ಮಾನವನ ಅಭಿವೃದ್ಧಿಗೆ ಶಿಕ್ಷಣ ಬಹುಮುಖ್ಯ:ಶಿವಶರಣಪ್ಪ ಎಲ್. ಕುಂಬಾರ

ಕಲಬುರಗಿ:ಫೆ.20: ಕುಂಬಾರ ಸಮಾಜ ಹಿಂದುಳಿದ ಸಮಾಜವಾಗಿದ್ದು, ನಮ್ಮ ಸಮಾಜ ಪ್ರಗತಿ ಹೊಂದಬೇಕಾದರೆ ಶಿಕ್ಷಣ ಬಹುಮುಖ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಜೀವನದಲ್ಲಿ ಪ್ರಗತಿ ಕಾಣಬೇಕಿದೆ ಎಂದು ಶ್ರೀ ಸಂತಕವಿ ಸರ್ವಜ್ಞ ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪÀ ಎಲ್. ಕುಂಬಾರ ಹೇಳಿದರು.
ಸೋಮವಾರ ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಸಂತಕವಿ ಸರ್ವಜ್ಞನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತ್ರಿಪದಿ ಕವಿ ಶ್ರೀ ಸಂತಕವಿ ಸರ್ವಜ್ಞರು ಮಹಾ ಮಾನವತಾವಾದಿಯಾಗಿದ್ದರು. ಆವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕಿದೆ. ಇಂದು 504ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಕುಂಬಾರ ಸಮಾಜ ಇನ್ನಷ್ಟು ಜಾಗೃತರಾಗಬೇಕಿದೆ ಎಂದ ಅವರು ಕುಂಬಾರ ಸಮಾಜದವರಿಗೆ ಕಲಬುರಗಿ ನಗರದಲ್ಲಿ “ಸರ್ವಜ್ಞ ಭವನ” ನಿರ್ಮಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಚಿಂಚೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಮೂರು ಅವರು ಮಾತನಾಡಿ, ನೀವು ಒಂದು ಕ್ಷೇತ್ರದಲ್ಲಿ ಜ್ಞಾನ ಪಡೆದರೆ ಸಾಲದು, ಎಲ್ಲಾ ಕ್ಷೇತ್ರದಲ್ಲಿ ಜ್ಞಾನ ಪಡೆದಾಗ ಮಾತ್ರ ಸರ್ವಜ್ಞನಾಗಲು ಸಾಧ್ಯ ಎಂದ ಅವರು ಸರ್ವಜ್ಞನರು ಬಾಲ್ಯದಿದಲೆ ತುಂಬಾ ಚುರುಕಾಗಿದ್ದರು. ದೇವರನ್ನು ಕಾಣಲು ದೇವಾಲಯಕ್ಕೆ ಹೋಗಬೇಕಿಲ್ಲ, ಕಾಯಕದಲ್ಲಿಯೇ ದೇವರು ಕಾಣಬೇಕು ಎಂದರು.
ಸರ್ವಜ್ಞರು ಜೀವನದುದ್ದಕ್ಕು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಮೇಲು-ಕೀಳು ಎನ್ನದೆ ಜ್ಞಾನವೆ ದೊಡ್ಡದು ಎಂದು ನಂಬಿದವರು. ಹೀಗಾಗಿ ಹೆಚ್ಚಿನ ಜ್ಞಾನಾರ್ಜನೆ ಪಡೆಯುವತ್ತ ಸಮುದಾಯದ ಯುವ ಜನತೆ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.
ಇದಕ್ಕು ಮುನ್ನ ವೇದಿಕೆಯಲ್ಲಿ ಸಂತಕವಿ ಸರ್ವಜ್ಞರವರ ಭಾವಚಿತ್ರಕ್ಕೆ ಗಣ್ಯರು ಪುμÁ್ಪರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ ನಿಸಾರ ಅಹ್ಮದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಮಹಿಳಾ ಪೊಲೀಸ್ ಠಾಣೆಯ ಸಿ.ಪಿ.ಐ ಶಿವಶಂಕರ ಸಾಹುಕಾರ, ಕುಂಬಾರ ಸಮಾಜದ ಮುಖಂಡರಾದ ಪ್ರಭು ಕುಂಬಾರ, ಶಂಕರಶೆಟ್ಟಿ ಕುಂಬಾರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಗ್ರೇಡ್-1 ತಹಶೀಲ್ದಾರ ಮಧುರಾಜ್ ಸ್ವಾಗತಿಸಿದರು. ಡಾ. ಎಸ್.ಎಂ. ಭಕ್ತಕುಮಾರ ನಿರೂಪಿಸಿದರು. ಬಲಭೀಮ ತಂಡದಿಂದ ಸುಗಮ ಸಂಗೀತ ನಡೆಯಿತು.