯಾತ್ಮ ಚಿಂತನೆ ಗೋಷ್ಠಿ ಭಕ್ತಿ ಸಂಗೀತ ಸಭೆಗಳು ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧೆಯಿಂದ ಭಾಗವಹಿಸಿ ಪುನಿತರಾಗಬೇಕೆಂದು ಕರೆ ನೀಡಿದರು.
ಯುವಮುಖಂಡ ಅಂತರಾಷ್ಟ್ರೀಯ ಬಸವಸೇನೆಯ ಅಧ್ಯಕ್ಷ ಸೋಮುಗೌಡ ಕಲ್ಲೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಮತಿ ನಿರ್ಮಲಾ ದಾನೇಶ ಅವಟಿ ದಂಪತಿಗಳಿಂದ ಶ್ರೀ ಯೋಗೀಶ್ವರ ಮಾತಾಜಿಯವರ ಪಾದಪೂಜೆ, ಸನ್ಮಾನ ಹಾಗೂ ಗುರುವಂದನಾ ಕಾರ್ಯಕ್ರಮ ನೆರವೇರಿತು.
ವೇದಿಕೆಯಲ್ಲಿ ಅನೀಲ ಶರಣರು, ಲಕ್ಷ್ಮಣ ಶರಣರು, ಚಿದಾನಂದ ಯಳಮೇಲಿ, ನಿಂಗಪ್ಪ ಸಂಗಾಪುರ, ಪುಂಡಲೀಕ ಕಾಖಂಡಕಿ, ಸಿದ್ದು ಐನಾಪುರ (ತಡಲಗಿ), ರಾಚಪ್ಪ ಕೊನಳ್ಳಿ, ಸಮಾಜ ಸೇವಕ ವಿಜಯಕುಮಾರ, ದಾನಮ್ಮ ಕುಂಚನೂರ, ಶಿವಗಂಗಾ ಕಟ್ಟಿಮನಿ ಪ್ರಾರ್ಥಿಸಿದರು. ಶರಣಬಸು ಕೋನಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಬಬಲೇಶ್ವರ ನಿರೂಪಿಸಿದರು. ಕವಿತಾ ಮಠಪತಿ ವಂದಿಸಿದರು. ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.